Clik here to view.

ಅಮೆರಿಕ : ಭಾರತೀಯ ಮೂಲದ ವನಿತಾ ಗುಪ್ತ (46) ಅವರು ಅಮೆರಿಕದ ಮೂರನೇ ಅತಿ ದೊಡ್ಡ ನ್ಯಾಯಾಂಗ ಹುದ್ದೆಯಾಗಿರುವ ಸಹ ಅಟಾರ್ನಿ ಜನರಲ್ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.
ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಟಾರ್ನಿ ಜನರಲ್ ಹುದ್ದೆ ಬಹಳ ಪ್ರತಿಷ್ಠಿತವಾದುದಾಗಿದೆ. ಸಹ ಅಟಾರ್ನಿ ಜನರಲ್ ಹುದ್ದೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೂರನೇ ಅತಿ ಪ್ರಮುಖ ಹುದ್ದೆಯಾಗಿದೆ.
ಅಮೆರಿಕದ ಸೆನೆಟ್ ನಲ್ಲಿನಡೆದ ಮತದಾನದ ಸಂಧರ್ಭದಲ್ಲಿ ಉಭಯ ಪಕ್ಷಗಳೂ ತಲಾ 50 ಸ್ಥಾನಗಳನ್ನು ಹೊಂದಿರುವುದರಿಂದ ಟೈ ಆಗಿದೆ. ಆಗ ರಿಪಬ್ಲಿಕನ್ ಸೆನೆಟ್ ಸದಸ್ಯೆ ಲಿಸಾ ಮಾರ್ಕೋವ್‌ಸ್ಕಿ ಅವರು ತಮ್ಮ ಪಕ್ಷದ ನಿಲುವಿನಿಂದ ಹೊರಬಂದು ವನಿತಾ ಗುಪ್ತ ಅವರಿಗೆ ಮತ ಚಲಾಯಿಸಿದರು. ಹೀಗಾಗಿ 51–49 ಮತಗಳ ಅಂತರದಿಂದ ಅವರು ಈ ಪ್ರತಿಷ್ಠಿತ ಹುದ್ದೆಗೆ ಆಯ್ಕೆಯಾದರು.
ವನಿತಾ ಗುಪ್ತ ಅವರನ್ನು ಅಭಿನಂದಿಸಿರುವ ಅಧ್ಯಕ್ಷ ಜೋ ಬೈಡನ್, ‘ಜನಾಂಗೀಯ ಸಮಾನತೆ ಮತ್ತು ನ್ಯಾಯ ಕ್ಷೇತ್ರದಲ್ಲಿ ಅರ್ಪಣೆಯಿಂದ ಕೆಲಸ ಮಾಡುವ ಹೊಣೆಗಾರಿಕೆ ವನಿತಾ ಗುಪ್ತ ಮತ್ತು ಕ್ರಿಸ್ಟಿನ್ ಕ್ಲರ್ಕ್ ಅವರಿಗೆ ದೊರೆತಿದೆ. ಸೆನೆಟ್ ಇವರಿಗೆ ಸಹಕಾರ ನೀಡಬೇಕು’ ಎಂದರು.