Quantcast
Viewing all articles
Browse latest Browse all 1745

ಭಾರತ ಸರ್ಕಾರ ಬುಡಕಟ್ಟು ಜನತೆಗೆ ಅರಣ್ಯ ನಿರ್ವಹಣೆಯ ಬಗ್ಗೆ ಸಮುದಾಯ ಹಕ್ಕುಗಳನ್ನು ನೀಡಿರುವುದು ಸ್ವಾಗತಾರ್ಹ : ವನವಾಸಿ ಕಲ್ಯಾಣ ಕರ್ನಾಟಕ

6 ಜುಲೈ 2021ರಂದು, ಭಾರತ ಸರ್ಕಾರದ ಬುಡಕಟ್ಟು ಇಲಾಖೆಯ ಸಚಿವ ಶ್ರೀ ಅರ್ಜುನ್ ಮುಂಡಾ ಹಾಗೂ ಅರಣ್ಯ ಸಚಿವ ಶ್ರೀ ಪ್ರಕಾಶ್ ಜಾವಡೇಕರ್ ರವರು ಬುಡಕಟ್ಟು ಜನತೆಗೆ ಅರಣ್ಯ ನಿರ್ವಹಣೆಯ ಬಗ್ಗೆ ಸಮುದಾಯ ಹಕ್ಕುಗಳನ್ನು ನೀಡುವ ಕುರಿತು ಪ್ರಕಟಣೆ ಹೊರಡಿಸಿದ್ದಾರೆ. ಎರಡು ಸಚಿವಾಲಯಗಳ ಮುಖ್ಯ ಕಾರ್ಯದರ್ಶಿಗಳು ಹೊರಡಿಸಿರುವ ಜಂಟಿ ಸುತ್ತೋಲೆಯ ಪ್ರಕಾರ ಅರಣ್ಯ ಹಕ್ಕು ಕಾಯ್ದೆ 2006ರಂತೆ ಅರಣ್ಯ ಸಂಪನ್ಮೂಲಗಳನ್ನು ನಿರ್ವಹಿಸಲು ಗ್ರಾಮಸಭೆಗಳು ಬುಡಕಟ್ಟು ಸಮುದಾಯಗಳಿಗೆ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ.

ವನವಾಸಿ ಕಲ್ಯಾಣ ಕರ್ನಾಟಕ ಈ ಕ್ರಮವನ್ನು ಸ್ವಾಗತಿಸುತ್ತದೆ. ತಡವಾಗಿಯಾದರೂ, ಇದು ಕೇಂದ್ರ ಸರ್ಕಾರದ ಕಡೆಯಿಂದ ವಿಶೇಷವಾಗಿ ಗೌರವಾನ್ವಿತ ಮಂತ್ರಿಗಳಾದ ಶ್ರೀ ಅರ್ಜುನ್ ಮುಂಡಾ ಮತ್ತು ಶ್ರೀ ಪ್ರಕಾಶ್ ಜಾವಡೇಕರ್ ಅವರ ಸರಿಯಾದ ಹೆಜ್ಜೆಯಾಗಿದೆ. ಜಂಟಿ ಸುತ್ತೋಲೆ ಪ್ರಕಾರ ಬುಡಕಟ್ಟು ಮತ್ತು ಅರಣ್ಯ ಸಚಿವರು ಮಾಡಿದ ಪರಸ್ಪರ ಸಹಮತದ ನಿಬಂಧನೆಗಳ ಸಮಯೋಚಿತ ಅನುಷ್ಠಾನ ಹಾಗೂ ಇದರಿಂದ ಉಂಟಾಗುವ ಯಾವುದೇ ವೈಪರೀತ್ಯಗಳನ್ನು ಸಮಯೋಚಿತವಾಗಿ ಸರಿಪಡಿಸಲಾಗುವುದು ಎಂದು ಕೇಂದ್ರದಲ್ಲಿ ಹಾಗೂ ರಾಜ್ಯಮಟ್ಟದ ಆಡಳಿತದಲ್ಲಿ ಇವುಗಳನ್ನು ಸರಿಪಡಿಸಲಾಗುವುದು ಎಂದು ವನವಾಸಿ ಕಲ್ಯಾಣ ಕರ್ನಾಟಕ ಆಶಿಸುತ್ತದೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ, ವನವಾಸಿ ಕಲ್ಯಾಣ ಕರ್ನಾಟಕ ತಿಳಿಸಿದೆ.

Image may be NSFW.
Clik here to view.

ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಅರಣ್ಯ ಸಂಪನ್ಮೂಲಗಳ ನಿರ್ವಹಣೆಗೆ ಸಂಬಂಧಿಸಿದಂತೆ ಸಮುದಾಯ ಹಕ್ಕುಗಳನ್ನು ನೀಡಲು ಸರ್ಕಾರ ಪ್ರಾರಂಭಿಸುತ್ತದೆ ಎಂದವರು ಕೆಲವು ತಿಂಗಳ ಹಿಂದೆ ಟ್ವೀಟ್ ಮಾಡಿದ್ದರು. ಇದನ್ನು ಬುಡಕಟ್ಟು ಮತ್ತು ಅರಣ್ಯ ಸಚಿವಾಲಯ ಜಂಟಿಯಾಗಿ ಮಾಡಲಿವೆ ಎಂದು ಸನ್ಮಾನ್ಯರು ಹೇಳಿದ್ದರು. ಇಂದಿನ ಈ ಪ್ರಕಟಣೆಯು ಆ ಬದ್ಧತೆಯನ್ನು ಪೂರೈಸುವಲ್ಲಿ ಸರಿಯಾದ ಹೆಜ್ಜೆ ಇಟ್ಟಿದೆ.

ಬುಡಕಟ್ಟು ಸಚಿವಾಲಯವು ಈ ಕಾರ್ಯದ ಅನುಷ್ಠಾನಕ್ಕೆ ನೋಡಲ್ ಏಜೆನ್ಸಿ ಯಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಸೂಕ್ತ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ನೀಡಿದೆ. ಆದರೆ ಕಾಳಜಿಯ ಅಂಶವೆಂದರೆ ಕೆಲವು ರಾಜ್ಯಗಳ ಬುಡಕಟ್ಟು ಮತ್ತು ಅರಣ್ಯ ಇಲಾಖೆಯ ನಡುವಿನ ಸಮನ್ವಯದ ಕೊರತೆ ಯು ಬುಡಕಟ್ಟು ಸಮಾಜ ಅರಣ್ಯ ಸಂಪನ್ಮೂಲಗಳನ್ನು ನಿರ್ವಹಿಸುವ ಹಕ್ಕುಗಳ ಮೇಲೆ ವಿಪರೀತ ಪರಿಣಾಮ ಉಂಟಾಗಿದೆ. ಅರಣ್ಯ ಹಕ್ಕು ಕಾಯ್ದೆ 2006ರ ಅನುಷ್ಠಾನದ ಹೊರತಾಗಿಯೂ ಅರಣ್ಯ ಇಲಾಖೆಗಳ ವಿವಿಧ ನಿಯಮಗಳು ಮತ್ತು ನಿಬಂಧನೆಗಳ ಕಾರಣದಿಂದಾಗಿ ಮತ್ತು ಅರಣ್ಯ ಅಧಿಕಾರಶಾಹಿಯ ತಪ್ಪು ವ್ಯಾಖ್ಯಾನಗಳಿಂದ ಅನೇಕ ರಾಜ್ಯಗಳು ಕಾಡುಗಳ ಪುನರ್ ನಿರ್ಮಾಣ, ರಕ್ಷಣೆ ಮತ್ತು ನಿರ್ವಹಣೆ ಹಕ್ಕುಗಳನ್ನು ಇನ್ನೂ ನೀಡಿಲ್ಲ. ಈ ಹಕ್ಕಿನ ಅನುಷ್ಠಾನ 10/ಕೂಡ ಆಗಿರುವುದಿಲ್ಲ.

ಮಹಾರಾಷ್ಟ್ರ ಒಡಿಸ್ಸಾ ದಂತಹ ರಾಜ್ಯಗಳು ಗ್ರಾಮಸಭೆಗಳಿಗೆ ಅರಣ್ಯ ಹಕ್ಕುಗಳ ಅನುಷ್ಠಾನಕ್ಕೆ ಸೂಕ್ಷ್ಮ ಯೋಜನೆಗಳನ್ನು ಯೋಚಿಸಲು ಆರ್ಥಿಕ ಬೆಂಬಲವನ್ನು ಒದಗಿಸಿದೆ. ಸಮುದಾಯ ಅರಣ್ಯ ನಿರ್ವಹಣೆಯಲ್ಲಿ ಡಿಪ್ಲೋಮೋ ಮುಂತಾದ ಕೋರ್ಸುಗಳು ಗ್ರಾಮಸಭೆಗಳ ಜನಪ್ರತಿನಿಧಿಗಳಿಗೆ ಶಿಕ್ಷಣ ನೀಡುವಲ್ಲಿ ನಿರ್ಣಾಯಕ ಎಂದು ಸಾಬೀತಾಗಿದೆ. ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಸಮುದಾಯ ಅರಣ್ಯ ಪ್ರದೇಶದ ಪುನರ್ನಿರ್ಮಾಣ ಮತ್ತು ಸಂರಕ್ಷಣೆಗಾಗಿ ಜಿಲ್ಲಾ ಮಟ್ಟದ ಸಮಿತಿಯ ಮೂಲಕ ಗ್ರಾಮಸಭೆಗಳಿಗೆ ಆರ್ಥಿಕ ಸಹಾಯವನ್ನು ವಿಸ್ತರಿಸಲಾಗುತಿದೆ. ಇಂದಿನ ಮೈಲಿಗಲ್ಲು ಉಪಕ್ರಮವನ್ನು ಅನುಸರಿಸಿ ಸಮುದಾಯ ಹಕ್ಕುಗಳನ್ನು ನೀಡುವ ಕಾರ್ಯವು ಇತರ ರಾಜ್ಯಗಳಲ್ಲಿಯೂ ವೇಗವನ್ನು ಪಡೆಯುವುದು.

ವನವಾಸಿ ಕಲ್ಯಾಣ ಕರ್ನಾಟಕವು ಬುಡಕಟ್ಟು ಸಮುದಾಯಗಳ ಎಲ್ಲ ಗುಂಪುಗಳನ್ನು ವಿಶೇಷವಾಗಿ ಅವರ ರಾಜಕೀಯ ಪ್ರತಿನಿಧಿಗಳು, ಸಾಮಾಜಿಕ ಕಾರ್ಯಕರ್ತರು, ಮತ್ತು ಸಮುದಾಯದ ವಿದ್ಯಾವಂತ ಯುವಕರನ್ನು ಗ್ರಾಮಗಳು , ಮಜರೆ ಅಥವಾ ಬಸ್ತಿ ಗಳಲ್ಲಿನ ಬುಡಕಟ್ಟು ಜನರಿಗೆ ಸಮುದಾಯ ಅರಣ್ಯ ಹಕ್ಕು ಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ಅರ್ಥಮಾಡಿಕೊಳ್ಳಲು ನಿಗದಿತ ವಿಧಾನವನ್ನು ಅನುಸರಿಸಿ ಅದಕ್ಕಾಗಿ ಅರ್ಜಿಸಲ್ಲಿಸಲು ಸಹಾಯ ಮಾಡಬೇಕೆಂದು ಕೋರುತ್ತದೆ.ಹಾಗೆ ಇವರೆಲ್ಲರೂ ಈ ಕುರಿತು ಜಾಗೃತಿ ಮೂಡಿಸಲು ಮತ್ತು ಅರಣ್ಯ ಸಂಪನ್ಮೂಲಗಳನ್ನು ಕಾಪಾಡಲು ಪುನರ್ ನಿರ್ಮಿಸಲು ಜನರನ್ನು ಒಗ್ಗೂಡಿಸಲು ವನವಾಸಿ ಕಲ್ಯಾಣ ಕರ್ನಾಟಕ ಮನವಿ ಮಾಡುತ್ತದೆ. ಇಂತಹ ಜನರ ನೇತೃತ್ವದ ಉಪಕ್ರಮಗಳು ಕಾಡುಗಳ ಪ್ರಕೃತಿಯ ಜೀವವೈವಿಧ್ಯತೆ ಸಂರಕ್ಷಣೆಯಲ್ಲಿ ಸ್ಥಳೀಯವಾಗಿ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಿ ಈ ಜನರು ಇತರ ಸ್ಥಳಗಳಿಗೆ ವಲಸೆ ಹೋಗುವುದನ್ನು ಕಡಿಮೆ ಮಾಡುತ್ತದೆ.

Image may be NSFW.
Clik here to view.
Image may be NSFW.
Clik here to view.

ಕೇಂದ್ರ ಸರ್ಕಾರದ ಈ ಘೋಷಣೆಯ ನಿಬಂಧನೆಗಳನ್ನು ಪ್ರತಿಯೊಂದು ರಾಜ್ಯವು ಸಂಪೂರ್ಣವಾಗಿ ಅನುಷ್ಠಾನಗೊಳಿಸಬೇಕು ಮತ್ತು ಪ್ರತಿ ಗ್ರಾಮ, ಪ್ರತಿ ಗ್ರಾಮಸಭೆಯ ಸಮುದಾಯ ಅರಣ್ಯ ಹಕ್ಕುಗಳನ್ನು ಅವರಿಗೆ ಕೊಡಬೇಕೆಂದು ನಾವು ರಾಜ್ಯ ಸರ್ಕಾರಗಳನ್ನು ಕೋರುತ್ತೇವೆ. ಗ್ರಾಮಸಭೆಗಳಿಗೆ ತಾಂತ್ರಿಕ ಮತ್ತು ಆರ್ಥಿಕ ನೆರವು ನೀಡುವ ಮೂಲಕ ಅವರಿಗೆ ಸಹಾಯ ಮತ್ತು ಸಹಕಾರ ನೀಡಿ ಆ ಮೂಲಕ ಬುಡಕಟ್ಟು ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿ ಜೀವನವನ್ನು ನಡೆಸುವಂತೆ ಮಾಡಬಹುದು.

ಇಂತಹ ನೀತಿಗಳನ್ನು ತಳಮಟ್ಟದಲ್ಲಿ ಜಾರಿಗೆ ತಂದಾಗ ಮಾತ್ರ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಹಾಗೂ ಪಂಡಿತ್ ದೀನದಯಾಳ ಉಪಾಧ್ಯಾಯರ ಅಂತ್ಯೋದಯ, ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತ ಇಂತಹ ದೃಷ್ಟಿಕೋನಗಳು ಸಾಕಾರಗೊಳ್ಳುತ್ತವೆ. ಆದ್ದರಿಂದ ಇಂದು ಮಾಡಿದ ಪ್ರಕಟಣೆಗಳ ಅನುಷ್ಠಾನದ ದೊಡ್ಡ ಜವಾಬ್ದಾರಿ ಆಯಾ ರಾಜ್ಯಗಳ ಅರಣ್ಯ ಸಚಿವಾಲಯ ಮತ್ತು ಬುಡಕಟ್ಟು ಸಚಿವಾಲಯಗಳ ಮೇಲಿದೆ ಎಂದು ನಾವು ನಂಬುತ್ತೇವೆ ಎಂದು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ, ವನವಾಸಿ ಕಲ್ಯಾಣ ಕರ್ನಾಟಕ ತಿಳಿಸಿದೆ.

Image may be NSFW.
Clik here to view.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>