Quantcast
Channel: News – Vishwa Samvada Kendra
Viewing all articles
Browse latest Browse all 1745

ಮುಸ್ಲಿಮ್ ಬಾಹುಳ್ಯವೆಂಬ ಕಾರಣಕ್ಕೆ ಇತರರ ಧಾರ್ಮಿಕ ಹಬ್ಬ-ಮೆರವಣಿಗೆಗಳ ತಡೆ-ನಿಷೇಧಕ್ಕೆ ಮದ್ರಾಸ್ ಹೈಕೋರ್ಟ್ ತೀವ್ರ ಆಕ್ಷೇಪ

$
0
0

ತಮಿಳುನಾಡು: ಯಾವುದೇ ಸಮುದಾಯದ ಧಾರ್ಮಿಕ ಹಬ್ಬಗಳು ಅಥವಾ ಮೆರವಣಿಗೆಗಳನ್ನು ಆ ಪ್ರದೇಶದಲ್ಲಿ ಯಾರು ಬಹುಸಂಖ್ಯಾತರಾಗುತ್ತಾರೆ ಎಂಬುದರ ಆಧಾರದ ಮೇಲೆ ನಿಷೇಧಿಸಲು ಅಥವಾ ಆಕ್ಷೇಪಿಸಲು ಸಾಧ್ಯವಾಗುವುದಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತಿಳಿಸಿದೆ.

ತಮಿಳುನಾಡಿನ ಪೆರಂಬಲೂರು ಜಿಲ್ಲೆಯ ವಿ ಕಲತೂರ್‌ನಲ್ಲಿ ಗ್ರಾಮದ ದೇವಾಲಯದ ಮೆರವಣಿಗೆ ನಡೆಸುವುದನ್ನು ಆಕ್ಷೇಪಿಸಿ ಸ್ಥಳೀಯ ಮುಸ್ಲಿಮರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಎನ್ ಎನ್ ಕಿರುಬಕರನ್ ಮತ್ತು ಪಿ. ವೆಲ್ಮುರುಗನ್ ಅವರ ದ್ವಿಸದಸ್ಯ ಪೀಠವು ಈ ಹೇಳಿಕೆ ನೀಡಿದೆ.
ಪ್ರಕರಣದ ಮೂರನೇ ಪ್ರತಿವಾದಿಯಾದ ಉಪ ಪೊಲೀಸ್ ವರಿಷ್ಠಾಧಿಕಾರಿಗಳು ನ್ಯಾಯಾಲಕ್ಕೆ ಸಲ್ಲಿಸಿದ ಅಫಿಡವಿಟ್ ನಲ್ಲಿ, ಮೂರು ದಿನಗಳ ದೇವಾಲಯ ಉತ್ಸವವು 2011 ರವರೆಗೆ ಶಾಂತಿಯುತವಾಗಿ ನಡೆಯುತ್ತಿತ್ತು. 2012ರಲ್ಲಿ ಕೆಲ ಮುಸ್ಲಿಮರು ಹಿಂದೂ ಹಬ್ಬಗಳಗಳನ್ನು ‘ಪಾಪ’ ಎಂದು ಆಕ್ಷೇಪಿಸಲಾರಂಭಿಸಿದರು. ಉತ್ಸವಕ್ಕೆ ರಕ್ಷಣೆ ನೀಡುವಂತೆ ದೇವಾಲಯದ ಆಡಳಿತ ಮಂಡಳಿ ಪೋಲೀಸರನ್ನು ಸಂಪರ್ಕಿಸಿದರು, ತದನಂತರ ಕೆಲ ಷರತ್ತುಗಳೊಂದಿಗೆ ಉತ್ಸವಕ್ಕೆ ಅನುಮತಿ ನೀಡಲಾಯಿತು ಎಂದು ತಿಳಿಸಿದ್ದಾರೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.

ಅರ್ಜಿಯ  ವಿಚಾರಣೆ ವೇಳೆ ನ್ಯಾಯಪೀಠವು “ಒಂದು ನಿರ್ದಿಷ್ಟ ಪ್ರದೇಶದಲ್ಲಿ ಒಂದು ಧಾರ್ಮಿಕ ಗುಂಪು ಪ್ರಾಬಲ್ಯ ಹೊಂದಿರುವುದೇ ಇತರ ಧಾರ್ಮಿಕ ಗುಂಪುಗಳ ಹಬ್ಬಗಳ ಆಚರಣೆಗೆ ಅಥವಾ ಆ ರಸ್ತೆಗಳ ಮೂಲಕ ಮೆರವಣಿಗೆಗಳನ್ನು ನಿಷೇಧಿಸುವ ನೆಲೆಯಾಗಿರಬಾರದು ಎಂದು ಅಭಿಪ್ರಾಯಪಟ್ಟ ನ್ಯಾಯಪೀಠವು ದಶಕಗಳ ಕಾಲ ನಡೆಸುತ್ತಾ ಬಂದಿರುವ ಉತ್ಸವ ಮೆರವಣಿಗೆಗಳಿಗೆ ಮುಸ್ಲಿಮರು ಪ್ರಾಬಲ್ಯ ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಆಕ್ಷೇಪಿಸುವುದು ಸರಿಯಲ್ಲ ಎಂದಿದೆ.

“ಖಾಸಗಿ ಪ್ರತಿವಾದಿಯ ವಾದವನ್ನು ಒಪ್ಪಿಕೊಳ್ಳಬೇಕಾದರೆ, ಇದು ಅಲ್ಪಸಂಖ್ಯಾತ ಜನರಿಗೆ ಭಾರತದ ಹೆಚ್ಚಿನ ಪ್ರದೇಶಗಳಲ್ಲಿ ಯಾವುದೇ ಉತ್ಸವ ಅಥವಾ ಮೆರವಣಿಗೆ ನಡೆಸಲು ಸಾಧ್ಯವಾಗದಂತಹ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ" ಎಂದು ನ್ಯಾಯಪೀಠ ಹೇಳಿದೆ.

ಮೂಲಭೂತವಾದಿ ಧಾರ್ಮಿಕ ಗುಂಪುಗಳಿಗೆ ಎಚ್ಚರಿಕೆ ನೀಡಿರುವ ನ್ಯಾಯಾಲಯವು, ಒಂದು ಧಾರ್ಮಿಕ ಗುಂಪು ಇನ್ನೊಂದು ಧಾರ್ಮಿಕ ಗುಂಪುಗಳ ವಿರುದ್ಧ ಈ ರೀತಿಯ ಪ್ರತಿರೋಧ ತೋರುತ್ತಾ ಹೋದಲ್ಲಿ ಸಮಾಜದಲ್ಲಿ ಅವ್ಯವಸ್ಥೆ, ಗಲಭೆಗಳು, ಧಾರ್ಮಿಕ ಕಾದಾಟಗಳು, ಪ್ರಾಣಹಾನಿ ಮತ್ತು ಆಸ್ತಿಪಾಸ್ತಿಗಳ ನಾಶ ಉಂಟಾಗುತ್ತದೆ ಎಂದು ನ್ಯಾಯಪೀಠ ತಿಳಿಸಿದೆ.

ವರದಿ ಮೂಲ: ಸ್ವರಾಜ್


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>