
ಕೊರೋನಾ ಮಹಾಮಾರಿಯ ತೀವ್ರತೆ ಹೆಚ್ಚಾಗಿರುವುದರಿಂದ ತಮ್ಮ 211 ಶಾಲೆಗಳನ್ನು ಕೊರೋನಾ ಪೀಡಿತರ ಚಿಕಿತ್ಸೆಗೆ ಬಳಸಿಕೊಳ್ಳುವಂತೆ ಸ್ಥಳೀಯ ಆರೆಸ್ಸೆಸ್ ಹಾಗೂ ಪರಿವಾರ ಸಂಘಟನೆ ಸೇವಾಭಾರತಿ ಮಧ್ಯಪ್ರದೇಶ ಸರ್ಕಾರವನ್ನು ಮನವಿ ಮಾಡಿದೆ.
ಗ್ವಾಲಿಯರ್ ಮತ್ತು ಭೂಪಾಲ್ ನಲ್ಲಿ 9,ಶಿವಪುರ ಮತ್ತು ರೈಸನ್ ಗಳಲ್ಲಿ 8, ಮೊರೆನಾದಲ್ಲಿ 7, ಗುನಾ ಮತ್ತು ಬೀತಲ್ ಗಳಲ್ಲಿ 6 ಸೇರಿದಂತೆ ಒಟ್ಟು ಮಧ್ಯ ಪ್ರದೇಶದ 16 ಜಿಲ್ಲೆಗಳಲ್ಲಿ 100 ಶಾಲೆಗಳನ್ನು ಕ್ಯಾರಂಟೈನ್ ಕೇಂದ್ರಗಳನ್ನಾಗಿ ಹಾಗೂ 111 ಶಾಲೆಗಳನ್ನು ಲಸಿಕೆ ಕೇಂದ್ರಗಳನ್ನಾಗಿ ಬಳಸಿಕೊಳ್ಳುವಂತೆ ಈಗಾಗಲೇ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಸೇವಾಭಾರತಿ ತಿಳಿಸಿದೆ.
ಕೋರೋನಾ ಪೀಡಿತರಿಗೆ ನೆರವು ನೀಡಲು ಸ್ಥಳೀಯ ಸಂಘಟನೆಗಳು ಹಾಗೂ ಜಿಲ್ಲಾಢಳಿತಗಳ ನೆರವಿನೊಂದಿಗೆ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಿದೆ ಎಂದು ಮಧ್ಯಪ್ರದೇಶ ಸರ್ಕಾರ ತಿಳಿಸಿದೆ.
ಮಾಹಿತಿ ಕೃಪೆ: Times of India