Quantcast
Channel: News – Vishwa Samvada Kendra
Viewing all articles
Browse latest Browse all 1745

ಸಾಧನೆಯ ಸಾಕಾರಮೂರ್ತಿ ಲತಾ ಮಂಗೇಶ್ಕರ್ –ಶ್ರೀ ಮೋಹನ್ ಭಾಗವತ್

$
0
0

ಭಾರತ ರತ್ನ ಸ್ವರ್ಗೀಯ ಲತಾ ಮಂಗೇಶ್ಕರ್‌ರವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪೂಜನೀಯ ಸರಸಂಘಚಾಲಕರಾದ ಶ್ರೀ ಮೋಹನ್ ಭಾಗವತ್‌ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

“ಭಾರತ ರತ್ನ ಶ್ರೀಮತಿ ಲತಾ ಮಂಗೇಶ್ಕರ್ ಅವರ ನಿಧನ ಕೇವಲ ನನಗೆ ಮಾತ್ರವಲ್ಲ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ ವೇದನೆ ಹಾಗು ಸಂಕಟ ಆವರಿಸಿದೆ,ಅದನ್ನು ಕೇವಲ ಶಬ್ದಗಳಲ್ಲಿ ವರ್ಣನೆ ಮಾಡುವುದು ಕಠಿಣ.ಎಂಟು ದಶಕಕ್ಕಿಂತಲೂ ಹೆಚ್ಚು ಕಾಲ ಅವರ ಸ್ವರದಮಳೆಯಲ್ಲಿ ಪ್ರತಿಯೊಬ್ಬ ಭಾರತೀಯರನ್ನು ತೋಯಿಸಿ, ತೃಪ್ತಗೊಳಿಸಿ, ಶಾಂತಗೊಳಿಸಿ ಆನಂದಗೊಳಿಸಿದ ಆ ಮಧುರ ಕಂಠವನ್ನು ನಾವಿಂದು ಕಳೆದುಕೊಂಡಿದ್ದೇವೆ.ಆ ಸ್ವರದ ಮಳೆ ಇನ್ನು ನಮಗೆ ದೊರೆಯುವುದಿಲ್ಲ.”

“ಲತಾ ಮಂಗೇಶ್ಕರ್ ಅವರು ಶುದ್ಧತೆಗೆ, ಸಾಧನೆಗೆ ಪ್ರತಿಮಾ ಮೂರ್ತಿಯಾಗಿದ್ದವರು.ಅವರ ಸಂಗೀತದ ಸಾಧನೆಯಂತೂ ಜನಜನಿತವಾಗಿರುವಂತದ್ದು.ಇಷ್ಟು ದೊಡ್ಡ ಸ್ವರ ಸಿದ್ಧ ಗಾಯಕಿಯಾದ ಮೇಲೂ ಯಾವುದೇ ಗೀತೆ ಹಾಡುವ ಮೊದಲು ತಾವು 13ನೆಯ ವಯಸ್ಸಿನಲ್ಲಿ  ಹಾಡಲು ಆರಂಭಿಸಿದಾಗ ಹೇಗೆ ಅಭ್ಯಾಸ ಮಾಡುತ್ತಿದ್ದರೋ ಹಾಗೆಯೇ ಪ್ರತಿ ಹಾಡನ್ನು ಅಷ್ಟೇ ಶ್ರದ್ಧೆಯಿಂದ ಅಭ್ಯಾಸ ಮಾಡುತ್ತಿದ್ದರು. ಇದು ಸಂಗೀತದ ಕ್ಷೇತ್ರದಲ್ಲಿ ಅವರ ತಪಸ್ಸು.”

“ಅವರ ವೈಯಕ್ತಿಕ ಜೀವನ,ಅವರ ಕೌಟುಂಬಿಕ ಜೀವನ,ಅವರ ಸಾಮಾಜಿಕ ಜೀವನ,ಅಥವಾ ವ್ಯಾವಹಾರಿಕ ಜೀವನ ಹೀಗೇ ಎಲ್ಲದರಲ್ಲೂ ಅವರ ನಿಲುವುಗಳು ಅತ್ಯಂತ ಶುದ್ಧ, ಮತ್ತು ಅದೆಲ್ಲವೂ ಅವರ ತಪಸ್ಸಿನ ಪ್ರತಿಬಿಂಬವಾಗಿ,ಸಾಧನೆಯ ಸಾಕಾರ ಮೂರ್ತಿಯಾಗಿ ಎಲ್ಲರಿಗೂ ಉದಾಹರಣೆಯಾಗಿ ನಿಂತವರು,ಮತ್ತು ಅನುಕರಣೀಯರು ಲತಾ ಮಂಗೇಶ್ಕರ್‌ರವರು.”

“ಹೀಗೆ ಎಲ್ಲದರಲ್ಲೂ ಯಶಸ್ವಿ ಮತ್ತು ಸಾರ್ಥಕ ಜೀವನದ ಉದಾಹರಣೆ ನಮ್ಮೆದುರು ಇಟ್ಟಿರುವ ಲತಾ ಮಂಗೇಶ್ಕರ್ ಇನ್ನಿಲ್ಲ.ನಮಗೆ ಅವರ ಅಗಲಿಕೆಯ ದುಃಖವನ್ನು ಸಹಿಸುವ ಧೈರ್ಯವನ್ನು ಮತ್ತು ಮಂಗೇಶ್ಕರ್ ಪರಿವಾರಕ್ಕೂ ಈ ಆಘಾತವನ್ನು ಸಹಿಸುವ ಧೈರ್ಯವನ್ನು ಭಗವಂತ ನೀಡಲಿ.”

“ಅವರ ಪವಿತ್ರ ಸ್ಮೃತಿಯು ಅವರ ಭೌತಿಕ ರೂಪದಲ್ಲಿ ನೋಡಲು ನಮಗೆ ಸಾಧ್ಯವಾಗದೆ ಇರಬಹುದು ಆದರೆ ಅವರ ಸ್ವರಗಳ ರೂಪದಲ್ಲಿ ಅವರ ನೆನಪು ನಮಗೆ ಸದಾ ಹಸಿರಾಗಿರುತ್ತದೆ.ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರವಾಗಿ ಹಾಗು ನಾನು ವ್ಯಕ್ತಿಗತವಾಗಿ ಶ್ರದ್ಧಾಂಜಲಿಯನ್ನು ಅರ್ಪಿಸುತ್ತಿದ್ದೇನೆ.”

-ಮೋಹನ್ ಭಾಗವತ್
ಸರಸಂಘಚಾಲಕರು
ರಾಷ್ಟ್ರೀಯ ಸ್ವಯಂಸೇವಕ ಸಂಘ


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>