Quantcast
Channel: News – Vishwa Samvada Kendra
Viewing all articles
Browse latest Browse all 1745

ತ್ರಿಪುರಾದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕ

$
0
0
ಸಾಂದರ್ಭಿಕ ಚಿತ್ರ

ಅಗರ್ತಲ: ತ್ರಿಪುರಾದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕವಾಗಿದ್ದು, ಗಂಡು ಹಾಗೂ ಹೆಣ್ಣುಮಕ್ಕಳ ಅನುಪಾತವು 1,000:1,011 ಇದೆ.

ನೀತಿ ಆಯೋಗದ ಪ್ರಕಾರ, 2013–15ರ ಅವಧಿಯಲ್ಲಿ ಭಾರತದಲ್ಲಿ ಗಂಡು– ಹೆಣ್ಣು ಅನುಪಾತವು 1,000:900 ಇತ್ತು. ಜೊತೆಗೆ ದೇಶದಲ್ಲಿ ಲಿಂಗಾನುಪಾತದಲ್ಲಿ ಮಹಿಳೆಯರ ಸಂಖ್ಯೆ ಇಳಿಕೆಯಾಗುತ್ತಿದೆ. ಆದರೆ ತ್ರಿಪುರಾದಲ್ಲಿ ಮಾತ್ರ ಇದಕ್ಕೆ ವಿರುದ್ಧವಾಗಿದೆ. ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್‌ ಮ್ಯಾನೇಜ್‌ಮೆಂಟ್‌ ರಿಸರ್ಚ್‌ ಸಂಸ್ಥೆಯು ನಡೆಸಿದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (ಎನ್‌ಎಫ್‌ಎಚ್‌ಎಸ್‌–5) ಪ್ರಕಾರ, ತ್ರಿಪಾರದಲ್ಲಿ ಲಿಂಗಾನುಪಾತ ಪ್ರಕಾರ ಪ್ರತಿ 1000 ಪುರುಷರಿಗೆ 1,011 ಮಹಿಳೆಯರಿದ್ದಾರೆ. ಇಲ್ಲಿ 2015–16ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಈ ಅನುಪಾತವು 1,000:998 ಇತ್ತು. ಈಗ ಮಹಿಳೆಯರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ತ್ರಿಪುರಾದ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿಯೇ ಮಹಿಳೆಯರ ಸಂಖ್ಯೆ ಹೆಚ್ಚಿದ್ದು, ನಗರ ಪ್ರದೇಶದಲ್ಲಿ ಪ್ರತಿ 1000 ಪುರುಷರಿಗೆ 956 ಹೆಣ್ಣು ಮಕ್ಕಳಿದ್ದಾರೆ. ಜನರ ಸಾಮಾಜಿಕ–ಆರ್ಥಿಕ ಸ್ಥಿತಿಯೂ 2015–16ಕ್ಕೆ ಹೋಲಿಸಿದರೆ ಉತ್ತಮ ಮಟ್ಟಕ್ಕೇರಿದೆ. ಪ್ರಸಕ್ತ ವರ್ಷದಲ್ಲಿ ರಾಜ್ಯದ ಶೇ. 98.2 ಮನೆಗಳಿಗೆ ವಿದ್ಯುತ್‌ ಸೌಲಭ್ಯ ದೊರಕಿದೆ. ಶೌಚಾಲಯ ವ್ಯವಸ್ಥೆಯು ಶೇ. 73.6 ಪ್ರಮಾಣದಲ್ಲಿದೆ ಎಂದು ತ್ರಿಪುರಾದ ಶಿಕ್ಷಣ ಸಚಿವ ರತನ್‌ ನಾಥ್‌ ತಿಳಿಸಿದ್ದಾರೆ.

The post ತ್ರಿಪುರಾದಲ್ಲಿ ಮಹಿಳೆಯರ ಸಂಖ್ಯೆ ಪುರುಷರಿಗಿಂತ ಅಧಿಕ first appeared on Vishwa Samvada Kendra.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>