




ಹಿರಿಯ ಪ್ರಚಾರಕರಾಗಿದ್ದ ಮಾ. ಶ್ರೀ. ಕೃ. ಸೂರ್ಯನಾರಾಯಣರಾವ್‌ರವರ ಕುರಿತಾದ ಪುಸ್ತಕ “ಉತ್ತುಂಗ” ಮತ್ತು ಹೊ.ವೆ ಶೇಷಾದ್ರಿಯವರ “ಪ್ರಬಂಧ ಸಂಚಯ” ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಇದೇ ದಿನಾಂಕ 24, ಸೋಮವಾರದಂದು ಸಂಜೆ 6.30ಕ್ಕೆ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ನಡೆಯಿತು.
ಸೂರುಜೀಯವರ ಒಡನಾಡಿಗಳು ಮತ್ತು ಹಿರಿಯ ಸ್ವಯಂಸೇವಕರಾದ ಶ್ರೀ ನಾಗಪ್ಪ ಕೋಣಿಯವರು ಎರಡೂ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಮತ್ತು ಜೇಷ್ಠ ಪ್ರಚಾರಕರಾದ ಶ್ರೀ ಸು ರಾಮಣ್ಣರವರು ಪುಸ್ತಕಗಳ ಕುರಿತು ಮಾತನಾಡಿದರು.
ಹುಬ್ಬಳ್ಳಿ ಮಹಾನಗರ ಮಾನ್ಯ ಸಂಘಚಾಲಕರಾದ ಶ್ರೀ ಶಿವಾನಂದ ಆವಟಿ, ಶಿವಕೃಪಾ ಟ್ರಸ್ಟ್‌ನ ಅಧ್ಯಕ್ಷರಾದ ಶ್ರೀ ಅಮರ ಟಿಕಾರೆ ವೇದಿಕೆ ಮೇಲೆ ಉಪಸ್ಥಿತರಿದ್ದರು.ಟ್ರಸ್ಟಿನ ಸದಸ್ಯರಾದ ಶ್ರೀ ವೆಂಕಟೇಶ ಕರಿಕಲ್, ಪ್ರಾಂತ ಕಾರ್ಯಕಾರಿಣಿ ಸದಸ್ಯರಾದ ಶ್ರೀ ಶ್ರೀಧರ ನಾಡಿಗೇರ್, ಶ್ರೀ ಶಶಿಧರ ನರೇಂದ್ರ, ಶ್ರೀ ಮುಕುಂದ ಪೂಜಾರ ಹಾಜರಿದ್ದರು.