
ಬೆಂಗಳೂರು: ರಾಷ್ಟ್ರಕವಿ ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಶ್ರೀರಾಮಾಯಣ ದರ್ಶನಂ, ಕಾನೂನು ಸುಬ್ಬಮ್ಮ ಹೆಗ್ಗಡತಿ ಸೇರಿದಂತೆ 56 ಪುಸ್ತಕಗಳು ಇದೀಗ ಮೈಲ್ಯಾಂಗ್ ಮೊಬೈಲ್ ಆ್ಯಪ್‌ನಲ್ಲಿ ಇ-ಪುಸ್ತಕ ರೂಪದಲ್ಲಿ ಲಭ್ಯವಿದೆ.
ಕುವೆಂಪು ಅವರ ಜನ್ಮ ದಿನದ ಅಂಗವಾಗಿ ಡಿ29ರಂದು ಫೇಸ್‌ಬುಕ್ ನೇರಪ್ರಸಾರದಲ್ಲಿ ಇ–ಪುಸ್ತಕಗಳ ರೂಪದಲ್ಲಿ ಮೈಲ್ಯಾಂಗ್ ಮೊಬೈಲ್ ಆ್ಯಪ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಕುವೆಂಪು ಅವರ ಪುತ್ರಿ ತಾರಿಣಿ ಚಿದಾನಂದ, ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಕೆ.ಚಿದಾನಂದ ಗೌಡ ಹಾಗೂ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಭಾಗವಹಿಸಿದ್ದರು.
ಕುವೆಂಪು ಅವರ ಪುತ್ರಿ ತಾರಿಣಿ ಅವರು ಮಾತಣಾಡಿ, ‘ಕುವೆಂಪು ಅವರು ಪ್ರಕಾಶನದ ಹೊಸ ಸಾಧ್ಯತೆಗಳ ಬಗ್ಗೆ ಹೆಚ್ಚು ಆಸಕ್ತರಾಗಿದ್ದರು. 1947ರ ಸ್ವಾತಂತ್ರ್ಯ ದೊರೆತ ದಿನ ಪ್ರಧಾನಿಗಳ ಭಾಷಣ ಕೇಳಬೇಕೆಂದು ಹೊಸ ರೇಡಿಯೋ ಖರೀದಿಸಿ ತಂದಿದ್ದರು ಹಾಗೂ ಮನೆಯವರೆಲ್ಲ ಸೇರಿ ರೇಡಿಯೋದಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳನ್ನು ಕೇಳಬೇಕೆಂದು ಕುವೆಂಪು ಆಶಿಸುತ್ತಿದ್ದರು ಎನ್ನುವುದುನ್ನು ನೆನಪಿಸಿಕೊಂಡರು. ಆ್ಯಪ್ ಮೂಲಕ ಪ್ರಪಂಚದೆಲ್ಲೆಡೆ ಮೊಬೈಲ್‌ನಲ್ಲೇ ಅವರ ಪುಸ್ತಕಗಳನ್ನು ಓದುವ ದಿನ ನೋಡಿದ್ದರೆ ಕುವೆಂಪು ಅವರು ಬಹಳ ಸಂತೋಷ ಪಡುತ್ತಿದ್ದರು ಎಂದರು.
ಪ್ರೊ.ಕೆ.ಚಿದಾನಂದ ಗೌಡ,‘ತಂತ್ರಜ್ಞಾನದ ಸಾಧ್ಯತೆಗಳಿಗೆ ತಕ್ಕಂತೆ ನಾವು ಬದಲಾಗಬೇಕು. ಇದು ಭಾಷೆಯನ್ನು ಬೆಳೆಸುವ ದಾರಿ. ಕುವೆಂಪು ಅವರ ಪುಸ್ತಕಗಳನ್ನು ಹೊಸಕಾಲದ ಸಾಧ್ಯತೆಗಳೊಂದಿಗೆ ಹೊಸ ಓದುಗರಿಗೆ ತಲಪುಲು ಸಾಧ್ಯವಾಗುತ್ತಿರುವುದು ಶ್ಲಾಘನೀಯ ಎಂದರು.
ನರಹಳ್ಳಿ ಬಾಲಸುಬ್ರ ಹ್ಮಣ್ಯ, ‘ಇಂದಿನ ಕಾಲಮಾನದ ತಲ್ಲಣಗಳಿಗೆ ಕುವೆಂಪು ಸಾಹಿತ್ಯದಲ್ಲಿ ಉತ್ತರ ಇದೆ. ರಾಜಕೀಯಕ್ಕಿಂತ ಹೆಚ್ಚಾಗಿ ಸಾಂಸ್ಕೃತಿಕ ಕೆಲಸಗಳ ಮೂಲಕ ಸಮಾಜದಲ್ಲಿ ಬದಲಾವಣೆ ಸಾಧ್ಯ’ ಎಂದು ತಿಳಿಸಿದರು.
ಕುವೆಂಪು ಅವರ ಪುಸ್ತಕಗಳನ್ನು www.mylang.in ಮೂಲಕ ಓದುಗರು ಮೊಬೈಲ್‌ನಲ್ಲಿ ಓದಬಹುದು.
ಮಾಹಿತಿ: ವಿವಿಧ ಪತ್ರಿಕೆಗಳಿಂದ
The post ಕುವೆಂಪು ಅವರ 56 ಪುಸ್ತಕಗಳು ಇ–ಪುಸ್ತಕಗಳ ರೂಪದಲ್ಲಿ ಲಭ್ಯ first appeared on Vishwa Samvada Kendra.