Quantcast
Channel: News – Vishwa Samvada Kendra
Viewing all articles
Browse latest Browse all 1745

ಸಾವಯವ ಕೃಷಿಕರಿಗೆ ಸ್ಫೂರ್ತಿ ಶತಾಯುಷಿ ಪಾಪಮ್ಮಾಳ್

$
0
0

 ಅವರ ವಯಸ್ಸು ಬರೋಬ್ಬರಿ 106! ಆದರೂ ಈ ಅಜ್ಜಿ ಕೃಷಿ ಕಾರ್ಯದಲ್ಲಿ ಬಲುಗಟ್ಟಿ. ಸಾವಯವ ಕೃಷಿಯಲ್ಲಿ ಅಪೂರ್ವ ಸಾಧನೆ ಮಾಡಿರುವ ತಮಿಳುನಾಡು ರಾಜ್ಯದ ಕೋಯಮತ್ತೂರು ಸಮೀಪದ ತೇಕಂಪತ್ತಿ ಗ್ರಾಮದ ಶತಾಯುಷಿ ಪಾಪಮ್ಮಾಳ್ ಅವರನ್ನು 2021ರ ಸಾಲಿನಲ್ಲಿ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ಅರಸಿ ಬಂದಿದೆ.

೧೯೧೪ರಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಪಾಪಮ್ಮಾಳ್ ಬಾಲ್ಯದಲ್ಲಿಯೇ ತಂದೆತಾಯಿಯರನ್ನು ಕಳೆದುಕೊಂಡವರು. ಇಬ್ಬರು ಸೋದರಿಯರ ಜೊತೆಗೆ ಅಜ್ಜಿಯ ಆರೈಕೆಯಲ್ಲಿ ಬಡತನದಲ್ಲೇ ಬೆಳೆದರು. ರೈತಾಪಿ ಕುಟುಂಬಕ್ಕೆ ಸೇರಿದ್ದರಿಂದ ಸಹಜವಾಗಿ ಕೃಷಿ ಕಾರ್ಯದಲ್ಲಿ ತೊಡಗಿಕೊಂಡ ಪಾಪಮ್ಮಾಳ್ ಕಠಿಣ ಪರಿಶ್ರಮದಲ್ಲಿ ನಂಬಿಕೆ ಇಟ್ಟವರು. ಕೃಷಿ ಕಾರ್ಯದಲ್ಲಿ ಮುಂದುವರಿದಂತೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವ ಸಲುವಾಗಿ ಅನೇಕ ಕಡೆಗಳಲ್ಲಿ ಕೃಷಿ ವಿಧಾನಗಳನ್ನು ತಿಳಿದುಕೊಳ್ಳಲು, ಕಲಿತಂತಹ ಆ ವಿಧಾನಗಳನ್ನು ತನ್ನ ಬೇಸಾಯದಲ್ಲಿ ಅಳವಡಿಸಲು ಮುಂದಾದರು. ಹಾಗಾಗಿ ತಮಿಳುನಾಡು ಕೃಷಿ ವಿಶ್ವವಿದ್ಯಾಲಯವನ್ನು ತಲುಪಿದ್ದಲ್ಲದೇ ಅನೇಕ ವರ್ಷಗಳಿಂದ ಕೃಷಿವಿಶ್ವವಿದ್ಯಾಲಯದ ಸಹಯೋಗದಲ್ಲಿ ಕೃಷಿ ನಡೆಸತೊಡಗಿದರು, ಅನೇಕ ಕೃಷಿ ಸಂಬಂಧಿತ ಸಭೆಗಳಲ್ಲಿ ಪಾಲ್ಗೊಂಡು ಹೊಸತನ್ನು ಕಲಿತು ಅವುಗಳ ಪ್ರಯೋಗವನ್ನು ತನ್ನ ಕೃಷಿಯಲ್ಲಿ ಆರಂಭಿಸಿದರು. ಅನೇಕ ಕಡೆಗಳಲ್ಲಿ ಅವರೊಬ್ಬರೇ ಇಂತಹ ಕೃಷಿಕ ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದ ಮಹಿಳೆ ಆಗಿರುತ್ತಿದ್ದರು. ಅಂತಹ ಒಂದು ಸಂದರ್ಭದಲ್ಲಿ ಯಾರೋ ಸಾವಯವ ಕೃಷಿಯ ಕುರಿತು ಹೇಳಿದ್ದು ಪಾಪಮ್ಮಾಳ್ ಅವರ ಕಿವಿಯ ಮೇಲೆಬಿತ್ತು. ಕೃಷಿಯಲ್ಲಿ ರಾಸಾಯನಿಕಗಳನ್ನು ಬಳಸುವುದುರಿಂದ ಭೂಮಿಯ ಮೇಲಾಗುವ ದುಷ್ಪರಿಣಾಮ, ರಾಸಾಯನಿಕ ಬಳಸಿ ಬೆಳೆದ ಆಹಾರ ಉತ್ಪನ್ನಗಳ ಅಡ್ಡಪರಿಣಾಮ, ಅವು ಗ್ರಾಹಕರಿಗೆ ಹೇಗೆ ವಿ?ಕಾರಕ ಇತ್ಯಾದಿಗಳನ್ನು ತಿಳಿದುಕೊಂಡ ಅವರು ರಾಸಾಯನಿಕ ಕೃಷಿಯನ್ನು ಬಿಟ್ಟು ಸಾವಯವ ವಿಧಾನದಲ್ಲಿ ಬೇಸಾಯ ಮಾಡಲು ತೀರ್ಮಾನಿಸಿದರು. ಅಂದಿನಿಂದ ಸಾವಯವ ಕೃಷಿಯಲ್ಲಿ ಮಾದರಿ ಬೇಸಾಯ ಮಾಡುತ್ತಿದ್ದಾರೆ ಕೃಷಿ ಮಹಿಳೆ ಪಾಪಮ್ಮಾಳ್. ತನ್ನ ಎರಡೂವರೆ ಎಕರೆ ಭೂಮಿಯಲ್ಲಿ ಹುರಳಿ, ಹೆಸರುಕಾಳು ಮೊದಲಾದುವನ್ನು ಬೆಳೆಯುತ್ತಿದ್ದರು, ಈಗ ಬಹುತೇಕ ಬಾಳೆಯನ್ನು ಬೆಳೆಯುತ್ತಾರೆ. ಕೃಷಿವಿಶ್ವವಿದ್ಯಾಲಯದ ವಿದ್ಯಾರ್ಥಿಗಳೂ ಸೇರಿದಂತೆ ಹಲವು ಕೃಷಿಕರು ಮಾರ್ಗದರ್ಶನ ಬಯಸಿ ಅವರ ತೋಟಕ್ಕೆ ಬರುತ್ತಾರೆ.

ನೂರು ವರ್ಷ ದಾಟಿದ್ದರೂ ಯುವಜನರೇ ನಾಚುವಂತೆ ಸ್ವತಃ ತಾನೇ ಗುದ್ದಲಿ ಹಿಡಿದು ತೋಟದ ಕೆಲಸ ಮಾಡುತ್ತಾರೆ. ಬೆಳಿಗ್ಗೆ ಆರರಿಂದ ಸಂಜೆಯ ತನಕ ಹೊಲದಲ್ಲಿ ದುಡಿಯುತ್ತಾರೆ. ಶಿಸ್ತುಬದ್ಧ ಶ್ರಮದ ದುಡಿಮೆ, ಸಾವಯವ ವಿಧಾನದಲ್ಲಿ ಬೆಳೆದ ಧಾನ್ಯ, ತರಕಾರಿ ಸೇವನೆ ಇವೇ ತನ್ನ ಆರೋಗ್ಯದ ಗುಟ್ಟು ಎನ್ನುತ್ತಾರೆ ಪದ್ಮಶ್ರೀ ಶತಾಯುಷಿ ಕೃಷಿ ಮಹಿಳೆ ಪಾಪಮ್ಮಾಳ್


Viewing all articles
Browse latest Browse all 1745

Trending Articles



<script src="https://jsc.adskeeper.com/r/s/rssing.com.1596347.js" async> </script>