Quantcast
Viewing all articles
Browse latest Browse all 1745

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಂದ ಮತಾಂತರಕ್ಕೆ ಕುಮ್ಮಕ್ಕು: ಸಾರ್ವಜನಿಕರಿಂದ ತೀವ್ರ ಆಕ್ರೋಶ

ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಂದ ಮತಾಂತರಕ್ಕೆ ಕುಮ್ಮಕ್ಕು: ಸಾರ್ವಜನಿಕರಿಂದ ತೀವ್ರ ಆಕ್ರೋಶ


23-11-2020, ಚಾಮರಾಜನಗರ: ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಮತಾಂತರಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿರುವ ವಿಷಯ ಜಿಲ್ಲೆಯ ಸಾರ್ವಜನಿಕರು ಮತ್ತು ವಿವಿಧ ಸಂಘಟನೆಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

Image may be NSFW.
Clik here to view.

ಕೇವಲ ಪರೋಕ್ಷವಾಗಿ ಅಷ್ಟೇ ಅಲ್ಲದೆ ನೇರವಾಗಿಯೂ ಮತಾಂತರಿ ಕ್ರೈಸ್ತರೊಂದಿಗೆ ಶಾಮೀಲಾಗಿದ್ದಾರೆ ಎನ್ನುವ ಗಂಭೀರ ಆರೋಪವೂ ಕೇಳಿಬರುತ್ತಿದ್ದು, ಅವರ ಪತ್ನಿ ಕ್ರೈಸ್ತ ಮತೀಯರಾಗಿರುವುದೇ ಅದಕ್ಕೆ ಕಾರಣ ಎಂದೂ ಹೇಳಲಾಗುತ್ತಿದೆ.

ಈ ಹಿಂದೆ ಅವರು ಜವಳಿ ಇಲಾಖೆಯಲ್ಲಿದ್ದಾಗ ಮತ್ತು ಮೈಸೂರು ಜಿಲ್ಲೆಯ ಅಸಿಸ್ಟೆಂಟ್ ರೀಜನಲ್ ಕಮಿಷನರ್ ಆಗಿದ್ದಾಗಲೂ ಕ್ರೈಸ್ತ ಮತಾಂತರಿಗಳ ಕೆಲಸಕ್ಕೆ ಸಹಕರಿಸುತ್ತಿದ್ದರು ಎಂದು ಹೇಳಲಾಗುತ್ತಿದ್ದು ಕ್ರೈಸ್ತ ಮತ ವಿಸ್ತರಣೆಗೆ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ.

ಕೊರೋನಾ ಲಾಕ್ ಡೌನ್ ಸಮಯದಲ್ಲಿ ಚಾಮರಾಜನಗರ ಜಿಲ್ಲೆಯ ತಾಲ್ಲೂಕಿಗಳಿಗೆ ಆಹಾರ ಕಿಟ್ ಹಾಗೂ ಔಷಧ ವಿತರಣೆಯಂತಹ ಸೇವಾ ಕಾರ್ಯಗಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅನುಮತಿ ಕೋರಿದ್ದಾಗ ಅದಕ್ಕೆ ಅನುಮತಿ ಕೊಡಲು ನಿರಾಕರಿಸಿ “ನೀವು ಸಂಗ್ರಹಿಸಿರುವ ಸಾಮಗ್ರಿಗಳನ್ನು ನಮಗೇ ನೀಡಿ” ಎಂದು ಹೇಳಿದ್ದ ಅವರು, ಹನೂರಿನ ಹೋಲಿಕ್ರಾಸ್ ಸಂಸ್ಥೆಗೆ ಯಾವುದೇ ಷರತ್ತೂ ಇಲ್ಲದೆ ಪಾಸ್ ಗಳನ್ನು ನೀಡಿದ್ದರು ಮತ್ತು ತಮ್ಮ ಅಧಿಕಾರ ಬಳಸಿಕೊಂಡು ಸಾರ್ವಜನಿಕರಿಂದ ಆಹಾರ ಪದಾರ್ಥಗಳನ್ನು ಸಂಗ್ರಹಿಸಿ ಅದನ್ನು ಕ್ರೈಸ್ತರ ಮೂಲಕ ವಿತರಣೆ ಮಾಡಿಸಿದ್ದರು. ಈ ಪ್ರಕರಣವು ಮತಾಂತರಿ ಮಿಷನರಿಗಳು ಅವರನ್ನು ತಮ್ಮ ಪರವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಸಾಕ್ಷಿಯಾಗಿದೆ.

ಲಾಕ್ ಡೌನ್ ಸಮಯದಲ್ಲಿ ಕ್ರೈಸ್ತ ಪಾದ್ರಿಗಳಿಗೆ ಮಾತ್ರ ಸುಲಭವಾಗಿ ಜಿಲ್ಲೆಯೊಳಗೆ ಪ್ರವೇಶಿಸಲು ಅವಕಾಶ ನೀಡಿದ್ದು, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ದಾಸ್ ಎಂಬ ಅಧಿಕಾರಿಯು ದಿವ್ಯಾಂಗರ ಇಲಾಖೆಯಲ್ಲಿರುವ ಚಾಲಕ ಹಾಗು ನಾಲ್ಕನೇ ದರ್ಜೆಯ ಮೂವರು ನೌಕರರನ್ನು ಕ್ರೈಸ್ತ ಮತಕ್ಕೆ ಮತಾಂತರಿಸಿದ್ದು ಮುಂತಾದ ವಿಷಯಗಳೆಲ್ಲದರಲ್ಲೂ ಜಿಲ್ಲಾಧಿಕಾರಿಗಳ ಕೈವಾಡವಿದೆ ಎನ್ನುವ ಕೂಗೂ ಕೇಳಿಬರುತ್ತಿದೆ.

ಇಷ್ಟೇ ಅಲ್ಲದೆ ಹಿಂದೂ ದೇವಸ್ಥಾನಗಳಿಗೆ ಕ್ರೈಸ್ತರನ್ನು ನೇಮಿಸುವ ಯತ್ನವೂ ಅವರಿಂದ ನಡೆಯುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿದ್ದು, ಕಿಚ್ಚುಗತ್ತಿ ಮಾರಮ್ಮ ದೇವಾಲಯದ ಆಡಳಿತ ಮಂಡಳಿಗೆ ಸ್ಥಳೀಯ ಕ್ರೈಸ್ತ ಪಾದ್ರಿಗಳ ನೇಮಕ ಮತ್ತು ಅಲ್ಲಿನ ಸಮಸ್ಯೆಗಳ ಪರಿಹಾರ ಸಭೆಗಳಲ್ಲಿ ಕ್ರೈಸ್ತ ಪಾದ್ರಿಗಳ ಕಡ್ಡಾಯ ಉಪಸ್ಥಿತಿಗೆ ಆದೇಶವಿತ್ತಿರುವುದು ಆ ಆರೋಪಗಳನ್ನು ಪುಷ್ಟೀಕರಿಸುವಂತಿವೆ. ಹಿಂದೂ ದೇವಾಲಯಗಳ ಸಭೆಗಳಲ್ಲಿ ಪಾದ್ರಿಗಳಿಗೇನು ಕೆಲಸ ಎಂದು ಸ್ಥಳೀಯರು ಇದೀಗ ಧ್ವನಿ ಎತ್ತುತ್ತಿದ್ದಾರೆ.

Image may be NSFW.
Clik here to view.

ಇಷ್ಟೇ ಅಲ್ಲದೆ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನ,ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ಮತ್ತು ಮುಜರಾಯಿ ಇಲಾಖೆಯಡಿ ಬರುವ ಇನ್ನಿತರ ಎ ಮತ್ತು ಬಿ ದರ್ಜೆಯ ದೇವಾಲಯಗಳ ಕಾವಲಿಗೆ ಕ್ರೈಸ್ತ ಮತೀಯ ಮಾಜಿ ಸೈನಿಕರುಗಳಿಂದಲೇ ಅರ್ಜಿ ಸ್ವೀಕರಿಸಿ ಹಿಂದೂ ದೇವಾಲಯಗಳ ಕಾವಲಿಗೆ ಕ್ರಿಶ್ಚಿಯನ್ನರನ್ನೇ ತುಂಬುವ ತೆರೆಮರೆಯ ಕಸರತ್ತು ಕೂಡಾ ನಡೆಯುತ್ತಿರುವುದು ಜಿಲ್ಲೆಯ ಜನರ ಗಮನಕ್ಕೆ ಬಂದಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗುತ್ತಿದೆ.

ಇತ್ತೀಚಿಗೆ ವನವಾಸಿ ಕಲ್ಯಾಣ ಸಂಸ್ಥೆಯು “ಮತಾಂತರಿ ವನವಾಸಿಗಳಿಗೆ ನೀಡಲಾಗುತ್ತಿರುವ ಮೀಸಲಾತಿ ಸೌಲಭ್ಯವನ್ನು ಸ್ಥಗಿತಗೊಳಿಸಿ” ಎನ್ನುವ ಪ್ರತಿಭಟನೆ ನಡೆಸಿ,ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ತೆರಳಿದ್ದ ವನವಾಸಿ ಕಾರ್ಯಕರ್ತರ ಫೋಟೋ ತೆಗೆದುಕೊಂಡರೆ ಎಲ್ಲರ ಮೊಬೈಲ್ ಗಳಿಂದ ಆ ಫೋಟೋಗಳನ್ನು ಅಳಿಸಿ ಹಾಕಿಸಿದ್ದಲ್ಲದೆ ತಮ್ಮ ತೀವ್ರ ಕೋಪವನ್ನು ವ್ಯಕ್ತಪಡಿಸುವ ಮೂಲಕ ವನವಾಸಿಗಳ ಮತಾಂತರಕ್ಕೆ ತಮ್ಮ ಬೆಂಬಲವನ್ನು ಬಹಿರಂಗವಾಗಿಯೇ ಅವರು ತೋರ್ಪಡಿಸಿಕೊಂಡಿದ್ದರು.

ಜಿಲ್ಲಾಧಿಕಾರಿಗಳ ಈ ನಡೆಗಳನ್ನು ವಿರೋಧಿಸಿ,ಕ್ರಿಶ್ಚಿಯನ್ ಮಿಷನರಿಗಳ ಕೈಗೊಂಬೆಯಂತೆ ವರ್ತಿಸುತ್ತಿರುವುದನ್ನು ಖಂಡಿಸಿ ಮತಾಂತರ ವಿರೋಧಿ ಹೋರಾಟ ಸಮಿತಿಯು ನಗರದ ಮಾರಿಗುಡಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯ ವರೆಗೆ ಮೆರವಣಿಗೆ ನಡೆಸಿ ತನ್ನ ಪ್ರತಿಭಟನೆಯನ್ನು ದಾಖಲಿಸಲಿದೆ.ಜಿಲ್ಲಾಧಿಕಾರಿಗಳು ತಮ್ಮ ಮತಾಂತರಿ ನಿಲುವನ್ನು ಕೈಬಿಡದಿದ್ದರೆ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿಯೂ ಸಮಿತಿಯು ಎಚ್ಚರಿಸಿದೆ.

ವರದಿ : ಮೈಸೂರು ತಂಡ

Image may be NSFW.
Clik here to view.
Image may be NSFW.
Clik here to view.

The post ಚಾಮರಾಜನಗರ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರಿಂದ ಮತಾಂತರಕ್ಕೆ ಕುಮ್ಮಕ್ಕು: ಸಾರ್ವಜನಿಕರಿಂದ ತೀವ್ರ ಆಕ್ರೋಶ first appeared on Vishwa Samvada Kendra.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>