Quantcast
Channel: News – Vishwa Samvada Kendra
Viewing all articles
Browse latest Browse all 1745

ಸೈನಿಕರ ತ್ಯಾಗ ಬಲಿದಾನಗಳಿಗೆ ಸಮಾಜ ಸಂವೇದನೆಯಿಂದ ಮಿಡಿಯಬೇಕು –ಚಿಂತಕ ಜಿ.ಬಿ.ಹರೀಶ್ ನುಡಿನಮನ

$
0
0

ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮವು ಸಿಟಿಜನ್ಸ್ ಫಾರ್ ಡೆಮಾಕ್ರಸಿಯ ವತಿಯಿಂದ ಬೆಂಗಳೂರು ನಗರದ ಪುಟ್ಟಣ್ಣ ಚೆಟ್ಟಿ ಟೌನ್‌ಹಾಲ್ನಲ್ಲಿ ನಡೆಯಿತು. ಸೇನೆಯ ಅನೇಕ ಹಿರಿಯ ಅಧಿಕಾರಿಗಳು,ಸಂತರು,ಸಿನೆಮಾ ಕಲಾವಿದರು,ಸಾಮಾಜಿಕ ಕಾರ್ಯಕರ್ತರು,ಚಿಂತಕರು ಸಂತಾಪ ಸಭೆಯಲ್ಲಿ ಭಾಗವಹಿಸಿ ನುಡಿನಮನವನ್ನು ಸಲ್ಲಿಸಿದರು.

ಖ್ಯಾತ ರಂಗಕರ್ಮಿ ಪ್ರಕಾಶ್ ಬೆಳವಾಡಿ ಮಾತನಾಡುತ್ತಾ ಸೇನೆಯ ಅಧಿಕಾರಿಗಳ ತ್ಯಾಗ ಬಲಿದಾನವನ್ನು ಸ್ಮರಿಸುತ್ತಾ, ಜನರಲ್ ರಾವತ್‌ರವರು ಮೂರೂ ಸೇನೆಯ ದಂಡನಾಯಕರಾಗಿ ರಕ್ಷಣೆಯ ಹೊಣೆ ಹೊತ್ತು ದೇಶವನ್ನು ಮುನ್ನಡೆಸಿದ್ದಾರೆ, ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಸಾವಿನ ಕುರಿತಾಗಿ ಅನೇಕ ವಿಕೃತಿಗಳನ್ನು ಮರೆದಿರುವುದು ವಿಷಾದನೀಯ ಎಂದರು.

ಚಿಂತಕರು ಹಾಗು ವಿಯಟ್ನಾಮ್ ವಿವೇಕಾನಂದ ಕೇಂದ್ರದ ನಿರ್ದೇಶಕರಾಗಿದ್ದ ಜಿ.ಬಿ.ಹರೀಶ್ ಮಾತನಾಡಿ ಸೈನಿಕರ ತ್ಯಾಗ ಬಲಿದಾನಗಳಿಗೆ ಸಮಾಜ ಸಂವೇದನೆಯಿಂದ ಮಿಡಿಯಬೇಕು,ಕಲಾವಿದರು ಕವಿಗಳು ಸಿನೇಮಾ ತಂತ್ರಜ್ಞರು ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ಸೈನಿಕರ ಬಲಿದಾನವನ್ನು ಸ್ಮರಿಸಬೇಕು ಎಂದರು.

ಚಿತ್ರ ಕಲಾವಿದೆ ಮಾಳವಿಕಾ ಅವಿನಾಶ್ ಅವರು ಮಾತನಾಡಿ ಜನರಲ್ ರಾವತ್‌ರವರು ದೇಶದ ಮೂರು ಸೇನಾ ವಿಭಾಗಗಳಿಗೆ ಮುಖ್ಯಸ್ಥರಾಗಿದ್ದು ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟವಾಗಿದ್ದು ಅವರ ಸಾವನ್ನು ಸಂಭ್ರಮಿಸಿದ ವಿಕೃತಿಗಳ ಮೇಲೆ ಕ್ರಮ ಕೈಗೊಳ್ಳಲು ಆದೇಶಿಸಿರುವುದು ಸ್ವಾಗತಾರ್ಹ ಎಂದರು.

ಕ್ಯಾಪ್ಟನ್ ನವೀನ್ ನಾಗಪ್ಪ ಸೈನಿಕರ ಶಿಸ್ತು ಶ್ರದ್ದೆಗಳು ಅವರ ಸಮವಸ್ತ್ರದೊಂದಿಗೇ ಕೂಡಿಕೊಂಡಿರುತ್ತದೆ,ಜನರಲ್ ರಾವತ್ ಅವರು ಹಾಗೆ ಶಿಸ್ತು ಶ್ರದ್ದೆಯಿಂದ ಸೇನೆಯಲ್ಲಿ ಸೇವೆ ಸಲ್ಲಿಸಿದವರು, ಅವರು ತಮ್ಮ ಕರ್ತವ್ಯದಲ್ಲಿ ನಿರತರಾಗಿದ್ದಾಗಲೇ ಹುತಾತ್ಮರಾಗಿದ್ದಾರೆ ಎಂದರು.

ರಾಮ್ ಮಾಧವ್, ಆರೆಸ್ಸೆಸ್ ಅಖಿಲ ಭಾರತೀಯ ಕಾರ್ಯಕಾರಿ ಸದಸ್ಯರು,ಮದನ್ ಗೋಪಾಲ್- ನಿವೃತ್ತ ಐ ಎ ಎಸ್ ಅಧಿಕಾರಿ,ವಿಭೂತಿಪುರ ಸ್ವಾಮೀಜಿ, ಬ್ರಿಗೇಡಿಯರ್ ರವಿ ಮುನಿಸ್ವಾಮಿ,
ಗೋಪಿನಾಥ್- ಕರ್ನಾಟಕ ಅಂಗವಿಕಲ ಕಿ.ದಾ ಸಂಘ ಹಾಗು ಇನ್ನಿತರರು ನುಡಿನಮನ ಸಲ್ಲಿಸಿದರು.

ಹಿರಿಯ ನಟಿ ತಾರಾ ಅನುರಾಧ, ಸಂತರಾದ ಅಭಿನವ ಹಾಲಶ್ರೀ ಸ್ವಾಮಿಜಿಯವರು,ಹಿರಿಯ ನಟ ಸೇತೂರಾಮ್ ,ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಇನ್ನಿತರರು ಭಾಗವಹಿಸಿದ್ದರು.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>