Quantcast
Channel: News – Vishwa Samvada Kendra
Viewing all articles
Browse latest Browse all 1745

ಆಕ್ಸಿಜನ್ Concentratorಗಳ ವಿತರಿಸಿದ ವಿಶ್ವ ಹಿಂದೂ ಪರಿಷತ್ |ಕೊರೋನಾ ಸಂಕಷ್ಟ ಸಮಯದಲ್ಲಿ ಜನರ ನೆರವಿಗೆ ಧಾವಿಸಿದ ವಿಹಿಂಪ

$
0
0

ಬೆಂಗಳೂರು: ವಿಶ್ವ ಹಿಂದು ಪರಿಷತ್ ಇದೀಗ ಕೊರೋನಾ ಸಂಕಷ್ಟ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್  ಜನರ ನೋವು ಸಂಕಟಗಳಿಗೆ ಆಸರೆಯಾಗುವ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ.

ಇಂದು ವಿಶ್ವ ಹಿಂದೂ ಪರಿಷತ್ ನ ಬೆಂಗಳೂರಿನ ಕೇಂದ್ರ ಕಾರ್ಯಾಲಯದಿಂದ ಬೆಳಗಾವಿಗೆ  5 , ಶಿವಮೊಗ್ಗಕ್ಕೆ 2 , ಚಿತ್ರದುರ್ಗ 2, ಮಂಗಳೂರಿಗೆ 1 ಸೇರಿದಂತೆ  10 Oxygen Concentrator ಗಳನ್ನು ಕಳುಹಿಸಿ ಕೊಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘಟನಾ ಕಾರ್ಯದರ್ಶಿ ಶ್ರೀ ಬಸವರಾಜ್ ಜಿ  ಅವರು  ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳ ನಡೆಸಿದ ಸೇವಾಕಾರ್ಯಗಳ ವಿವರ ನೀಡಿದರು.

  • ವಿಹಿಂಪ ವತಿಯಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳನ್ನು ನೆಡೆಸಲಾಯಿತು.
  • ಮಂಗಳೂರಿನಲ್ಲಿ ಕೋವಿಡ್  ರೋಗಿಗಳಿಗೆ  ಉಚಿತ  ಆಟೋ ಸೇವೆ ಒದಗಿಸಲಾಗುತ್ತಿದೆ. ಅದಕ್ಕಾಗಿ ಸಹಾಯವಾಣಿ ಏರ್ಪಾಡು ಮಾಡಿದೆ.
  • ಮಂಗಳೂರು, ಸುರತ್ಕಲ್, ಉಪ್ಪಿನಂಗಡಿ, ಮಡಿಕೇರಿ, ಚಿತ್ರದುರ್ಗ, ಮಳವಳ್ಳಿ, ತುಮಕೂರು, ಬೆಳಗಾವಿ,  ಹುಬ್ಬಳ್ಳಿ –  ಹೀಗೆ ಹಲವಾರು ಕಡೆ  ಕೋವಿಡ್ ನಿಂದ ಮೃತಪಟ್ಟವರನ್ನು ಹಿಂದೂ ಪದ್ಧತಿಯಂತೆ  ಅಂತ್ಯಕ್ರಿಯೆ ಮಾಡಲಾಗುತ್ತಿದೆ.
  • ಶಿವಮೊಗ್ಗದಲ್ಲಿ ಅನ್ನ ಪರಬ್ರಹ್ಮ ಎನ್ನುವ ಕಾರ್ಯಕ್ರಮದಡಿ ಹಸಿದವರಿಗೆ ಪ್ರತಿದಿನ ನಗರದಾದ್ಯಂತ 1 ಸಾವಿರ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ.
  • ಬೆಂಗಳೂರಿನಲ್ಲಿ ಕೋವಿಡ್ ಆಗಿ Home Isolationನಲ್ಲಿ ಇರುವವರಿಗೆ Medicin kit ವಿತರಣೆ ನಡೆಯುತ್ತಿದೆ.
  • ಚಿತ್ರದುರ್ಗದ ಜಿಲ್ಲೆಯ ಹೊಳಲ್ಕೆರೆಯ ಸರಕಾರಿ ಆಸ್ಪತ್ರೆಗಳಲ್ಲಿರುಕ ರೋಗಿಗಳ ಸಂಬಂಧಿಗಳಿಗೆ ಪ್ರತಿನಿತ್ಯ 200 ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ.
  • ಶಿವಮೊಗ್ಗದಲ್ಲಿ ವಿಶ್ವ ಹಿಂದೂ ಪರಿಷದ್ ಮತ್ತು ಸೇವಾ ಭಾರತೀಯಿಂದ 40 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರವನ್ನು ನೆಡೆಸುತ್ತಿದೆ.
  • ಚಿತ್ರದುರ್ಗದಲ್ಲಿ ವಿಹಿಂಪ ಮತ್ತು ಜೈನ್ ಸಮುದಾಯ ಒಟ್ಟಾಗಿ 12 ಬೆಡ್ ಗಳ ಕೋವಿಡ್ ಆರೈಕೆ ಕೇಂದ್ರ ನೆಡೆಸಲಾಗುತ್ತಿದೆ.
  • ವಿಶ್ವ ಹಿಂದೂ ಪರಿಷದ್ ಕರ್ನಾಟಕ ಕೇಂದ್ರಕಾರ್ಯಾಲಯ ಧರ್ಮಶ್ರೀಯಲ್ಲಿ ಎರಡು ದಿನಗಳ ಕಾಲ Vaccination Drive ಮಾಡಲಾಯಿತು.
  • ಬೆಳಗಾವಿಯಲ್ಲಿ ವಿಶ್ವ ಹಿಂದೂ ಪರಿಷದ್, RSS, ಏಕಲ್ ವಿದ್ಯಾಲಯದ ಆಶ್ರಯದಲ್ಲಿ ಕೋವಿಡ್ ಕೇರ್ ಸೆಂಟರ್ ನೆಡೆಯುತ್ತಿದೆ.

Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>