ರಾಷ್ಟ್ರೋತ್ಥಾನ ಪರಿಷತ್ ಒಂದು ಸಾಮಾಜಿಕ ಸೇವಾಸಂಸ್ಥೆಯಾಗಿದ್ದು, ಕಳೆದ 50 ವರ್ಷಗಳಿಂದ ಸೇವೆ, ಶಿಕ್ಷಣ, ಜಾಗೃತಿ – ಕ್ಷೇತ್ರಗಳ ಮೂಲಕ ಸಮಾಜದಲ್ಲಿ ಗುರುತರವಾದ ಕಾರ್ಯಗಳನ್ನು ಮಾಡುತ್ತಿದೆ. “ಜಾಗರಣ”ದ ಮೂಲಕ ಸೇವಾಬಸ್ತಿ (ಸ್ಲಂ)ಗಳಲ್ಲಿನ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ, ಸಂಸ್ಕಾರಗಳನ್ನು ಕೊಡುವುದರ ಮೂಲಕ ಅಲ್ಲಿನ ಜನರ ಜೀವನ ಉತ್ತಮವಾಗುವಂತೆ ಮಾಡಿದೆ. ರಾಷ್ಟ್ರೋತ್ಥಾನ ರಕ್ತನಿಧಿ ಕರ್ನಾಟಕ ರಾಜ್ಯಸರ್ಕಾರದಿಂದ “ಉತ್ತಮ ರಕ್ತನಿಧಿ” ಎಂಬ ಹೆಗ್ಗಳಿಕೆ ಪಡೆದು ಲಕ್ಷಾಂತರ ರೋಗಿಗಳಿಗೆ ರಕ್ತವನ್ನು ಸರಬರಾಜು ಮಾಡುತ್ತಿದೆ. ಅಲ್ಲದೆ ತಲೆಸ್ಸೀಮೀಯದಿಂದ ಬಳಲುತ್ತಿರುವವರಿಗೆ ಉಚಿತವಾಗಿ ರಕ್ತಪೂರಣ ಹಾಗೂ ಚಿಕಿತ್ಸೆಯನ್ನು ನೀಡುತ್ತಿದೆ. ಅವಕಾಶ ವಂಚಿತ ಮಕ್ಕಳಿಗೆ ನಂದಗೋಕುಲದ ಮೂಲಕ ಅವರಿಗೆ ವಸತಿಸಹಿತ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿದೆ.
Clik here to view.

ತಪಸ್ / ಸಾಧನಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ
ತಪಸ್ ಯೋಜನೆ (ಗಂಡು ಮಕ್ಕಳಿಗೆ)- ಆರ್ಥಿಕವಾಗಿ ಹಿಂದುಳಿದಿರುವ, ಪ್ರತಿಭಾವಂತ ಗಂಡು ಮಕ್ಕಳಿಗೆ ಪಿ.ಯು. ಶಿಕ್ಷಣ ಹಾಗೂ IIT-JEE ಪ್ರವೇಶಕ್ಕೆ ವಿಶೇಷ ತರಬೇತಿ ನೀಡಲಾಗುವುದು. ಊಟ, ವಸತಿ, ಶಿಕ್ಷಣ ಸಂಪೂರ್ಣ ಉಚಿತವಾಗಿರುತ್ತದೆ.
ಸಾಧನಾ ಯೋಜನೆ (ಹೆಣ್ಣು ಮಕ್ಕಳಿಗೆ) ಆರ್ಥಿಕವಾಗಿ ಹಿಂದುಳಿದಿರುವ ಪ್ರತಿಭಾವಂತ
ಬಾಲಕಿಯರಿಗೆ ಪಿ.ಯು.ಜೊತೆಗೆ KVPY,NEET, CET, JEE ಗೆ ವಿಶೇಷ ತರಬೇತಿ- ಸಂಪೂರ್ಣ ಉಚಿತ.
ಅರ್ಹತೆಗಳು:
1. ಪ್ರಸ್ತುತ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು. 9ನೇ ತರಗತಿಯಲ್ಲಿ ಶೇ.80 ಅಂಕ ಗಳಿಸಿರಬೇಕು.
2. ಕುಟುಂಬದ ವಾರ್ಷಿಕ ಆದಾಯ ರೂ. 2.0 ಲಕ್ಷಕ್ಕೂ ಮೀರಿರಬಾರದು.
3. ಆಯ್ಕೆಯಾದ ವಿದ್ಯಾರ್ಥಿಗಳು ಪಿ.ಯು. ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಂದುವರಿಸಲು ಸಿದ್ಧರಿರಬೇಕು.
4. ಮುಂಬರುವ ಹತ್ತನೇ ತರಗತಿ ಪರೀಕ್ಷೆಯಲ್ಲೂ ಶೇ.90 ಕ್ಕೂ ಹೆಚ್ಚು ಅಂಕಗಳನ್ನು ಗಳಿಸಬೇಕು.
ಆಯ್ಕೆ ವಿಧಾನ:
1. ಅರ್ಜಿಗಳನ್ನು ಆನ್‍ಲೈನ್‍ನಲ್ಲೇ ಸಲ್ಲಿಸಬೇಕು. www.tapassadhana.org ನಲ್ಲಿ ಅರ್ಜಿ
ಸಲ್ಲಿಸಿದ ತಕ್ಷಣ ಪರೀಕ್ಷಾ ಪ್ರವೇಶ ಪತ್ರ ದೊರೆಯುವುದು. ಅದನ್ನು ಮರೆಯದೇ ಪರೀಕ್ಷೆಗೆ ಬರುವಾಗ ತರಬೇಕು.
2. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜನವರಿ 10. ಪರೀಕ್ಷಾ ದಿನಾಂಕ: 2021 ಜನವರಿ
31 ರಂದು ಕರ್ನಾಟಕದ ಎಲ್ಲಾ ಜಿಲ್ಲಾ ಕೇಂದ್ರ ಮತ್ತು ಕೆಲವು ಪಟ್ಟಣಗಳಲ್ಲಿ ನಡೆಯಲಿದೆ.
3. ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಜನವರಿ 15 ರೊಳಗೆ ವೆಬ್‍ನಲ್ಲಿ ಪ್ರಕಟಿಸಲಾಗುವುದು.
4. ವಿದ್ಯಾರ್ಥಿಯ ಆಯ್ಕೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ನಡೆಯುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ www.tapassadhana.org
9481201144 / 9448284615 / 9844602529
The post ರಾಷ್ಟ್ರೋತ್ಥಾನ ಪರಿಷತ್ ನ ತಪಸ್ / ಸಾಧನಾ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ first appeared on Vishwa Samvada Kendra.