
ನವದೆಹಲಿ: ಪ್ರಾಣಾಯಾಮ, ಯೋಗ ಮತ್ತು ಗಾಯತ್ರೀ ಮಂತ್ರ ಪಠಣದಿಂದ ಕೋರೋನಾವನ್ನು ಗುಣಪಡಿಸಬಹುದು ಎಂದು ಕುರಿತು ದೇಶದ ಪ್ರತಿಷ್ಠಿತ ಸಂಸ್ಥೆ ಏಮ್ಸ್ (ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್) ಸಂಶೋಧನೆ ನಡೆಸುತ್ತಿದೆ.
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು(ಡಿಎಸ್‌ಟಿ) ಪ್ರಯೋಗಾತ್ಮಕ ಅಧ್ಯಯನಕ್ಕೆ ನಿಯೋಜಿಸಿದ್ದು, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಈ ಕುರಿತು ಟ್ರಯಲ್ ಆರಂಭಿಸಿದೆ.
ಇದೀಗ 20 ರೋಗಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅವರನ್ನು ಎರಡು ತಂಡ ಮಾಡಲಾಗಿದೆ. ಒಂದು ತಂಡಕ್ಕೆ ಚಿಕಿತ್ಸೆ, ಇನ್ನೊಂದು ತಂಡಕ್ಕೆ ಚಿಕಿತ್ಸೆಯ ಜೊತೆಗೆ ಯೋಗ ಮತ್ತು ಪ್ರಾಣಾಯಮ ಅಭ್ಯಾಸ ಮಾಡಿಸಲು ಮುಂದಾಗಿದೆ. 14 ದಿನಗಳ ಚಿಕಿತ್ಸಾ ಕ್ರಮ ಅನುಸರಿಲಿದ್ದು, ಪ್ರತೀದಿನ ಬೆಳಿಗ್ಗೆ ಮತ್ತು ಸಂಜೆ ಒಂದು ಗಂಟೆ ಅವಧಿಯ ಪ್ರಾಣಾಯಾಮ ಮಾಡಿಸಲಾಗುವುದು. ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚಳವಾಗುತ್ತಿದೆ ಎಂಬುದನ್ನು ಲೆಕ್ಕ ಹಾಕಲಾಗುವುದು ಎಂದು ಏಮ್ಸ್ ಸಹಾಯಕ ಪ್ರಾಧ್ಯಾಪಕಿ ಡಾ. ರುಚಿ ದುವಾ ತಿಳಿಸಿದ್ದಾರೆ.
ಕೊರೋನಾ ವೈರಸ್‌ನಿಂದ ಉಂಟಾಗುವ ಆತಂಕ ನಿವಾರಣೆಗೆ ಯೋಗ, ಧ್ಯಾನ ಹಾಗೂ ಪ್ರಾಣಾಯಾಮ ಮಾಡಬೇಕು ಎಂದು ಹಾರ್ವರ್ಡ್ ವಿವಿ ಸಂಶೋಧನೆ ಕಳೆದ ವರ್ಷ ಹೇಳಿಕೆ ನೀಡಿತ್ತು. ಇದೀಗ ಒಂದು ವರ್ಷದ ನಂತರ ಭಾರತ ಸರ್ಕಾರ ಕ್ಲಿನಿಕಲ್ ಟ್ರಯಲ್ ನಡೆಸುವ ಮಹತ್ತ್ವದ ಹೆಜ್ಜೆ ಇಟ್ಟಿದೆ.
ಸಹಕಾರ: ದಿ ಹಿಂದು