Quantcast
Channel: News – Vishwa Samvada Kendra
Viewing all articles
Browse latest Browse all 1745

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮನ್ವಯ ಸಭೆಯ ಕಾರ್ಯಸೂಚಿಗಳು –ಶ್ರೀ ಸುನೀಲ್ ಅಂಬೇಕರ್

$
0
0

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮಾಜ ಜೀವನದ ವಿಭಿನ್ನ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿರುವ ವಿವಿಧ ಸಂಘಟನೆಗಳ ಪ್ರಮುಖ ಪದಾಧಿಕಾರಿಗಳ ಸಮನ್ವಯ ಸಭೆ ಇಂದು ಭಾಗ್ಯನಗರ (ಹೈದರಾಬಾದ್),ತೆಲಂಗಾಣದಲ್ಲಿ ಆರಂಭವಾಗಿದೆ. 
ಈ ಸಭೆಯು ವರ್ಷದಲ್ಲಿ ಒಂದು ಬಾರಿ ನಡೆಯುವ ಪ್ರಮುಖ ಸಭೆಯಾಗಿದ್ದು ಸರಸಂಘಚಾಲಕರಾದ ಡಾ. ಮೋಹನ್‌ಭಾಗವತ್‌ಜೀ ಮತ್ತು ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆಯವರನ್ನೂ ಸೇರದಂತೆ ಎಲ್ಲಾ ಐದು ಸಹ-ಸರಕಾರ್ಯವಾಹರು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿವಿಧ ಪದಾಧಿಕಾರಿಗಳು ಉಪಸ್ಥಿತರಿರುತ್ತಾರೆ.
36ವಿಭಿನ್ನ ಸಂಘಟನೆಯ 190ಕ್ಕೂಹೆಚ್ಚು ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದಾರೆ. ಸರಕಾರೀ ಕೋವಿಡ್ ಶಿಷ್ಟಾಚಾರವನ್ನು ಪಾಲಿಸಲಾಗಿದ್ದು ಭಾಗವಹಿಸಿರುವ ಎಲ್ಲರಿಗೂ ಎರಡು ಡೋಸ್‌ಗಳ ಲಸಿಕೆ ಕಡ್ಡಾಯ ಮಾಡಲಾಗಿದೆ.
-ಇದು ನಿರ್ಣಯ ಪ್ರಕ್ರಿಯೆಗೆ ಇರುವ ಸಭೆಯಲ್ಲ,ಕೇವಲ ಮಾಹಿತಿ ಮತ್ತು ಅನುಭವಗಳನ್ನು ಕಲೆಹಾಕುವುದಕ್ಕಾಗಿ ಮಾತ್ರವೇ ಆಯೋಜಿಸಲಾಗುತ್ತದೆ.
-ಕಳೆದ ಬಾರಿ ಗುಜರಾತ್‌ನ ಕರ್ಣಾವತಿಯಲ್ಲಿ ಆಯೋಜಿತವಾಹಿದ್ದ ಇದೇ ಸಭೆಯಲ್ಲಿ ಆರ್ಥಿಕಕ್ಷೇತ್ರದ ಜತೆ ಅತ್ಯಂತ ನಿಕಟವಾದ ಸಂಪರ್ಕ ಹೊಂದಿರುವ ಭಾರತೀಯ ಮಜ್ದೂರ್ ಸಂಘ,ಸ್ವದೇಶಿ ಜಾಗರಣ ಮಂಚ್,ಲಘು ಉದ್ಯೋಗ ಭಾರತಿ ಹೀಗ ಅನೇಕ ಸಂಸ್ಥೆಗಳ ಜತೆಗೆ ದೇಶದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಯೋಜನೆಗಳ ಕುರಿತಾಗಿ ಚರ್ಚೆ ನಡೆಸಲಾಗಿತ್ತು. ಅವರು ಸರಕಾರೀನೀತಿ ಮತ್ತು ವಾಸ್ತವಿಕ ನೆಲೆಗಟ್ಟಿನಲ್ಲಿ ವಿಚಾರ ವಿಮರ್ಶೆಗಳನ್ನು ನಡೆಸಿದ್ದರು.
-ಈ ಸಾಲಿನಲ್ಲಿ ಭಾರತ ಕೇಂದ್ರೀತ ಶಿಕ್ಷಣದ ಮೇಲೆ ಶಿಕ್ಷಣಕ್ಕೆ ಸಂಬಂಧಿಸಿದ ಸಂಘಟನೆಗಳಾದ ವಿದ್ಯಾಭರತಿ,ಎಬಿವಿಪಿ,ಭಾರತೀಯ ಶಿಕ್ಷಣ ಮಂಡಲ ಹೀಗೇಶಿಕ್ಷಣ ಸಂಬಂಧಿತ ಚರ್ಚೆ ನಡೆಯಲಿದ್ದು,ಈ ಕುರಿತಾಗಿ ಅನೇಕ ವಿಚಾರ ವಿಮರ್ಶೆಗಳು ನಡೆಯಲಿದೆ.
ಕೋವಿಡ್‌ನ ಈ ಪರಿಸ್ಥಿತಿಯಲ್ಲಿ ಸೇವಾಭಾರತಿಯ ಮುಂದಾಳತ್ವದಲ್ಲಿ ಮಕ್ಕಳ ಆರೋಗ್ಯ ಹಾಗು ಕುಪೋಷಣೆಯನ್ನು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಸ್ತರಗಳ ವಿಚಾರ ವಿಮರ್ಶೆಗಳು ನಡೆಯಲಿದೆ.
ಮುಂಬರುವ ದಿನಗಳಲ್ಲಿ ಸಂಘದ ಸ್ಥಾಪನೆಯಾಗಿ ನೂರು ವರ್ಷಗಳು ಪೂರೈಸುವ ಹಿನ್ನೆಲೆಯಲ್ಲಿ ಪರಿಸರ,ಪರಿವಾರ ಪ್ರಬೋಧನ,ಮತ್ತು ಸಾಮಾಜಿಕ ಸಾಮರಸ್ಯದ ಕುರಿತಾಗಿ ಮುಖ್ಯವಾದ ಕಾರ್ಯಗಳ ಕುರಿತಾಗಿ ಚರ್ಚೆ ಕೇಂದ್ರೀಕೃತವಾಗಿರಲಿದೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಎಲ್ಲ ಸಂಘದ ಸಂಘಟನೆಗಳೂ ಶಾಮೀಲಾಗಲಿದ್ದು  ಆಯೋಜನೆಗೊಳ್ಳಲಿರುವ ವಿಶೇಷ ಕಾರ್ಯಕ್ರಮಗಳ ಕುರಿತಾಗಿಯೂ ವಿಶೇಷ ಚರ್ಚೆ ನಡೆಯಲಿದೆ.
7ಜನವರಿ 2022ರ ಮಧ್ಯಾಹ್ನ 12-30ಗೆ ಡಾ.ಮನಮೋಹನ್‌ ವೈದ್ಯ,ಸಹ-ಸರಕಾರ್ಯವಾಹರು ನಡೆಸುವ ಪತ್ರಿಕಾ ಗೋಷ್ಠಿಯಲ್ಲಿ ಈ ಎಲ್ಲ ಚರ್ಚೆಗಳಿಗೆ ಸಂಬಂಧಿಸಿದಂತೆ ವಿಚಾರ ವಿಮರ್ಶೆಗಳ ಒಟ್ಟು ಚಿತ್ರಣ ಸಿಗಲಿದೆ.


ಸುನೀಲ್ ಅಂಬೇಕರ್,

ಅಖಿಲ ಭಾರತೀಯ ಪ್ರಚಾರ್ ಪ್ರಮುಖ್

ರಾಷ್ಟ್ರೀಯ ಸ್ವಯಂಸೇವಕ ಸಂಘ


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>