Quantcast
Channel: News – Vishwa Samvada Kendra
Viewing all articles
Browse latest Browse all 1745

ಪ್ರಜಾಪ್ರಭುತ್ವವು ಎರಡೂ ಕಡೆಯವರಿಗೆ ಅವಕಾಶವನ್ನು ಒದಗಿಸುತ್ತದೆ : ಭೈಯಾಜಿ ಜೋಶಿ

$
0
0

ರೈತರ ಹೋರಾಟದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ  ಭಯ್ಯಾಜಿ ಜೋಶಿ ಅವರ  ಹೇಳಿಕೆ


 ಪ್ರಜಾಪ್ರಭುತ್ವ ಎರಡೂ ಕಡೆಯವರಿಗೆ ಒಂದು ಅವಕಾಶವನ್ನು ಒದಗಿಸುತ್ತದೆ.  ನಾನು ಎರಡೂ ಕಡೆಯವರು ತಮ್ಮ ನಿಲುವಿನಲ್ಲಿ ಸರಿಯಾಗಿ ಇದ್ದಾರೆ ಎಂದು ಪರಿಗಣಿಸುತ್ತೇನೆ.  ಸಂವಾದದ ಮೂಲಕ ತಾವು ಏನನ್ನು ಪಡೆಯಬಹುದು ಎಂಬುದನ್ನು ಹೋರಾಟಗಾರರು ಪರಿಗಣಿಸಬೇಕು ಮತ್ತು ಒಪ್ಪಿಕೊಳ್ಳಬೇಕು.  ಇದಕ್ಕಿಂತ ಇನ್ನೇನು ಹೆಚ್ಚಿನದನ್ನು  ನೀಡಬಹುದು ಎಂಬುದರ ಕುರಿತು ಸರ್ಕಾರ ಯೋಚಿಸಬೇಕು.  ಆಂದೋಲನಗಳು ನಡೆಯುತ್ತವೆ ಮತ್ತು ಹಾಗೆಯೇ ಅವುಗಳು ಕೊನೆಗೊಳ್ಳುತ್ತವೆ.  ಆದ್ದರಿಂದ ಒಂದು ಚಳುವಳಿ ತಾನು ಹೊಂದಿರುವ ಸ್ಥಾನವನ್ನು ಪರಿಗಣಿಸಬೇಕು, ಮತ್ತು ಸರ್ಕಾರವು ತನ್ನ ಸ್ಥಾನದ  ಬಗ್ಗೆ ಜಾಗರೂಕವಾಗಿರಬೇಕು.  ಸರ್ಕಾರವು ಹಲವಾರು ಪೂರ್ವಸಿದ್ಧತೆಗಳನ್ನು  ಮಾಡಬೇಕಾಗಿರುವುದರಿಂದ, ಅದಕ್ಕೆ ಸೀಮಿತ ಸ್ಥಾನವಿದೆ (ಅವಕಾಶವಿದೆ) ಆದರೆ ಬೇಡಿಕೆಯಿರುವವರು (ಹೋರಾಟಗಾರರು) ಹೆಚ್ಚಿನ ಸ್ಥಾನ ಹೊಂದಿದ್ದಾರೆ.

 ರೈತರು ಕಾಯಿದೆಯಲ್ಲಿರುವ ಸಮಸ್ಯೆಗಳ ಬಗ್ಗೆ ಸರ್ಕಾರದೊಂದಿಗೆ ಚರ್ಚೆ ನಡೆಸಬೇಕು ಎಂದು ನಾನು ಬಯಸುತ್ತೇನೆ.  ಇಲ್ಲಿಯವರೆಗೆ, ಸರ್ಕಾರ ಚರ್ಚಿಸಲು ಸಿದ್ಧವಾಗಿದೆ ಎಂದು ತೋರುತ್ತದೆ.  ಎರಡೂ ಕಡೆಯಿಂದ ಸಕಾರಾತ್ಮಕ ಉಪಕ್ರಮ ಇರಬೇಕು.  ಚಳವಳಿಗಾರರು (ರೈತರು) ಸಹ ಸಕಾರಾತ್ಮಕ ವಿಧಾನವನ್ನು ಅನುಸರಿಸಿದರೆ ಅದು ಒಳ್ಳೆಯದು.

ಆದರೆ ಹೋರಾಟಗಳಿಗೆ ದೇಶದ ಇತರೆ ಭಾಗಗಳಿಂದ ಯಾವುದೇ ಬೆಂಬಲ ಸಿಗುತ್ತಿಲ್ಲ ಎಂಬುದನ್ನು ನಾವು ಗಮನಿಸಬಹುದು.  ಗುಜರಾತ್ ಮತ್ತು ಮಧ್ಯಪ್ರದೇಶದಂತಹ ಮತ್ತಿತರೆ ಸ್ಥಳಗಳಲ್ಲಿ  ರೈತರು ಸಹ ಕಾಯಿದೆಗಳ ಪರವಾಗಿ ಮಾತನಾಡುತ್ತಿದ್ದಾರೆ.  ಆಂದೋಲನ ನಡೆಸುತ್ತಿರುವ ರೈತರಲ್ಲೂ ಸಹ ಕಾಯಿದೆಗಳನ್ನು  ಬೆಂಬಲಿಸುವವರಿದ್ದಾರೆ. ಆದ್ದರಿಂದ ಚಳವಳಿಯೊಳಗೆ ಎರಡು ದೃಷ್ಟಿಕೋನಗಳಿವೆ ಎಂಬುದನ್ನು ನಾವು ಗಮನಿಸಬೇಕು.


Viewing all articles
Browse latest Browse all 1745

Latest Images

Trending Articles



Latest Images