ಮಾನ್ಯ ಅಖಿಲ ಭಾರತ ಪ್ರಚಾರ ಪ್ರಮುಖ್ ಶ್ರೀ ಸುನಿಲ್ ಅಂಬೇಕರ್‌ರವರು ಮಾರ್ಚ್ ೧೧ರಿಂದ ೧೩ರವರೆಗೆ ನಡೆಯಲಿರುವ ಅಖಿಲ ಭಾರತ ಪ್ರತಿನಿಧಿ ಸಭಾದ ಕುರಿತಾಗಿ ನೀಡಿರುವ ಮಾಧ್ಯಮ ಹೇಳಿಕೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ,
ಅಖಿಲ ಭಾರತ ಪ್ರತಿನಿಧಿ ಸಭಾ,
ಕರ್ಣಾವತಿ, ಗುಜರಾತ್
ಮಾರ್ಚ್ 11-13, 2022
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಪ್ರತಿನಿಧಿ ಸಭೆಯ ವಾರ್ಷಿಕ ಸಭೆಯು ಈ ವರ್ಷ ಮಾರ್ಚ್ 11 ಶುಕ್ರವಾರದಿಂದ ಮಾರ್ಚ್ 13 ಭಾನುವಾರದವರೆಗೆ ಗುಜರಾತ್‌ನ ಕರ್ಣಾವತಿಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಅನೇಕ ನಿರ್ಣಯಗಳನ್ನು ತೆಗೆದುಕೊಳ್ಳುವ ದೃಷ್ಟಿಯಿಂದ ಮಹತ್ವದ ಸಭೆಯಾಗಿದ್ದು ಮತ್ತು ಮುಂಬರುವ ವರ್ಷದ ಯೋಜನೆಗಳಿಗೆ ಅಂತಿಮ ರೂಪುರೇಷೆ ನೀಡಲಾಗುತ್ತದೆ.
ಕರೋನಾದಿಂದಾಗಿ, ಕಳೆದ ವರ್ಷ ಈ ಸಭೆಯನ್ನು ಸಣ್ಣ ಮಟ್ಟದಲ್ಲಿ ನಡೆಸಲಾಗಿತ್ತು ಮತ್ತು ಕೆಲವೇ ಕಾರ್ಯಕರ್ತರು ನೇರವಾಗಿ ಭಾಗವಹಿಸಲು ಸಾಧ್ಯವಾಯಿತು ಮತ್ತು ಉಳಿದ ಕಾರ್ಯಕರ್ತರು ತಮ್ಮ ಪ್ರಾಂತೀಯ ಕೇಂದ್ರಗಳಿಂದ ಆನ್‌ಲೈನ್‌ನಲ್ಲಿ ಸಭೆಯ ಸಂಪರ್ಕದಲ್ಲಿದ್ದರು. ಈ ವರ್ಷವೂ ಸಭೆಯು ಗುಜರಾತ್‌ನ ಕರೋನಾ ನಿರ್ಬಂಧಗಳನ್ನು ಗಮನದಲ್ಲಿಟ್ಟುಕೊಂಡು ಅಪೇಕ್ಷಿತ ಕಾರ್ಯಕರ್ತರ ಸಂಖ್ಯೆಯನ್ನು ಕಡಿಮೆ ಮಾಡಿದೆ, ಆದ್ದರಿಂದ ಎಲ್ಲಾ ಪ್ರತಿನಿಧಿಗಳನ್ನು ನಿರೀಕ್ಷಿಸಲಾಗುತ್ತಿಲ್ಲ.
ಅಖಿಲ ಭಾರತ ಪ್ರತಿನಿಧಿ ಸಭಾದಲ್ಲಿ ಪೂಜ್ಯ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್, ಸರಕಾರ್ಯವಾಹರಾದ ಗೌರವಾನ್ವಿತ ದತ್ತಾತ್ರೇಯ ಹೊಸಬಾಳೆ, ಸಹಸರಕಾರ್ಯವಾಹರಾದ ಶ್ರೀ ಕೃಷ್ಣಗೋಪಾಲ್,ಶ್ರೀ ಮನಮೋಹನ್ ವೈದ್ಯ, ಶ್ರೀ ಮುಕುಂದ್, ಶ್ರೀ ರಾಮ್ ದತ್, ಶ್ರೀ ಅರುಣ್ ಕುಮಾರ್ ಹಾಗೂ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿರುವರು. ಪ್ರಾಂತ್ಯಗಳ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಕ್ಷೇತ್ರೀಯ ಮತ್ತು ಪ್ರಾಂತದ ಸಂಘಚಾಲಕರು,ಕಾರ್ಯವಾಹರು,ಪ್ರಚಾರಕರ ಜತೆಗೆ ಸಂಘ ಪ್ರೇರಿತ ವಿವಿಧ ಸಂಘಟನೆಗಳ ಎಲ್ಲಾ ಕೇಂದ್ರೀಯ ಅಧಿಕಾರಿಗಳು ಮತ್ತು ಅವರ ಸಹಯೋಗಿಗಳೂ ಸಭೆಯಲ್ಲಿ ಉಪಸ್ಥಿತರಿರುತ್ತಾರೆ.
ಈ ಸಭೆಯಲ್ಲಿ ಹಿಂದಿನ ಬೈಠಕ್ಕಿನ ನಡಾವಳಿಗಳು, ಮುಂದಿನ ವರ್ಷದ ಕಾರ್ಯಗಳ ವಿಸ್ತರಣೆಯ ಯೋಜನೆ, ಸಂಘ ಶಿಕ್ಷಾ ವರ್ಗ ಯೋಜನೆ, ಪ್ರಸ್ತುತ ಪರಿಸ್ಥಿತಿ ಮತ್ತು ಪ್ರಸಕ್ತ ವಿದ್ಯಮಾನಗಳ ಕುರಿತಾದ ವಿಷಯಗಳ ಬಗ್ಗೆ ಪ್ರಸ್ತಾವನೆಗಳು ಚರ್ಚೆಗೆ ಬರಲಿದೆ.
ಸುನಿಲ್ ಅಂಬೇಕರ್
ಅಖಿಲ ಭಾರತ ಪ್ರಚಾರ ಪ್ರಮುಖ್
ರಾಷ್ಟ್ರೀಯ ಸ್ವಯಂಸೇವಕ ಸಂಘ
ಮಾರ್ಚ್ 03, 2022