Quantcast
Viewing all articles
Browse latest Browse all 1745

ಆರೆಸ್ಸೆಸ್ ನ ನೂತನ ಸರಕಾರ್ಯವಾಹರಾಗಿ ಚುನಾಯಿತರಾದ ದತ್ತಾತ್ರೇಯ ಹೊಸಬಾಳೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ಎಬಿಪಿಎಸ್ ನಲ್ಲಿ, ಆರೆಸ್ಸೆಸ್ ನ ನೂತನ ಸರಕಾರ್ಯವಾಹರಾಗಿ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಚುನಾಯಿತರಾಗಿದ್ದಾರೆ. ದತ್ತಾಜಿಯವರು ಇಲ್ಲಿಯ ತನಕ ಸಹ ಸರಕಾರ್ಯವಾಹರಾಗಿ ಮಾರ್ಗದರ್ಶನ ಮಾಡುತ್ತಿದ್ದರು.

Image may be NSFW.
Clik here to view.
ಆರೆಸ್ಸೆಸ್ ಸರಕಾರ್ಯವಾಹ ಶ್ರೀ ದತ್ತಾತ್ರೇಯ ಹೊಸಬಾಳೆ

ಆರೆಸ್ಸೆಸ್ ನ‌ ನೂತನ ಸರಕಾರ್ಯವಾಹರಾಗಿ ಚುನಾಯಿತರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರು ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದವರು. ದತ್ತಾಜಿ ಎಂದೇ ಸಂಘದ ವಲಯದಲ್ಲಿ ಇವರನ್ನು ಗುರುತಿಸಲಾಗುತ್ತದೆ. 1954 ರ ಡಿಸೆಂಬರ್ ‌1 ರಂದು ಜನಿಸಿದ ಹೊಸಬಾಳೆ ಅವರು ತಮ್ಮ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸಾಗರದಲ್ಲಿ ಪಡೆದರು. ಕಾಲೇಜು ಶಿಕ್ಷಣಕ್ಕಾಗಿ ಬೆಂಗಳೂರನ್ನು ಆಯ್ಕೆ ಮಾಡಿಕೊಂಡ ದತ್ತಾತ್ರೇಯ ಅವರು ವಿದ್ಯಾಭ್ಯಾಸ ಮಾಡಿದ್ದು ನ್ಯಾಷನಲ್ ಕಾಲೇಜಿನಲ್ಲಿ. ಅಲ್ಲಿ ಅವರಿಗೆ ಸಿಕ್ಕಿದ್ದು ಹೆಚ್. ನರಸಿಂಹಯ್ಯನವರ ಒಡನಾಟ ಮತ್ತು ಮಾರ್ಗದರ್ಶನ. ಸ್ನಾತಕೋತ್ತರ ಪದವಿಯನ್ನು ಇಂಗ್ಲಿಷ್ ಲಿಟರೇಚರ್ ನಲ್ಲಿ ಹೊಸಬಾಳೆಯವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಗಳಿಸಿದರು.

ಹೊಸಬಾಳೆಯವರ ಆರೆಸ್ಸೆಸ್ ಪ್ರವೇಶ ಆಗಿದ್ದು 1968 ರಲ್ಲಿ. 1972 ರಲ್ಲಿ ವಿದ್ಯಾರ್ಥಿ ಸಂಘಟನೆಯಾದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಸದಸ್ಯರಾಗಿ ಅದರ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ 15 ವರ್ಷ ವಿದ್ಯಾರ್ಥಿ ಆಂದೋಲನವನ್ನು ರೂಪಿಸಿದವರು ಹೊಸಬಾಳೆಯವರು. ಸಂಘಟನೆ, ಸಾಮಾಜಿಕ ಸಮರಸತೆ, ಸಾಹಿತ್ಯ ಮತ್ತು ಕಲೆ ಹೊಸಬಾಳೆಯವರ ಆಸಕ್ತಿಯ ಕ್ಷೇತ್ರಗಳು. ಉತ್ತಮ ವಾಗ್ಮಿಗಳು, ಸಂಘಟನಾಕಾರರು, ಆಗಿರುವ ದತ್ತಾಜಿ ಹಲವು ಲೇಖನಗಳನ್ನು ಬರೆದಿದ್ದಾರೆ.

ಕಾಲೇಜು ದಿನಗಳಲ್ಲಿ ಹಾಗೂ ನಂತರದ ದಿನಗಳಲ್ಲೂ ದತ್ತಾಜಿಯವರಿಗೆ ಕನ್ನಡದ ಸಾಹಿತಿಗಳು, ಪತ್ರಕರ್ತರು ಮತ್ತು ಕಲಾವಿದರೊಂದಿಗೆ ನಿಕಟ ಸಂಪರ್ಕವಿದೆ. ವಿಶೇಷವಾಗಿ ಗೋಪಾಲಕೃಷ್ಣ ಅಡಿಗ ಮತ್ತು ಖ್ಯಾತ ಪತ್ರಕರ್ತ ವೈಯೆನ್ಕೆ ಅವರುಗಳ ಜೊತೆಗೆ ಹೊಸಬಾಳೆ ಅವರದ್ದು ವಿಶೇಷ ಒಡನಾಟ.

ಇಂದಿರಾಗಾಂಧಿ ಅವರು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹೊಸಬಾಳೆಯವರು ಒಂದು ವರ್ಷಕ್ಕೂ ಹೆಚ್ಚು ಕಾಲ ಮೀಸಾ ಬಂಧನಕ್ಕೆ ಒಳಪಟ್ಟಿದ್ದರು. ನಂತರದ ದಿನಗಳಲ್ಲಿ ಆರೆಸ್ಸೆಸ್ ನ ಹೊ ವೆ ಶೇಷಾದ್ರಿಯವರು ತುರ್ತು ಪರಿಸ್ಥಿತಿಯ ಕುರಿತಾದ ‘ಭುಗಿಲು’ ಪುಸ್ತಕದ ಕೆಲಸದಲ್ಲಿ ದತ್ತಾಜಿ ಕಾರ್ಯ ನಿರ್ವಹಿಸಿದ್ದಾರೆ.

ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಸಂಘಟನೆಯಾದ “ವೋಸಿ” (World Organization for Student and Youth) ಹಾಗೂ ಇನ್ನಿತರ ಸಂಘಟನೆಗಳು, ಕನ್ನಡದ ಮಾಸ ಪತ್ರಿಕೆ “ಅಸೀಮಾ” ದ ಸಂಸ್ಥಾಪಕರು ದತ್ತಾಜಿ.

2004 ಕ್ಕೆ ಮಾತೃ ಸಂಘಟನೆಯಾದ ಆರೆಸ್ಸೆಸ್ ಗೆ ಮರಳಿದ ಹೊಸಬಾಳೆಯವರು ಅಖಿಲ ಭಾರತೀಯ ಸಹ ಬೌದ್ಧಿಕ ಪ್ರಮುಖ್ ಹೊಣೆ ಹೊತ್ತರು. ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ)ರಾಗಿ ಆಯ್ಕೆ ಅಗುವ ಮೊದಲು ದತ್ತಾಜಿಯವರು ಆರೆಸ್ಸೆಸ್ ನ ಸಹ ಸರಕಾರ್ಯವಾಹರಾಗಿದ್ದರು.




Viewing all articles
Browse latest Browse all 1745

Trending Articles