Quantcast
Channel: News – Vishwa Samvada Kendra
Viewing all articles
Browse latest Browse all 1745

ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಮಾ.ಗೋ. ವೈದ್ಯ ನಿಧನ

$
0
0

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಚಿಂತಕ, ಲೇಖಕ, ಪತ್ರಕರ್ತ ಮಾ.ಗೋ. ವೈದ್ಯ(97) ಅವರು ಇಂದು ಮಧ್ಯಾಹ್ನ 3.30ಕ್ಕೆ ನಿಧನರಾದರು.

ಸಂಘ ಸ್ಥಾಪಕ ಕೇಶವ ಬಲಿರಾಮ ಹೆಡಗೆವಾರ್ ಅವರಿಂದ ಈಗಿನ ಸರಸಂಘಚಾಲಕರಾದ ಮೋಹನ್ ಭಾಗವತ್ ಸೇರಿದಂತೆ ಎಲ್ಲ 6 ಸರಸಂಘಚಾಲಕರೊಂದಿಗೆ ಮಾ.ಗೋ. ವೈದ್ಯ (ಮಾಧವ ಗೋವಿಂದ ವೈದ್ಯ) ಅವರಿಗೆ ಸಂಪರ್ಕವಿತ್ತು. ಮೂರು ನಿಷೇಧಗಳು, ಅವೆಷ್ಟೋ ಸಾಮಾಜಿಕ ಸ್ಥಿತ್ಯಂತರಗಳನ್ನು ಕಂಡಿದ್ದ ಹಿರಿಯ ಸ್ವಯಂಸೇವಕರು.

ಅವರು 9 ದಶಕಗಳ ಕಾಲ ಸಂಘದ ಸ್ವಯಂಸೇವಕರಾಗಿದ್ದರು.  ಆರೆಸ್ಸೆಸ್ ನ ಪ್ರಥಮ ಅಧಿಕೃತ ವಕ್ತಾರರಾಗಿ ಪ್ರಥಮ ಅಧಿಕೃತ ವಕ್ತಾರರಾಗಿ ಹಲವು ವರ್ಷ ಗಳಕಾಲ ಮಾರ್ಗದರ್ಶನ ಮಾಡಿದ್ದರು. ಅವರ ಸಂಪೂರ್ಣ ಕುಟುಂಬ ಸಂಘದೊಂದಿಗೆ ನಿಕಟ ಸಂಪರ್ಕ ಹೊಂದಿದೆ. ಈಗಿನ ಸಹಸರಕಾರ್ಯವಾಹ ಡಾ. ಮನಮೋಹನ್ ವೈದ್ಯ ಅವರು ಮಾ. ಗೋ. ವೈದ್ಯ  ಅವರ ಪುತ್ರ.

ಹಿರಿಯ ಸಂಸ್ಕೃತ ವಿದ್ವಾಂಸರಾಗಿದ್ದ ಅವರು ‘ತರುಣ ಭಾರತ’ ಎಂಬ ಪತ್ರಿಕೆಯ ಸಂಪಾದಕರಾಗಿದ್ದರು.

ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಅವರ ಅಂತ್ಯಕ್ರಿಯೆ ನಾಗಪುರದ ಅಂಬಾಜಾರಿ ಘಾಟ್ ನಲ್ಲಿ ನಾಳೆ ನಡೆಯಲಿದೆ.

ಮಾ.ಗೋ. ವೈದ್ಯ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ: ಮಾಧವ ಗೋವಿಂದ ವೈದ್ಯ ಓರ್ವ ಪ್ರಖ್ಯಾತ ಬರಹಗಾರ ಮತ್ತು ಪತ್ರಕರ್ತ. ಅವರು ದಶಕಗಳಿಂದ ಆರೆಸ್ಸೆಸ್ ಗೆ ವ್ಯಾಪಕಕೊಡುಗೆ ನೀಡಿದ್ದಾರೆ. ಬಿಜೆಪಿಯನ್ನು ಬಲಪಡಿಸುವ ಕೆಲಸವನ್ನೂ ಮಾಡಿದ್ದರು. ಅವರ ನಿಧನದಿಂದ ಬಹಳ ದುಃಖವಾಗಿದೆ.ಅವರ ಕುಟುಂಬದವರು ಮತ್ತು ಅಭಿಮಾನಿಗಳಿಗೆ ಸಂತಾಪ ಕೋರುತ್ತೇನೆ. ಓಂ ಶಾಂತಿ

ಸರಸಂಘಚಾಲಕರಾದ  ಮೋಹನ್ ಭಾಗವತ್ ಅವರಿಂದ ಸಂತಾಪ:

ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅವರಿಂದ ಸಂತಾಪ:

The post ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಮಾ.ಗೋ. ವೈದ್ಯ ನಿಧನ first appeared on Vishwa Samvada Kendra.


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>