
ಬೆಂಗಳೂರು, ಏಪ್ರಿಲ್ 14: ಹಲವು ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಈ ಬಾರಿಯ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆ.
ಬೆಂಗಳೂರಿನ ಸಿದ್ದಾಪುರ ಬಳಿಯ ಹೊಂಬೇಗೌಡ ಸೇವಾಬಸ್ತಿ(ಸ್ಲಂ) ಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಜಾಗರಣ ಪ್ರಕಲ್ಪವು ಅಂಬೇಡ್ಕರ್ ಜಯಂತಿಯನ್ನು ಆಚರಿಸಿತು. ಈ ನಿಮಿತ್ತ ಸೇವಾಬಸ್ತಿಯ 100ಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ 300 ನೋಟ್ ಬುಕ್ ಗಳನ್ನು ವಿತರಿಸಲಾಯಿತು.
ಜಾಗರಣ ಪ್ರಕಲ್ಪದ ವೀರೇಶ್ ಅವರು ನೋಟ್ ಬುಕ್ ಗಳನ್ನು ವಿತರಿಸಿ ಅಂಬೇಡ್ಕರ್ ಅವರ ಜೀವನ ಸಾಧನೆ ಹಾಗೂ ಸಮಾಜ ಚಿಕಿತ್ಸಕ ಕಾರ್ಯಚಟುವಟಿಕೆಗಳನ್ನು ತಿಳಿಸಿಕೊಟ್ಟರು.
ಸ್ಥಾನೀಯ ಅಂಬೇಡ್ಕರ್ ಸಂಘದ ಅಧ್ಯಕ್ಷರಾದ ಶ್ರಿ ಪಾಂಡಿಯನ್ ಅವರು ಉಪಸ್ಥಿತರಿದ್ದರು.
ಇದೇ ರೀತಿ ಶೇಷಾದ್ರಿಪುರಂ ಬಳಿಯ ವಿ.ವಿ. ಗಿರಿ ಕಾಲೋನಿಯಲ್ಲಿಯೂ ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ರಾಷ್ಟ್ರೋತ್ಥಾನ ಪರಿಷತ್ ತನ್ನ ಜಾಗರಣ ಪ್ರಕಲ್ಪದ ಮೂಲಕ ಬೆಂಗಳೂರಿನ 200ಕ್ಕೂ ಅಧಿಕ ಸೇವಾಬಸ್ತಿಗಳಲ್ಲಿ ಶಿಕ್ಷಣ, ಆರೋಗ್ಯ, ಸೇವೆ ಹಾಗೂ ಸಂಸ್ಕಾರ ಸಂಬಂಧಿಸಿದ ಹತ್ತಾರು ಚಟುವಟಿಕೆಗಳನ್ನು ನಡೆಸುತ್ತಿದೆ.

