Quantcast
Viewing all articles
Browse latest Browse all 1745

25 ಸೆಪ್ಟೆಂಬರ್ 2021: ಮಲಬಾರ್ ಹಿಂದೂ ನರಮೇಧಕ್ಕೆ 100 ವರ್ಷ

ಸರಿಯಾಗಿ 100 ವರ್ಷಗಳ ಕೆಳಗೆ, ನೆನಪಿರಲಿ ಆಗಿನ್ನೂ ತಾಲಿಬಾನ್, ಐಸಿಸ್ ತಲೆ ಎತ್ತಿರದ ಸಂದರ್ಭದಲ್ಲಿ, ಇಸ್ಲಾಮಿ ರಾಷ್ಟ್ರದ ಕಲ್ಪನೆ ಹೊತ್ತು ನಮ್ಮದೇ ದೇಶದ ಕೇರಳದಲ್ಲಿ ಮೊಪ್ಲಾ ಮುಸ್ಲಿಮರು ತಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದರು. ಅವರ ಇಸ್ಲಾಮಿಕ್ ಸ್ಟೇಟ್ ಸೇನೆಯಲ್ಲಿ 50 ಸಾವಿರಕ್ಕೂ ಮಿಕ್ಕಿದ ಅತ್ಯುಗ್ರ ಮೊಪ್ಲಾ ಮುಸ್ಲಿಮರು ಸೇರಿಕೊಂಡರು. ತಿಂಗಳುಗಳ ಕಾಲ ಮಲಬಾರ್ ಜಿಲ್ಲೆಯ ಆರು ತಾಲೂಕುಗಳಲ್ಲಿ ಹಿಂದೂಗಳನ್ನು ತಮ್ಮ ಭಯೋತ್ಪಾದನೆಯಿಂದ ಬೆಚ್ಚಿಬೀಳುವಂತೆ ಮಾಡಿದ್ದರು. ಹಿಂದೂಗಳ ಕೊಲೆ, ಆಸ್ತಿ ಹಾನಿ, ದರೋಡೆ, ಲೂಟಿ, ಹಿಂದೂಗಳನ್ನು ಒಕ್ಕಲೆಬ್ಬಿಸುವುದು, ಹಿಂದೂ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ, ಕೊಲೆ, ಬಲವಂತದ ಮತಾಂತರಗಳನ್ನು ಅಲ್ಲಿನ ಮುಗ್ಧ ಹಿಂದೂಗಳು ಎದುರಿಸಬೇಕಾಯಿತು. ಲೆಕ್ಕವಿಲ್ಲದಷ್ಟು ದೇವಸ್ಥಾನಗಳನ್ನು ಅಪವಿತ್ರ ಮಾಡುವ, ಕಾರ್ಯಕ್ಕೆ ಇಳಿಯಲು ಉಗ್ರರು ಹೇಸಲಿಲ್ಲ.

Image may be NSFW.
Clik here to view.

2 ಲಕ್ಷಕ್ಕೂ ಹೆಚ್ಚು ಹಿಂದೂಗಳು ನಿರಾಶ್ರಿತರಾಗಬೇಕಾದ ಸಂದರ್ಭ ಬಂದೊದಗಿತು. ಸ್ವಗೃಹಗಳನ್ನು ತ್ಯಜಿಸಿ ನಿರಾಶ್ರಿತ ಶಿಬಿರಗಳಲ್ಲಿ ನೆಲೆಸಬೇಕಾದ ಕಠಿಣ ಪರಿಸ್ಥಿತಿ 1921ರಲ್ಲಿ ಮಲಬಾರಿನ ಹಿಂದೂಗಳದ್ದಾಗಿತ್ತು.

ಮೊಪ್ಲಾ ಮುಸ್ಲಿಮರು ಗರ್ಭಿಣಿಯರ ಭ್ರೂಣವನ್ನು ಕಿತ್ತೊಗೆಯುವ, ಹಿಂದೂಗಳು ತಮ್ಮದೇ ಗೋರಿ ತೋಡಿಕೊಂಡು ಜೀವಂತ ಸಮಾಧಿಗೇರುವ, ಇಸ್ಲಾಮಿಗೆ ಮತಾಂತರಗೊಳ್ಳಲು ನಿರಾಕರಿಸಿದ ಹಿಂದೂಗಳನ್ನು ಕೊಂದೋ ಜೀವಂತವಾಗಿಯೋ ಬಾವಿ ಕೆರೆಗಳಿಗೆ ಎಸೆಯುವ ಕ್ರೂರ ಮನಸ್ಥಿತಿಗೆ ಮೊಪ್ಲಾ ಮುಸ್ಲಿಮರು ಧುಮುಕಿದರು.

Image may be NSFW.
Clik here to view.
ಕೃಪೆ: kreately.in

25 ಸೆಪ್ಟೆಂಬರ್ ಅನ್ನು ಮಲಬಾರ್ ಹಿಂದೂ ನರಮೇಧದ ದಿನ ಎಂದು ನೆನಪಿಸಿಕೊಳ್ಳಲಾಗುತ್ತದೆ. 1921 ರ ಇದೇ ದಿನ 50 ಹಿಂದೂಗಳ ಶಿರಚ್ಛೇದ ನಡೆಸಿ ಮಲಬಾರ್ ಜಿಲ್ಲೆಯ ತುವೂರ್ ತಾಲೂಕಿನ ಬಾವಿಯಲ್ಲಿ ಹೆಣಗಳನ್ನು ಎಸೆಯಲಾಗಿತ್ತು. ಮಲಬಾರಿನ ಮೊಪ್ಲಾ ಮುಸ್ಲಿಮರು ನಡೆಸಿದ್ದು ಅಮಾನವೀಯ ದುಷ್ಕೃತ್ಯ. ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಮರುಕಳಿಸದಿರಲಿ ಎಂಬ ಉದ್ದೇಶದಿಂದ, ಸಮಸ್ತ ಭಾರತೀಯರನ್ನು, ಮಾನವೀಯ ಮೌಲ್ಯಗಳನ್ನು, ಮಾನವೀಯತೆಯನ್ನು ಒಪ್ಪುವ ಎಲ್ಲರಿಗೂ ಇತಿಹಾಸದ ಈ ಕರಾಳ ಪುಟವನ್ನು ನೆನಪಿಸುವ ಉದ್ದೇಶವೇ ಸೆಪ್ಟೆಂಬರ್ 25ರ ಮಲಬಾರ್ ಹಿಂದೂ ನರಮೇಧ ನೆನಪಿನ ದಿನ.

ಸೆಪ್ಟೆಂಬರ್ 25ರ ದಿನವನ್ನು, ಆ ಸಂದರ್ಭದಲ್ಲಿ ನಡೆದ ನರಮೇಧವನ್ನು ಡಾ. ಬಿ ಆರ್ ಅಂಬೇಡ್ಕರ್ ಅವರು ” ಮೊಪ್ಲಾ ಹಿಂದೂ ನರಮೇಧ ಒಂದು ವರ್ಣಿಸಲಾಗದ ದುಷ್ಕೃತ್ಯ, ಸಮಸ್ತ ಹಿಂದುಗಳು ಭಯಭೀತರಾಗುವಂತೆ ಈ ಘಟನೆ ಮಾಡಿತ್ತು” ಎಂದು ಹೇಳಿದ್ದಾರೆ.

Image may be NSFW.
Clik here to view.
ಕೃಪೆ: kreately.in

Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>