Quantcast
Viewing all articles
Browse latest Browse all 1745

ಕಳೆದ 30 ವರ್ಷದಿಂದ ರೂ. 1 ಕ್ಕೆ ಇಡ್ಲಿ ನೀಡುವ ಅನ್ನಪೂರ್ಣೆ: ಕೋಯಮತ್ತೂರಿನ ಕಮಲತ್ತಲ್

Image may be NSFW.
Clik here to view.
ಚಿತ್ರ ಕೃಪೆ: ದಿ. ಹಿಂದು

ಪ್ರತಿಯೊಬ್ಬರಿಗೂ ಆಹಾರ, ಔಷದಿ,ಶಿಕ್ಷಣ ಇವಿಷ್ಟು ಉಚಿತವಾಗಿಯೇ ಸಿಗಬೇಕು ಎನ್ನುವುದು ನಮ್ಮ ಪರಂಪರೆ ಹೇಳಿಕೊಟ್ಟ ಪಾಠ. ಆದರೆ ಇಂದು ಅದೇ ಬಹುದೊಡ್ಡ ಉದ್ಯಮವಾಗಿ ಬೆಳೆದಿದೆ. ಅತೀ ಹೆಚ್ಚು ಕೊಟ್ಟು ತಿನ್ನುವುದು ಅಂತಸ್ತಿನ ಪ್ರಶ್ನೆಯಾಗಿದೆ. ಇದೆಲ್ಲದರ ಮದ್ಯದಲ್ಲಿ 1 ರೂಪಾಯಿಗೆ ಇಡ್ಲಿ ಸಿಗುತ್ತದೆ ಎಂದರೆ ನೀವು ನಂಬುತ್ತೀರಾ?

ಖಂಡಿತಾ ನಂಬಲೇಬೇಕು. ಯಾಕಂದರೆ ತಮಿಳುನಾಡಿನ ಕೋಯಮತ್ತೂರು ಜಿಲ್ಲೆಯ ಕಮಲತ್ತಲ್ ಎನ್ನುವ ಅಜ್ಜಿಯೋರ್ವರು ಈ ವಿಷಯಕ್ಕಾಗಿ ಸುದ್ದಿಯಲ್ಲಿದ್ದಾರೆ. ಸರಕಾರದ ದುಡ್ಡಿನಲ್ಲಿ ಕ್ಯಾಂಟೀನ್ ತೆರೆದು ಅದರ ಸಾಧನೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವ ಅಬ್ಬರದ ಈ ಕಾಲದಲ್ಲಿ ತಾನು ಕಷ್ಟಪಟ್ಟು ಎಲೆಮರೆಯ ಕಾಯಿಯಂತೆ ಅನೇಕರಿಗೆ ಅನ್ನದಾತ ಳಾಗಿದ್ದಾಳೆ ಈ 80 ವರ್ಷ ವಯಸ್ಸಿನ ಅಜ್ಜಮ್ಮ.

“ಈ ಕೆಲಸಕ್ಕೆ ನನಗೆ ತಗಲುವುದು 5೦ ಪೈಸೆ ಮಾತ್ರ. ಆದರೆ ಈಗ ಪದಾರ್ಥಗಳು ದುಬಾರಿಯಾದ್ದರಿಂದ 1 ರೂಪಾಯಿಗೆ ಮಾರಾಟ ಮಾಡುತ್ತೇನೆ. ಎಲ್ಲರೂ ನನ್ನ ಆಹಾರವನ್ನು ಮೆಚ್ಚುತ್ತಾರೆ. ಸಾಂಬಾರ್ ಮತ್ತು ಚಟ್ನಿ ಚನ್ನಾಗಿದೆ ಎನ್ನುತ್ತಾರೆ. ಅದು ನನಗೆ ಹೆಮ್ಮೆ.”

ಕಮಲತ್ತಲ್

ಕಳೆದ 30 ವರ್ಷಗಳಿಂದ ಸೂರ್ಯನಿಗಿಂತ ಮೊದಲೇ ಬೆಳಕು ಕಾಣುತ್ತಿರುವ ಈಕೆಯ ಗುಡಿಸಲಿನಲ್ಲಿ ತನಗೆ 80ರ ಇಳಿ ವಯಸ್ಸಾದರೂ ಕಟ್ಟಿಗೆಯ ಒಲೆಯ ಮುಂದು ಕೂತು ನಿತ್ಯ 1000 ನಯವಾದ ಇಡ್ಲಿಗಳನ್ನು ಮಾಡುವುದಲ್ಲದೇ ಅದಕ್ಕೆ ಬೇಕಾದ ಚಟ್ನಿ ಮತ್ತು‌ ಸಾಂಬಾರನ್ನು‌ ಸಿದ್ಧಪಡಿಸುವ  One man army ಇವರು ಅದನ್ನು ಮಾರುವುದು ಕೇವಲ ಒಂದು ರೂಪಾಯಿಗೆ!

ನಿತ್ಯ ಕಷ್ಟಪಟ್ಟು ದುಡಿಯುವ ಕೂಲಿ ಕಾರ್ಮಿಕರು, ಬಡವರು ಮತ್ತು ಅವರ ಕುಟುಂಬಗಳು ಹಸಿದು ಮಲಗಬಾರದೆಂಬ ಉದ್ದೇಶದಿಂದ ಯಾವುದೇ ಲಾಭದ ಉದ್ದೇಶವಿಲ್ಲದೇ ಈ ಕೆಲಸ  ಶುರುಮಾಡಿದ ಕಮಲತ್ತಲ್ ಇಂದು ಅಕ್ಕಪಕ್ಕದ ಗ್ರಾಮದ ಬಡವರ ಪಾಲಿಗೂ ನಿಜವಾದ ಅನ್ನದಾತೆ ಅನ್ನಪೂರ್ಣೆಯಾಗಿದ್ದಾಳೆ.

‘ಇಡ್ಲಿ ಅಮ್ಮ’ನೆಂದೇ ಖ್ಯಾತಳಾಗುತ್ತಿರುವ ಕಮಲಾಥಾಲ್ ಅವರ ಕಾರ್ಯ ಎಲ್ಲಾ ಕಡೆ ಸುದ್ದಿಯಾಗುತ್ತಿದ್ದಂತೆ ತುಂಬಾ ಜನರು ಮೆಚ್ಚಿ ಕೊಂಡಾಡಿದ್ದಾರೆ. ಆದರೆ ಅಷ್ಟೆ ನಿಲ್ಲದೇ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಆನಂದ್ ಮಹೀಂದ್ರಾ ಕಂಪೆನಿಯವರು ಈ ಮಹಾತಾಯಿಗೆ ಇಂಧನ ಒಲೆ ಒದಗಿಸಿಕೊಡುವ ಹಾಗೂ ಆಕೆಗೆ ಸ್ವಂತ ಮನೆ ಹಾಗೂ ಅಡುಗೆಗೆ ಮತ್ತು ವ್ಯಾಪಾರಕ್ಕೆ ಅನುಕೂಲವಾಗುವಂತೆ ಕಟ್ಟಡ ನಿರ್ಮಿಸಿಕೊಡಲು ಮುಂದೆಬಂದಿದ್ದಾರೆ.

“ಪಕ್ಕದ ಹಳ್ಳಿಗೆ ಹೋದರೆ ಒಂದು ದೋಸೆಗೆ 20 ರೂಪಾಯಿ, ಒಂದು ಇಡ್ಲಿಗೆ 6 ರೂಪಾಯಿ. ಆದರೆ ಇಲ್ಲಿ ಒಂದು ರೂಪಾಯಿಗೆ ಜನರಿಗೆ ಸಿಗುತ್ತಿದೆ. ಸುತ್ತಲಿನ 2 ಕಿ.ಮಿ ದೂರದಿಂದ ಜನರು ಬರುತ್ತಾರೆ. 30 ರೂಪಾಯಿ ಕೊಟ್ಟು ಖರೀದಿಸಿದರೆ  ಮೂರು ಜನ ತೃಪ್ತಿಯಾಗಿ ತಿನ್ನುವಷ್ಟು ಇಲ್ಲಿ ಸಿಗುತ್ತದೆ. ಹೀಗಾಗಿ ತುಂಬಾ ಜನ ಬರುತ್ತಾರೆ‌. ಮತ್ತು ಈಕೆಗೆ ಶುಭ ಹಾರೈಸುತ್ತಾರೆ. ತಿಂದವರು ಹಣ ಕೊಟ್ಟರೋ, ಬಿಟ್ಟರೋ ಈ ಅಜ್ಜಮ್ಮ ಕೇಳುವುದಿಲ್ಲ. ಕೊಟ್ಟಷ್ಟು ಸ್ವೀಕರಿಸುತ್ತಾರೆ. 10 ರೂಪಾಯಿಯಷ್ಟು ತಿನ್ನುವ ಜನರಿದ್ದಾರೆ ಮತ್ತು 10 ಇಡ್ಲಿ ತಿಂದು 5 ರೂಪಾಯಿ ಕೊಡುವ ಜನರೂ ಇದ್ದಾರೆ. ಈಕೆ ಇರುವ ವರೆಗೆ ಬಹಳಷ್ಟು ಜನ ಹೊಟ್ಟೆ ತುಂಬಾ ತಿನ್ನುತ್ತಾರೆ ಗ್ರಾಹಕರು.

ತಾನು ಮಾಡುವ ಕೆಲಸ ಬಗ್ಗೆ ಹಮ್ಮೆ ಪಡುವ ಕಮಲಾತ್ತಲ್ ತನ್ನ ಅಡಿಗೆಯ ಬಗ್ಗೆ ಜನರ ಒಳ್ಳೆಯ ಪ್ರತಿಕ್ರಿಯೆಗಳನ್ನು ಮುಕ್ತ ಮನಸ್ಸಿನಿಂದ ಸ್ವಾಗತಿಸುತ್ತಳೆ. ಯಾರಾದರೂ ಕಡಿಮೆ ಬೆಲೆಯ ಬಗ್ಗೆ ವಿಚಾರಿಸಿದರೆ ‘ಜನರು ಬರಲಿ, ತಿನ್ನಲಿ’ ಎಂದಷ್ಟೆ ಹೇಳಿ ಸುಮ್ಮನಾಗುತ್ತಾಳೆ ಈ ಮಹಾತಾಯಿ.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>