ನಿಮ್ಮ ಜೊತೆಗೆ ಇದೆ ಆಪ್ತ ಸಲಹಾ ಕೇಂದ್ರ
Clik here to view.

ಇಂದಿನ ಕೋವಿಡ್ ವಾತಾವರಣದಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಅನೇಕರು ತಮ್ಮ ಹತ್ತಿರದ ಬಂಧುಗಳನ್ನು ಕಳೆದುಕೊಂಡಿದ್ದಾರೆ ಅಥವಾ ಕೋವಿಡ್ ನ ಕಾರಣದಿಂದ ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ. ತುಂಬಾ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೌಟುಂಬಿಕ ತೊಂದರೆಯನ್ನು ಇನ್ನೂ ಕೆಲವರು ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ನಿಯಮಿತ ಶಾಲೆ – ಕಾಲೇಜಿಗೆ ಹೋಗಲು ಅಸಮರ್ಥರಾಗಿ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅನೇಕರು ಮಾನಸಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ನಿಮ್ಮ ಮಾನಸಿಕ ಒತ್ತಡವನ್ನು ದೂರಗೊಳಿಸಲು ಆಪ್ತಸಲಹಾ ಕೇಂದ್ರವು ಸಹಕರಿಸಲಿದೆ.
ಸೇವಾ ಮನೋಭಾವ ಹೊಂದಿರುವ ಆಪ್ತ ಸಲಹಾ ಕೇಂದ್ರವು ಬೆಂಗಳೂರು ಮೂಲದ ಸೇವಾಸಂಸ್ಥೆಯಾಗಿದ್ದು ಸಮಾಜದ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡಿರುವ, ಸಮಾಜಕ್ಕಾಗಿ ತಾವೂ ಒಳ್ಳೆಯ ಕೆಲಸವನ್ನು ಮಾಡುವ ಇಚ್ಛೆ ಹೊಂದಿರುವ ವ್ಯಕ್ತಿಗಳಿಂದ ಪ್ರಾರಂಭವಾದ ಸಂಸ್ಥೆ. ಇಲ್ಲಿ 300 ಕ್ಕೂ ಹೆಚ್ಚಿನ, ಅನುಭವಿ ಆಪ್ತಸಲಹೆಗಾರರು ಪ್ರತಿಷ್ಠಿತ ನಿಮಾನ್ಸ್ ಮತ್ತು ಸಮಾಧಾನ ಸಂಸ್ಥೆಗಳಿಂದ ಪರಿಣತಿಯನ್ನು ಹೊಂದಿರುವವರು ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಮಾನಸಿಕ ಸಂಕಷ್ಟಗಳನ್ನು ಉಚಿತವಾಗಿ ನಿವಾರಿಸಿ ಸಮಾಜದ ಸ್ವಾಸ್ಥ್ಯವನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದಾರೆ. ಈಗ ದೂರವಾಣಿ ಮೂಲಕ ಉಚಿತವಾಗಿ ಸಲಹೆ, ಸಾಂತ್ವನ ಮತ್ತು ಸಮಸ್ಯೆಗಳನ್ನು ಎದುರಿಸಲು ಉಪಯುಕ್ತ ಆಪ್ತಸಲಹೆಯನ್ನು ಆಪ್ತ ಸಲಹಾಕಾರರಿಂದ ಪಡೆಯಬಹುದು.
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ +91 6362 055380
ಕರೆ ಮಾಡಬೇಕಾದ ಸಮಯ: ಬೆಳಗ್ಗೆ 9 ರಿಂದ ಸಂಜೆ 6 ರ ತನಕ.
ಸಲಹೆ ಮತ್ತು ಸಹಾಯಕ್ಕಾಗಿ ಸಂಪರ್ಕಿಸಬೇಕಾದ ಅಂತರ್ಜಾಲ ತಾಣ www.ask4support.org
Email: aapta4all@gmail.com
Clik here to view.
