Quantcast
Channel: News – Vishwa Samvada Kendra
Viewing all articles
Browse latest Browse all 1745

ಹಿಂದೂ ವಿರೋಧಿ ‘ಷೇಕ್ ಚಿಲ್ಲಿ’ಕಾರ್ಯಕ್ರಮದ ಪ್ರಸಾರ ರದ್ದುಪಡಿಸಿದ ದೂರದರ್ಶನ

$
0
0

ಬೆಂಗಳೂರು: ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ಕಾರ್ಟೋನ್ ಧಾರಾವಾಹಿ ’ಷೇಕ್ ಚಿಲ್ಲಿ’ಯ ಹಿಂದುಗಳ ಭಾವನೆಗಳಿಗೆ ಧಕ್ಕೆ ತರುವ ಮಾಹಿತಿಗಳು ಪ್ರಸಾರವಾಗುತ್ತಿರುವುದರ ಕುರಿತು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಪ್ರಸಾರವನ್ನು ರದ್ದುಪಡಿಸುವುದಾಗಿ ಪ್ರಸಾರ ಭಾರತಿ ತಿಳಿಸಿದೆ.

ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ’ಷೇಕ್ ಚಿಲ್ಲಿ ಅಂಡ್ ಫ್ರೆಂಡ್ಸ್’ ಕಾರ್ಟೋನ್ ಸರಣಿಯಲ್ಲಿ ನಮ್ಮ ಪುರಾತನ ನಂಬಿಕೆಯ ಯೋಗ ಮತ್ತು ಸಾಧುಸಂತರನ್ನು ಅಪಹಾಸ್ಯಮಾಡುವಂತೆ ಕೀಳು ಅಭೀರುಚಿಯಲ್ಲಿ ಚಿತ್ರಿಸಿ ಪ್ರಸಾರ ಮಾಡಲಾಯಿತು ಜೊತೆಗೆ ಕಾರ್ಯಕ್ರಮದ ನಂತರ ಅದರ ತಯಾರಕರೂ ಸಹ ಯೋಗ ವಿದ್ಯೆ ಯನ್ನು ಮಾಂತ್ರಿಕ ಕ್ರಿಯೆ ಎನ್ನುವಂತೆ ಉಲ್ಲೇಖಿಸಿರುವುದು ಸಾರ್ವಜನಿಕರ ಾಕ್ರೋಶಕ್ಕೆ ಕಾರಣವಾಗಿದೆ.

ಕೊರೊನಾ ಸಂದರ್ಭದಲ್ಲಿ ಮನರಂಜನೆ ನೀಡುವ ದ್ದೇಶದಿಂದ ವಿವಿಧ ಹಳೆಯ ಹಾಗೂ ಮನರಂಜನೆ ನೀಡುವ ಧಾರವಾಹಿಗಳನ್ನು ಪ್ರಸಾರ-ಮರುಪ್ರಸಾರ ಮಾಡುವ ಮೂಲಕ ದೂರದರ್ಶನ ಜನಮೆಚ್ಚುಗೆ ಗಳಿಸಿರುವುದು ನಮಗೆಲ್ಲ ತಿಳಿದೇ ಇದೆ. ಇದೇ ರೀತಿ ಆಗಸ್ಟ್ 2020ರಲ್ಲಿ ಡಿಸ್ಕವರಿ ಕಿಡ್ಸ್ ವಿಭಾಗ ಕೆಲವು ಆಯ್ದ ಮಕ್ಕಳ  ಧಾರಾವಾಹಿಗಳನ್ನು ಪ್ರಸಾರ ಮಾಡಲು ದೂರ ದರ್ಶನ ನಿರ್ದರಿಸಿ ಡಿಸ್ಕವರಿ ಚಾನೆಲ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತು. ಅದರಂತೆ ಜುಲೈ ನಿಂದ ಅನೇಕ ಮಕ್ಕಳ ಕಥೆಗಳಾದ ಲಿಟ್ಲ್ ಸಿಂಘಮ್, ಕಿಸ್ನ ಮತ್ತು ಷೇಕ್ ಚಿಲ್ಲಿ  ಅಂಡ ಫ್ರಂಡ್ಸ್  ಮುಂತಾದ ಆಯ್ದ ಭಾಗಗಳ ಪ್ರಸಾರವನ್ನು ಪ್ರತಿದಿನ ಪ್ರಸಾರ ಮಾಡುತ್ತಿತ್ತು.

ಆದರೆ ಇತ್ತೀಚಿನ ಸಂಚಿಕೆಯಲ್ಲಿ ಭಾರತದ ಶ್ರೇಷ್ಠತೆ ಎಂದು ಜಗತ್ತು ಒಪ್ಪಿರುವ ಯೋಗ ಮತ್ತು  ಹಿಂದೂ ಸಾಧುಸಂತರನ್ನು ಅವಹೇಳನಕಾರಿಯಾಗಿ ಬಿಂಬಿಸುವ ವಿಡಿಯೋ ಸರಕಾರದ  ಅಂಗ ಸಂಸ್ಥೆಯಾಗಿರುವ ದೂರದರ್ಶನದಲ್ಲಿ ಪ್ರಸಾರವಾಗಿರುವುದು ಅನೇಕ ಸಹೃದಯರ ಆಕ್ರೋಶಕ್ಕೆ ಕಾರಣವಾಗಿದೆ.

ಅಂಕಣಗಾರ್ತಿ  ರೆನಿ ಲಿನ್  ಎಂಬುವರು ಈ ರೀತಿಯ ಹಿಂದೂ ಅವಹೇಳನದ ಬಗ್ಗೆ ಆಘಾತ ವ್ಯಕ್ತ ಪಡಿಸಿದ್ದಾರೆ. ಅದರಲ್ಲೂ ಒಬ್ಬ ಮುಸ್ಲಿಮ್ ಬಾಲಕ ಹಿಂದೂ  ಸನ್ಯಾಸಿಗೆ ಹೊಡೆಯುವ ದೃಶ್ಯ ರಾಷ್ಟ್ರೀಯ ಚಾನೆಲ್ ನ ಮೂಲಕ ಮಕ್ಕಳಿಗೆ ತೋರಿಸಿದರೆ ಔಚಿತ್ಯವೇನು? ಮತ್ತು ಯಾವಾಗಲೂ ಹಿಂದೂ ನಂಬಿಕೆಗಳನ್ನು ಅವಹೇಳನ ಮಾಡುವುದು ಏಕೆ ಎಂದು ಪ್ರಶ್ನಿಸಿದರು. ‘ಇದೊಂದು ರೀತಿಯಲ್ಲಿ ’ಹಿಂದೂ ಗುರುಗಳ ಅವಹೇಳನ’. ಯಾವ ರೀತಿಯಲ್ಲೂ ಒಪ್ಪಿಗೆಯಾಗುವಂತಹುದಲ್ಲ ಎಂಬುದು ಇನ್ನೊಬ್ಬ ವೀಕ್ಷಕರ ಅಭಿಪ್ರಾಯ. ಇನ್ನೊಬ್ಬರು  ಹೇಳುವಂತೆ ಇದು ಮಕ್ಕಳನ್ನು ತಪ್ಪು ದಾರಿಗೆ ಎಳೆಯುವುವಂತಿದೆ.

ಸಾರ್ವಜನಿಕ ಆಕ್ರೋಶಕ್ಕೆ ಮಣಿದ ಪ್ರಸಾರ ಭಾರತಿ ಇಡೀ ಕಾರ‍್ಯಕ್ರಮವನ್ನು ನಿಲ್ಲಿಸಿದ್ದೇವೆ ಎಂದು ತಿಳಿಸಿದೆ.

 

  • ಕೆ.ಎಸ್. ಸೋಮೇಶ್ವರ, ಬೆಂಗಳೂರು  -76

The post ಹಿಂದೂ ವಿರೋಧಿ 'ಷೇಕ್ ಚಿಲ್ಲಿ' ಕಾರ್ಯಕ್ರಮದ ಪ್ರಸಾರ ರದ್ದುಪಡಿಸಿದ ದೂರದರ್ಶನ first appeared on Vishwa Samvada Kendra.


Viewing all articles
Browse latest Browse all 1745

Trending Articles