ಪ್ರಬೋಧಿನೀ ಗುರುಕುಲದ ಅರ್ಧಮಂಡಲೋತ್ಸವ ದ ಹಿನ್ನೆಲೆಯಲ್ಲಿ ರಚಿಸಲಾದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ 7-3-21 ಭಾನುವಾರ ಗುರುಕುಲದಲ್ಲಿ ನೆರವೇರಿತು

ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಸದಾತನ ಪ್ರಬೋಧ ಹಾಗೂ “ಶಿಕ್ಷಾವಲಿ” ಎಂಬ ಎರಡು ಪುಸ್ತಕ ಗಳು ಲೋಕಾರ್ಪಣೆಗೊಂಡವು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘ ದ ಸಹಸರಕಾರ್ಯವಾಹ ಶ್ರೀ ಮುಕುಂದ ರವರು ಮುಖ್ಯ ಭಾಷಣ ಮಾಡಿ “ಭಾರತೀಯ ಸಂಸ್ಕೃತಿಯಲ್ಲಿ ವಿಕಾಸಗೊಂಡ ಅನೇಕ ಪಾರಂಪರಿಕ ವಿದ್ಯೆಗಳು ಪೀಳಿಗೆಯಿಂದ ಪೀಳಿಗೆಗೆ ವರ್ಗಾವಣೆ ಆಗುತ್ತಿದ್ದವು ಆದ್ದರಿಂದಲೇ ಅವೆಲ್ಲವೂ ಸಮಾಜದ ಉಪಯೋಗಕ್ಕೆ ಸಿಕ್ಕಿವೆ. ಪ್ರಾಚೀನ ಕಾಲದಲ್ಲಿ ಇಂತಹ ಜ್ಞಾನದ ರಕ್ಷಣೆಗಾಗಿಯೇ ಗುರುಕುಲಗಳು ತಲೆ ಎತ್ತಿ ನಿಂತಿದ್ದವು.
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಈ ಗುರುಕುಲದ ಪಾಲನೆ ಪೋಷಣೆ ಯ ಸಂಪೂರ್ಣ ಜವಾಬ್ದಾರಿಯನ್ನು ನಮ್ಮ ಸಮಾಜವೇ ನಿಭಾಯಿಸಬೇಕು. ದೇಶ ವಿದೇಶಗಳಲ್ಲಿ ಇಂದು ನಡೆಯುತ್ತಿರುವ ಇಂತಹ ಅನೇಕ ಶೈಕ್ಷಣಿಕ ಪ್ರಯೋಗಗಳನ್ನು ಪೋಷಿಸಿ ಬೆಳೆಸುವ ಹೊಣೆ ಸಮಾಜದ ಮೇಲಿದೆ ಎಂದರು
ಗ್ರಂಥ ಲೋಕಾರ್ಪಣೆ ನಡೆಸಿದ Life Line Feeds India Pvt.Ltd ಯ ಮಾಲಿಕರೂ ಅರ್ಧಮಂಡಲೋತ್ಸವ ಸಮಿತಿಯ ಉಪಾಧ್ಯಕ್ಷರೂ ಆದ ಶ್ರೀ ಕಿಶೋರ್ ಕುಮಾರ್ ಹೆಗ್ಡೆ ಯವರು ” ಎಕನಾಮಿಕ್ಸ್, ಫೈನಾನ್ಸ್ ಮುಂತಾದ ಆಧುನಿಕ ವ್ಯವಸ್ಥೆಗಳನ್ನು ಇನ್ನು ಮುಂದೆ ಭಾರತೀಯ ದೃಷ್ಟಿಯಿಂದ ನೋಡಬೇಕಾಗಿದೆ. ಆರ್ಥಿಕತೆಯನ್ನು ಅರ್ಥಮಾಡಿಕೊಂಡು ಮಾತಾಡಬಲ್ಲ ಜನ ಸಮುದಾಯ ನಮ್ಮದಾಗಬೇಕಿದೆ” ಎಂದು ನುಡಿದರು.

ಸ್ವಾಗತ ಸಮಿತಿಯ ಗೌರವಾಧ್ಯಕ್ಷರು ಹಾಗೂ ಇಂದಿನ ಸಭೆಯ ಅಧ್ಯಕ್ಷರೂ ಆದ ಶೃಂಗೇರಿ ಶಾರದಾ ಪೀಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಡಾ. ವಿ.ಆರ್ ಗೌರಿಶಂಕರ್ ರವರು ಗುರುಕುಲದಲ್ಲಿ ಪಾಲಿಸುತ್ತಿರುವ ಸಿಲಬಸ್ ನ್ನು ಹೊರಗಿನ ಶಾಲೆಗಳಿಗೆ ಅನ್ವಯವಾಗುವಂತೆ ಸರಳೀಕರಿಸಿ ಅಲ್ಲೂ ಕೂಡ ಗುರುಕುಲ ಸಂಸ್ಕೃತಿಯನ್ನು ತರಲು ಇದು ಸಕಾಲ. ಗುರುಕುಲವು 24 ವರ್ಷಗಳನ್ನು ಪೂರೈಸಿ ತಾರುಣ್ಯಾವಸ್ಥೆಯಲ್ಲಿದೆ ಮುಂಬರುವ ದಿನಗಳಲ್ಲಿ ಎಚ್ಚರಿಕೆಯ ಹಾಗೂ ದೃಢವಾದ ಹೆಜ್ಜೆಗಳನ್ನಿಟ್ಟಲ್ಲಿ 48 ವರ್ಷಗಳ ಪೂರ್ಣಮಂಡಲೋತ್ಸವವನ್ನು ಇನ್ನೂ ಅರ್ಥಪೂರ್ಣವಾಗಿ ಆಚರಿಸಬಹುದು ಎಂದರು.

ಅರ್ಧಮಂಡಲೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ರಾಜಗೋಪಾಲ್ ರವರು ಅರ್ಧಮಂಡಲೋತ್ಸವ ಹಿನ್ನೆಲೆಯಲ್ಲಿ ವರ್ಷವಿಡೀ ನಡೆದ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣವಾದ ಎಲ್ಲ ಕಾರ್ಯಕರ್ತರನ್ನು ನೆನಪಿಸಿಕೊಂಡು ಧನ್ಯವಾದ ಸಮರ್ಪಿಸಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯವಾಹ ಶ್ರೀ ಪಟ್ಟಾಭಿರಾಮ ರವರು ಆಶಯ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಗುರುಕುಲ ಪ್ರಕಲ್ಪಗಳ ರಾಷ್ಟ್ರೀಯ ಸಂಯೋಜಕರಾದ ಡಾ. ರಾಮಚಂದ್ರ ಭಟ್ ಕೋಟೆಮನೆ ಯವರು ಉಪಸ್ಥಿತರಿದ್ದರು


ಕುಟುಂಬ ಪ್ರಬೋಧನ ದ ಅಖಿಲಭಾರತ ಸಂಯೋಜಕ ಶ್ರೀ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ರಾಜ್ಯ ಕಾರ್ಯದರ್ಶಿ ಶ್ರೀ ನಾರಾಯಣ ಶೇವಿರೆ, ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕ ಶ್ರೀ ಹರಿಪ್ರಕಾಶ ಕೋಣೆಮನೆ, ವಿಧಾನ ಪರಿಷತ್ ಉಪಸಭಾಪತಿ ಶ್ರೀ ಪ್ರಾಣೇಶ್, ಮುಖ್ಯ ಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶ್ರೀ ಡಿ.ಎನ್ ಜೀವರಾಜ್, ಮುಂತಾದವರು ಉಪಸ್ಥಿತರಿದ್ದರು.