
ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಸಿದ್ದಣ್ಣಗೌಡ ಗಡಿಗುಡಾಳರ (92) ನಿಧನಕ್ಕೆ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ. ನಾಗರಾಜ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ನಮ್ಮನ್ನು ಅಗಲಿರುವ ಹಿರಿಯ ಚೇತನ ಶ್ರೀ ಸಿದ್ದಣ್ಣಗೌಡ ಗಡಿಗುಡಾಳರು ಕರ್ನಾಟಕ ಉತ್ತರ ಪ್ರಾಂತದಲ್ಲಿ ಸಂಘಕಾರ್ಯ ಬೆಳಸುವಲ್ಲಿಪ್ರಮುಖ ಪಾತ್ರ ವಹಿಸಿದವರು.ಅವರ ಆತ್ಮೀಯತೆ, ಕಾರ್ಯದಲ್ಲಿನ ಕಳಕಳಿಅವರ, ಮನೆಯಲ್ಲಿನ ಆತಿಥ್ಯಸದಾ ಸ್ಮರಣೀಯ.ಅವರ ಚೇತನಕ್ಕೆ ಸಂಘದ ಶ್ರದ್ಧೆಯ ನಮನಗಳು.
ವಿ. ನಾಗರಾಜ್, ಕ್ಷೇತ್ರೀಯ ಸಂಘಚಾಲಕ್,

ಆರೆಸೆಸ್ಸ್ ನ ಹಿರಿಯ ಸ್ವಯಂಸೇವಕರು, ಈ ಹಿಂದೆ ಕರ್ನಾಟಕ ಪ್ರಾಂತ ಸಹಸಂಘಚಾಲಕರು ಹಾಗೂ ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕರಾಗಿದ್ದ ಶ್ರೀ ಸಿದ್ಧನಗೌಡ ಗಡಿಗುಡಾಳ್ (92) ಅವರು ಇಂದು ನಿಧನರಾದರು. ಅವರು ಭಾರತೀಯ ಕಿಸಾನ್ ಸಂಘದ ರಾಜ್ಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.