
ಬೆಂಗಳೂರು: ಮನೆಮನೆಗೆ ಸರಳ ಸಂಸ್ಕೃತ ಸಂಭಾಷಣೆಯನ್ನು ತಲುಪಿಸುತ್ತಿರುವ ‘ಸಂಸ್ಕೃತ ಭಾರತಿ’ಯ ನೇತೃತ್ವದಲ್ಲಿ ‘ಗೇಹೇ ಗೇಹೇ ರಾಮಾಯಣಮ್” ಎಂಬ ನಿತ್ಯ ರಾಮಾಯಣ ಪಾರಾಯಣ ಅಭಿಯಾನ ನಡೆಯಲಿದೆ. ಈ ಅಭಿಯಾನವು ಏಪ್ರಿಲ್ 21ರಂದು ಭಾರತದಾದ್ಯಂತ ಪ್ರಾರಂಭಗೊಳ್ಳಲಿದೆ ಎಂದು ಸಂಸ್ಕೃತ ಭಾರತಿ ತಿಳಿಸಿದೆ.
ಪ್ರಭು ಶ್ರೀ ರಾಮಚಂದ್ರನು ನಮ್ಮೆಲ್ಲರ ಆರಾಧ್ಯದೈವ. ಶ್ರೀರಾಮಮಂದಿರವು ನಮ್ಮ ಕಾಲದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವುದು ನಿಜವಾಗಿಯೂ ನಮ್ಮ ಪುಣ್ಯ. ರೋಮರೋಮಗಳಲ್ಲಿ ರಾಮಭಕ್ತಿಯನ್ನು ಮೆರೆಯುತ್ತಾ ಆ ಶ್ರೇಷ್ಠ ಕಾರ್ಯಕ್ಕಾಗಿ ನಿಧಿಯನ್ನು ಸಮರ್ಪಿಸಿ ಧನ್ಯರಾಗಿದ್ದೇವೆ.
ಈಗ ಮಂದಿರವು ನಿರ್ಮಾಣವಾಗುತ್ತಿರುವಾಗ ನಾವು ಮನೆಯಲ್ಲೇ ಕುಳಿತು ಏನು ಮಾಬಹುದು? ಎನ್ನುವ ಪ್ರಶ್ನೆಗೆ ಒಂದೇ ಒಂದು ಶ್ರೇಷ್ಠ ಉತ್ತರ,
ನಿತ್ಯ ರಾಮಾಯಣ ಪಾರಾಯಣ – ಅಂತಹ ಪಾರಾಯಣ ಮನೆ ಮನೆಗಳಲ್ಲೂ ಆಗಬೇಕು. ಅದಕ್ಕಾಗಿ ಸಂಸ್ಕೃತಭಾರತಿಯು “ಗೇಹೇ ಗೇಹೇ ರಾಮಾಯಣಮ್” ಎನ್ನುವ ಈ ಮಹತ್ತಮವಾದ ಯೋಜನೆಯನ್ನು ಸಂಕಲ್ಪಿಸಿದೆ…
ಈ ಯೋಜನೆಯ ಕೆಲವು ಮುಖ್ಯ ಬಿಂದುಗಳು ಇಂತಿವೆ:
- ಇದು ಒಂದು ವರ್ಷದ ಯೋಜನೆ.
- ಸಮಗ್ರ ದೇಶದಲ್ಲಿ, ಶ್ರೀರಾಮನವಮಿಯ ದಿನವೇ (ಏಪ್ರಿಲ್ 21) ಸಾವಿರಾರು ಜನರು ಪಾರಾಯಣವನ್ನು ಪ್ರಾರಂಭಿಸಲಿದ್ದಾರೆ.
- ನಮ್ಮ ಮನೆಯಲ್ಲೇ ನಮ್ಮ ಅನುಕೂಲವಾದ ಸಮಯದಲ್ಲಿ ಪ್ರತಿದಿನವೂ ಶ್ರೀಮದ್ ವಾಲ್ಮೀಕಿರಾಮಾಯಣದ ಎರಡು ಸರ್ಗಗಳನ್ನು ಪಠಿಸುವುದು. ಅಷ್ಟೇ…
- ರಾಮಾಯಣದಲ್ಲಿ ಒಟ್ಟು 648 ಸರ್ಗಗಳು ಇರುವುದರಿಂದ ಪ್ರತಿದಿನವೂ ಎರಡು ಸರ್ಗಗಳಂತೆ ಓದಿದರೆ 324 ದಿನಗಳಲ್ಲಿ ಪೂರ್ಣ ಶ್ರೀಮದ್ವಾಲ್ಮೀಕಿರಾಮಾಯಣದ ಪಾರಾಯಣವಾಗುತ್ತದೆ. ಅದಕ್ಕಾಗಿಯೇ ಒಂದು ವರ್ಷದ ಅವಧಿ.
- ಪ್ರತಿದಿನವೂ ಎರಡು ಸರ್ಗಗಳನ್ನು ಓದುವಾಗ, ಗ್ರಂಥದಲ್ಲೇ ಇರುವ ಹಾಗೆ, ಮೊದಲು ಆದಿಮಂಗಳ ಶ್ಲೋಕಗಳನ್ನು, ಕೊನೆಯಲ್ಲಿ ಅಂತ್ಯಮಂಗಳಶ್ಲೋಕಗಳನ್ನು ಓದುವುದು.
- ಹತ್ತು ಹದಿನೈದು ಜನರು ಸೇರಿ WhatsApp ಗಣಗಳನ್ನು ಮಾಡಿಕೊಂಡು, ಇಡೀ ವರ್ಷ ಉತ್ಸಾಹದಿಂದ ಶ್ರೀ ರಾಮಾಯಣ ಪಾರಾಯಣ ಯಜ್ಞವನ್ನು ಮುನ್ನೆಡೆಸಬಹುದು.
- ವಿಶೇಷ ಸಲಹೆ ಸೂಚನೆ ಮಾರ್ಗದರ್ಶನಕ್ಕಾಗಿ ಆಸಕ್ತರು, ಈ https://forms.gle/hEDe7Qqe2SUyRyLM9 ಲಿಂಕ್ ಮೂಲಕ ನೋಂದಾಯಿಸಬಹುದು. (ನೋಂದಾಯಿಸಲು ಕೊನೆಯ ದಿನಾಂಕ – 21.04.2021)
ಪಾರಾಯಣಕ್ಕೆ ಬಳಸಬಹುದಾದ ಗ್ರಂಥಗಳು :
- ಗೀತಾ ಪ್ರೆಸ್ ಗೋರಖ್ ಪುರದ ರಾಮಾಯಣ
- ಶ್ರೀ ರಂಗನಾಥಶರ್ಮರ ವ್ಯಾಖ್ಯಾನವಿರುವ ರಾಮಾಯಣ
- ಭಾರತದರ್ಶನ ಪ್ರಕಾಶನದ ರಾಮಾಯಣ
- IIT Kanpur ಅವರ online ರಾಮಾಯಣ ವೂ ಲಭ್ಯ https://www.valmiki.iitk.ac.in
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
1. +91 77601 83607
2. +91 99451 68920
3. +91 95352 80590
ramayanaparayanam@samskritabharatidk.com
॥ ಜಯತು ಜಯತು ಶ್ರೀ ರಾಮಚಂದ್ರಃ