- ಡಾ. ರೋಹಿಣಾಕ್ಷ ಶಿರ್ಲಾಲು
ರಾಷ್ಟ್ರಭಕ್ತರು , ಸಂವಿಧಾನ ರಕ್ಷಕರು , ಅಂಬೇಡ್ಕರ್ ವಾದಿಗಳು ಎಲ್ಲರೂ ಸಂಭ್ರಮಿಸಬೇಕಾದ ದಿನವಿದು. ಜಮ್ಮು ಮತ್ತು ಕಾಶ್ಮೀರವನ್ನು ಅಖಂಡ ಭಾರತದ ಉಳಿದೆಲ್ಲಾ ರಾಜ್ಯಗಳಂತೆ ವಿಲೀನಗೊಂಡು ಐಕ್ಯತೆಯ ಸಂದೇಶವನ್ನು ಸಾರುವ ಅವಕಾಶ ಇತ್ತು. ಆದರೆ ಪಂ. ಜವಾಹರಲಾಲ್ ನೆಹರು ಅವರ ಮೂರ್ಖತನದಿಂದ ಇಂದಿನವರೆಗೂ ಸಮಸ್ಯೆಯ ಮೂಲವಾಗಿ ಉಳಿಯಿತು. ಸಂವಿಧಾನ ರಚನೆ ಮಾಡಿದ ಅಂಬೇಡ್ಕರ್ , ಕಾನೂನು ಮಂತ್ರಿಯಾಗಿ ಕೂಡ ನೆಹರು ಬಾಲಿಶತನದ ತೀರ್ಮಾನವನ್ನು ಒಪ್ಪಿರಲಿಲ್ಲ. 370 ನೇ ವಿಧಿ ಭಾರತದ ಹಿತಕ್ಕೆ ವಿರುದ್ದ ಎಂದು ಅಂಬೇಡ್ಕರ್ ಹೇಳಿದ್ದರು. ನಾನಿದನ್ನು ಒಪ್ಪಲಾರೆ ಎಂದು ಪ್ರತಿಭಟಿಸಿದ್ದರು. ಹೀಗಿದ್ದರೂ ಅಂದು ಅಂಬೇಡ್ಕರ್ ಧ್ವನಿ ಗೆಲ್ಲಲು ಸಾಧ್ಯವಾಗಲಿಲ್ಲ. ಶ್ಯಾಮ್ ಪ್ರಸಾದ್ ಮುಖರ್ಜಿಯವರು ಒಂದು ದೇಶಕ್ಕೆ ಎರಡು ಧ್ವಜ , ಎರಡು ಸಂವಿಧಾನ ಸಾಧ್ಯವಿಲ್ಲ ಎಂದು ಸಾರಿಹೇಳಿದ್ದರು. ದೇಶವನ್ನು ಆಳಿದ ಕಾಂಗ್ರೆಸ್ ಪಕ್ಷ ಹಾಗೂ ಕಾಂಗ್ರೆಸ್ ಪ್ರಾಯೋಜಿತ ಕಮ್ಯುನಿಸ್ಟ್ ಬುದ್ಧಿಜೀವಿಗಳ ಪ್ರತ್ಯೇಕತೆಯ ದಾಳವಾಗಿ 370 ವಿಧಿ ನಿರಂತರ ಬಳಕೆಯಾಯಿತು. ಕಾಶ್ಮೀರಿ ಪಂಡಿತರು ತಮ್ಮ ನೆಲ ಕಳೆದುಕೊಂಡರು. ಮೂಲಭೂತವಾದ , ಪ್ರತ್ಯೇಕವಾದ ವಿಜೃಂಬಿಸಿತು. ಇದರಿಂದ ಕಾಶ್ಮೀರಿಗಳ ಹಿತವೂ ಸಾಧನೆಯಾಗಲಿಲ್ಲ. ಭಾರತದ ಹಿತವೂ ಸಾಧ್ಯವಾಗಲಿಲ್ಲ. ಇಂದಿಗೂ ಪಾಕಿಸ್ತಾನದ ದ್ವನಿಯಲ್ಲಿ ಮಾತನಾಡುವ ರಾಜಕಾರಣಿಗಳು ಈ ದೇಶದಲ್ಲಿದ್ದಾರೆ.
ಇಂದಿನ ದಿನ ದಶಕಗಳ ಪ್ರತ್ಯೇಕತೆಯ ನೀತಿಗೆ ಕೊನೆಹಾಡುವಲ್ಲಿ ಒಂದು ನಿರ್ಧಾರವನ್ನು ತೆಗೆದುಕೊಂಡಿದೆ. 370 ನೇ ವಿಧಿ ರದ್ಧತಿಗೆ ನಾಂದಿಹಾಡಿದೆ. ಆ ಮೂಲಕ ರಾಷ್ಟ್ರದ ಐಕ್ಯತೆಗೆ ಇದ್ದ ತೊಡಕು ನಿವಾರಣೆಯಾಗಿದೆ. ಅಂಬೇಡ್ಕರ್ ಅವರ ದೂರದೃಷ್ಟಿತ್ವಕ್ಕೆ ಇಂದು ಗೆಲುವಾಗಿದೆ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಬಲಿದಾನ ಸಾರ್ಥಕವಾಯಿತು. ಭಾರತ ಮಾತೆಯ ಸಿಂಧೂರ ಕ್ಕೆ ಅಂಟಿದ್ದ ಕಳಂಕ ನಿವಾರಣೆಯಾಯಿತು.
ಭಾರತ್ ಮಾತಾ ಕೀ ಜಯ್