Quantcast
Channel: News – Vishwa Samvada Kendra
Viewing all articles
Browse latest Browse all 1745

ಮನೆಯಲ್ಲೇ ಕುಳಿತು ಸಂಸ್ಕೃತ ಕಲಿಯಬೇಕೆ? ತದನಂತರ ನೀವು ಎಂಎ ಕೂಡಾ ಮಾಡಬಹುದು

$
0
0

ಮನೆಯಲ್ಲೇ ಕುಳಿತು ದೇವಭಾಷೆ ಸಂಸ್ಕೃತವನ್ನು ಕಲಿಯಬೇಕೇ?

ರಾಮಾಯಣ ಮಹಾಭಾರತ ಗಳನ್ನು ಸಂಸ್ಕೃತಭಾಷೆಯಲ್ಲೇ ಓದಿ ಅರ್ಥೈಸಿಕೊಳ್ಳೇಕೇ?

ಭಾರತೀಯ ಜ್ಞಾನಪರಂಪರೆಗೆ ನಿಮಗೆ ಪ್ರವೇಶಿಸಲು ನಿಮಗೆ ರಾಜಮಾರ್ಗ ಬೇಕೇ?

ಹಾಗಾದರೆ ಖಂಡಿತ ಸ್ವಾಗತ ಬಂಧುಗಳೇ ..

ಸಂಸ್ಕೃತಭಾಷೆ ಮನೆಮಾತಾಗಬೇಕು ಎಂದು ಕಳೆದ 40 ವರ್ಷಗಳಿಂದ ಹಗಲಿರುಳೂ ಶ್ರಮಿಸುತ್ತಿರುವ ಸಂಸ್ಕೃತಭಾರತಿ ಇದಕ್ಕಾಗಿ ದಶಕಗಳಿಂದ ‘ಅಂಚೆ ಮೂಲಕ ಸಂಸ್ಕೃತ’ ಎಂಬ ಅತ್ಯಂತ ಯಶಸ್ವಿ ಯೋಜನೆಯನ್ನು ನಡೆಸುತ್ತಿದೆ. ನೀವೂ ಇದದ ವಿದ್ಯಾರ್ಥಿಗಳಾಗಿ.

ಏನಿದು ಅಂಚೆ ಮೂಲಕ ಸಂಸ್ಕೃತ?

ನಮ್ಮ ಮನೆಯಲ್ಲೇ  ಸಂಸ್ಕೃತ ಕಲಿಯಲು ಹೆದ್ದಾರಿ ಈ ಅಂಚೆ ಮೂಲಕ ಸಂಸ್ಕೃತ.

ಪ್ರವೇಶ, ಪರಿಚಯ, ಶಿಕ್ಷಾ, ಕೋವಿದ – ಎಂದು ನಾಲ್ಕು ಹಂತಗಳು. 

ಪ್ರತಿಯೊಂದು ಹಂತದಲ್ಲೂ ಅಧ್ಯಯನ ಸಾಮಗ್ರಿಯನ್ನು ಕಳಿಸಲಾಗುವುದು.

ಪ್ರತಿಯೊಂದು ಹಂತಕ್ಕೂ ಆರು ತಿಂಗಳ ಅವಧಿ. ಕೊನೆಯಲ್ಲಿ ಪರೀಕ್ಷೆ.

ಪ್ರತಿಯೊಂದು ಹಂತಕ್ಕೂ ಪುಸ್ತಕ, ಪ್ರಮಾಣಪತ್ರ, ಅಂಚೆವೆಚ್ಚ ಎಲ್ಲವೂ ಸೇರಿದಂತೆ ಕೇವಲ ರೂ. 300/- ಶುಲ್ಕ.

ಯಾರು ಯೋಜನೆಯಲ್ಲಿ ಯಾರು ಭಾಗಹಿಸಬಹುದಾಗಿದೆ

16 ವರ್ಷಕ್ಕೂ ಮೇಲ್ಪಟ್ಟ ಎಲ್ಲ ಆಸಕ್ತರು ಭಾಗವಹಿಸಬಹುದು.

ಇದರ ಮೂಲಕ ನಾವು ಹೇಗೆ ಸಂಸ್ಕೃತ ಕಲಿಯುತ್ತೇವೆ?

ಹೊಸದಾಗಿ ಸಂಸ್ಕೃತ ಕಲಿಯುವವರಿಗಾಗಿಯೇ ಪುಸ್ತಕಗಳನ್ನು ವಿಶೇಷವಾಗಿ ನಿರ್ಮಿಸಲಾಗಿದೆ. 

ಮೊದಲ ಹೆಜ್ಜೆಯಿಂದ ಹೇಗೆ ಸಂಸ್ಕೃತವನ್ನು ಆರಂಭಿಸಬೇಕು ಎನ್ನುವುದನ್ನು ಅತ್ಯಂತ ಸುಲಲಿತವಾಗಿ ಬೋಧಿಸುತ್ತವೆ.

ಅದರ ಜೊತೆಗೆ ಪ್ರತಿಭಾನುವಾರ ಅನುಭವಿ ಶಿಕ್ಷಕರಿಂದ ಉಚಿತವಾಗಿ online ತರಗತಿಗಳೂ ಇರುತ್ತವೆ.

ಆಸಕ್ತರು ಈ Google form (link) ಅನ್ನು ತುಂಬಿಸಿ ನೊಂದಾಯಿಸಿಕೊಳ್ಳಿ. samskritashikshanam.in

ಅಷ್ಟೇ ಅಲ್ಲದೇ ತಾವು  ಪದವಿಧರರಾಗಿದ್ದರೆ, ಅಂಚೆ ಮೂಲಕ ಸಂಸ್ಕೃತ ಯೋಜನೆಯಲ್ಲಿ ಎರಡು ವರ್ಷ ಸಂಸ್ಕೃತವನ್ನು ಓದಿ, ತದನಂತರ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ದಲ್ಲಿ MA ಮಾಡಬಹುದು.

ಮತ್ತೇಕೆ ತಡ

ಶುಭಸ್ಯ ಶೀಘ್ರಂ

ಪಠತು ಸಂಸ್ಕೃತಂ ಜಯತು ಭಾರತಮ್

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಸಂಸ್ಕೃತ ಭಾರತಿ, ಬೆಂಗಳೂರು ಫೋನ್.: 080 2672 1052


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>