Clik here to view.

ಮೂವತ್ತೇಳು ವರ್ಷದ ಸುಷ್ಮಾ ಭಾಡು ಹರಿಯಾಣದ ಧನಿ ಮಿಯಾನ್ ಖಾನ್ ಗ್ರಾಮದ ಬಿಷ್ಣೋಯ್ ಸಮುದಾಯಕ್ಕೆ ಸೇರಿದವರು. ಮತ್ತು ಅದರ ಸರ್ಪಂಚ್.
ಹೆಣ್ಣು ಮಗುವನ್ನು ತಿರಸ್ಕರಿಸುವ ರಾಜ್ಯದಲ್ಲಿ (ಹರ್ಯಾಣದಲ್ಲಿ) ಜನಿಸಿದ ಸುಷ್ಮಾ ಭಾಡು ಮಹಿಳೆಯರ ಹಕ್ಕುಗಳು ಮತ್ತು ಹೆಣ್ಣುಮಕ್ಕಳ ಉಳಿವಿಗಾಗಿ ಧನಿ ಮಿಯಾನ್ ಖಾನ್ ಪಂಚಾಯಿತಿಯನ್ನು ‘ಮಾದರಿ ಪಂಚಾಯತ್’ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
2010ರಲ್ಲಿ ಮೂರು ಗ್ರಾಮಗಳಾದ ಸಲಾಮ್ ಖೇರಾ, ಚಬ್ಲಮೋರಿ ಮತ್ತು ಧನಿ ಮಿಯಾನ್ ಖಾನ್ ಸರಪಂಚ್ ಆಗಿ ಚುನಾಯಿತರಾದ ಅವರು, ಮಹಿಳೆಯರು ಸಾರ್ವಜನಿಕ ಸ್ಥಳಗಳಲ್ಲಿ ಘುನ್‌ಘಾಟ್‌ನಿಂದ/ ಪರದೆಯಿಂದ ಆವರಿಸಿಕೊಳ್ಳಬೇಕು ಮುಂತಾದ ಶತಮಾನಗಳಷ್ಟು ಹಳೆಯದಾದ ಗೊಡ್ಡು ಸಂಪ್ರದಾಯದ ವಿರುದ್ದ ಹೋರಾಡಿದರು.
ಮೂವರ ತಾಯಿಯಾದ ಈಕೆ ಮಹಿಳೆಯರಿಗಾಗಿ ಟೈಲರಿಂಗ್ ತರಬೇತಿ ಕೇಂದ್ರವನ್ನೂ ನಿರ್ಮಿಸಿದರು. ಲೈಂಗಿಕ ನಿರ್ಣಯ ಪರೀಕ್ಷೆಗಳನ್ನು ಬಯಸುವ ಕುಟುಂಬಗಳನ್ನು ಬಹಿರಂಗಪಡಿಸಲು ಶಿಳ್ಳೆಗಾರರಿಗೆ 50,000 ರೂ.ಗಳವರೆಗೆ ಬಹುಮಾನವನ್ನು ಸಹ ಪರಿಚಯಿಸಿದರು ಮತ್ತು ಪ್ರತಿ ಹಳ್ಳಿಯ ಮಕ್ಕಳು ಶಾಲೆಗೆ ಹೋಗುವುದನ್ನು ಖಾತ್ರಿಪಡಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿ, ಅವರ ಹಳ್ಳಿಯು ಉತ್ತಮ ನೈರ್ಮಲ್ಯ ಪರಿಸ್ಥಿತಿಗಾಗಿ ನಿರ್ಮಲ್ ಪುರಸ್ಕಾರ್ ಪ್ರಶಸ್ತಿ, ಶೂನ್ಯ ಡ್ರಾಪ್ ರೇಟ್ ದರ ಮತ್ತು ಹರಿಯಾಣದ ಎಲ್ಲಾ ಹಳ್ಳಿಗಳಲ್ಲಿ ಅತ್ಯುತ್ತಮ ಲಿಂಗ ಅನುಪಾತಕ್ಕಾಗಿ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ.