Quantcast
Viewing all articles
Browse latest Browse all 1745

ನೀರಿಗಾಗಿ ಏಕಾಂಗಿಯಾಗಿ ಬಾವಿ ತೋಡಿದ್ದ ಗೌರಿ ನಾಯ್ಕಗೆ ‘ವೀರ ಮಹಿಳೆ’ ಪ್ರಶಸ್ತಿ

ನೀರಿಗಾಗಿ ಏಕಾಂಗಿಯಾಗಿ ಬಾವಿ ತೋಡಿದ್ದ ಗೌರಿ ನಾಯ್ಕಗೆ ‘ವೀರ ಮಹಿಳೆ’ ಪ್ರಶಸ್ತಿ

Image may be NSFW.
Clik here to view.

ಶಿರಸಿ ಮನೆ, ಚಿಕ್ಕ ತೋಟಕ್ಕೆ ನೀರಿನ ಸಮಸ್ಯೆ ಎದುರಾದಾಗ ಏಕಾಂಗಿಯಾಗಿ ಬಾವಿ ತೋಡಿ ನೀರು ಬರಲು ಕಾರಣರಾಗಿದ್ದ ಶಿರಸಿಯ ಸಾಹಸಿ ಮಹಿಳೆ ಗೌರಿ ಸಿ.ನಾಯ್ಕ ರವರಿಗೆ ಈ ಸಾಲಿನ ರಾಜ್ಯ ಮಟ್ಟದ ವೀರ ಮಹಿಳೆ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

2018 ರಲ್ಲಿ ನೀರಿಗಾಗಿ ಮಹಿಳೆ ಬಡತನದ ನಡುವೆ ತಾವೊಬ್ಬರೇ ಬಾವಿತೋಡಿ ನೀರು ಬರಲು ಕಾರಣರಾಗಿದ್ದರು. ಆಗ ಜಿಲ್ಲಾದ್ಯಂತ ಬಹಳ ಮೆಚ್ಚುಗೆಗೆ ಪಾತ್ರರಾಗಿದ್ದರು. ಇವರ ಸಾಹಸಕ್ಕೆ ಹಲವು ಸಂಘಟನೆಗಳು ಗೌರವಿಸಿದ್ದವು.

ಇದೀಗ ರಾಜ್ಯ ಸರ್ಕಾರ ಗುರುತಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯು ಈ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಊರು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಗಣೇಶನಗರ. ಇವರಿಗೆ 6 ಗುಂಟೆ ತೋಟ ಇದೆ. ಇದಕ್ಕೆ ನೀರಿನ ಕೊರತೆ ಎದುರಾದಾಗ ಸ್ವತಃ ಸಲಕರಣೆ ಹಿಡಿದು ಬರೋಬ್ಬರಿ 60 ಅಡಿ ಆಳದ ಬಾವಿಯನ್ನ ಒಬ್ಬರೇ ತೋಡಿ, ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ.  ಮಕ್ಕಳ ಸಹಾಯವನ್ನೂ ಪಡೆಯದೇ  ಪಾತಾಳದಿಂದ ಗಂಗೆ ಉಕ್ಕಿ ಬರೋವರೆಗೂ ಬಿಡದೇ, ದಿಟ್ಟತನ ಮೆರೆದ ಸಾಧಕಿ 52 ವರ್ಷದ ಗೌರಿ ನಾಯಕ್​​. ಮನಸ್ಸೊಂದಿದ್ರೆ ಬೆಟ್ಟವನ್ನು ಬೇಕಾದ್ರೂ ಬಾಗಿಸಬಹುದು ಎಂಬುದಕ್ಕೆ ಸಾಕ್ಷಿ ಈ ಆಧುನಿಕ ಭಗೀರಥಿ ಗೌರಿ ನಾಯಕ್.

ವರದಿ : ರಾಮದಾಸ್, ಕುಮುಟಾ


Viewing all articles
Browse latest Browse all 1745

Trending Articles