Clik here to view.

ಜಮ್ಮು-ಕಾಶ್ಮೀರ: ಕಾಶ್ಮೀರದಲ್ಲಿ 2 ಸಿಖ್ ಹುಡುಗಿಯರನ್ನು ಅಪಹರಿಸಿ ಬಲವಂತವಾಗಿ ಮತಾಂತರಿಸಿದ ಪ್ರಕರಣ ವರದಿಯಾಗಿದೆ. ಇದನ್ನು ತೀವ್ರವಾಗಿ ಖಂಡಿಸಿರುವ ಸಿಖ್ ಸಮುದಾಯ ಮತಾಂತರ ವಿರೋಧಿ ಕಾನೂನುನನ್ನು ಜಮ್ಮು-ಕಾಶ್ಮೀರದಲ್ಲಿ ಜಾರಿಗೆ ತರಲು ಆಗ್ರಹಿಸಿವೆ.
ಕಾಶ್ಮೀರದಲ್ಲಿ ಇಬ್ಬರು ಸಿಖ್ ಹುಡುಗಿಯರನ್ನು ಅಪಹರಿಸಿ ಇಸ್ಲಾಂಗೆ ಮತಾಂತರಗೊಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಿಖ್ ಸಮುದಾಯ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಮದುವೆಗಳ ನೆಪದಲ್ಲಿ ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯಲು ಈಗಾಗಲೇ ಉತ್ತರ ಪ್ರದೇಶದಲ್ಲಿ ಜಾರಿಯಾಗಿರುವ ‘ಬಲವಂತದ ಧಾರ್ಮಿಕ ಮತಾಂತರ ತಡೆ’ ಕಾನೂನನ್ನು ಜಮ್ಮು-ಕಾಶ್ಮೀರದಲ್ಲಿಯೂ ಜಾರಿಗೊಳಿಸುವಂತೆ ರಾಜ್ಯಪಾಲ ಮನೋಜ್ ಸಿನ್ಹಾ ಅವರಲ್ಲಿ ಆಗ್ರಹಿಸಿದ್ದಾರೆ.
ಸಿಖ್ ಧರ್ಮದ ಅತ್ಯುನ್ನತ (ತಾತ್ಕಾಲಿಕ) ಸ್ಥಾನದಲ್ಲಿರುವ ಶ್ರೀ ಅಕಲ್ ತಖಾತ್ ಸಾಹಿಬ್, ಶಿರೋಮಣಿ ಅಕಾಲಿ ದಳ ಪ್ರತಿಭಟನೆಗೆ ಬೆಂಬಲ ನೀಡಿವೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಲ್ ಜಿ ಸಿನ್ಹಾ ಅವರು ಸ್ಥಳೀಯ ಸಿಖ್ ಸಮುದಾಯದ ಆಕ್ರೋಶವನ್ನು ಒಪ್ಪಿಕೊಂಡಿದ್ದು, ಬಲವಂತವಾಗಿ ಇಸ್ಲಾಂಗೆ ಮತಾಂತರಗೊಂಡ ಸಿಖ್ ಹುಡುಗಿಯನ್ನು ತನ್ನ ಕುಟುಂಬಕ್ಕೆ ಹಿಂದಿರುಗಿಸುವ ಭರವಸೆ ನೀಡಿದ್ದಾರೆ.
ಸ್ಥಳೀಯ ವರದಿಗಳ ಪ್ರಕಾರ, ಬದ್ಗಂ ಜಿಲ್ಲೆಯ 18 ವರ್ಷದ ಸಿಖ್ ಬಾಲಕಿಯನ್ನು ಆಮಿಷ ಮತ್ತು ಗನ್ ತೋರಿಸಿ ಬೆದರಿಸುವ ಮೂಲಕ ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಲಾಗಿದೆ. ಮತ್ತು 62 ವರ್ಷದ ವ್ಯಕ್ತಿಯೊಂದಿಗೆ ವಿವಾಹ ಮಾಡಲಾಗಿದೆ ಎಂದು ಯುವತಿಯ ಕುಟುಂಬದವರು ಆರೋಪಿಸಿದ್ದಾರೆ. ಇನ್ನೊಂದು ಪ್ರಕರಣದಲ್ಲಿ ತನ್ನ ಮುಸ್ಲಿಂ ಸ್ನೇಹಿತನ ಸಮಾರಂಭದಲ್ಲಿ ಭಾಗವಹಿಸಿದ ಶ್ರೀನಗರದ ಇನ್ನೊಬ್ಬ ಹುಡುಗಿ ಕಾಣೆಯಾಗಿದ್ದಾಳೆ. ವರದಿಗಳ ಪ್ರಕಾರ, ಅವಳು ಅದೇ ಸಮಾರಂಭದಲ್ಲಿ ಹಾಜರಿದ್ದ ಹುಡುಗನನ್ನು ಮದುವೆಯಾಗಿದ್ದಳು ಮತ್ತು ಅಂದಿನಿಂದ ಕಾಣೆಯಾಗಿದ್ದಾಳೆ.
ಕಾಶ್ಮೀರದಲ್ಲಿ ಹಿಂದೂ ಯುವತಿಯರ ಅಪಹರಣ ಮತ್ತು ಬಲವಂತದ ಮದುವೆ-ಮತಾಂತರ ಚಟುವಟಿಕೆ ಎಗ್ಗಿಲ್ಲದೇ ನಡೆಯುತ್ತಿದೆ. ಈಗಾಗಲೇ 1000 ಹಿಂದೂ ಪಂಡಿತ್ ಹುಡುಗಿಯರನ್ನು ಅಪಹರಿಸಿ ಅತ್ಯಾಚಾರ ಎಸಗಿ ಮತಾಂತರ ಮಾಡಲಾಗಿದೆ ಎಂದು ವರದಿಗಳು ತಿಳಿಸುತ್ತಿವೆ