
ನವದೆಹಲಿ, ಮಾರ್ಚ್ 16: ಜಮ್ಮು ಕಾಶ್ಮೀರದಲ್ಲಿ 32.31 ಲಕ್ಷ ಜನರಿಗೆ ನಿವಾಸಿ ಪ್ರಮಾಣಪತ್ರ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಲೋಕಸಭೆಯಲ್ಲಿ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಜಿ. ಕಿಶನ್ ರೆಡ್ಡಿ ಅವರು 2020ರ ಡಿಸೆಂಬರ್ ವೇಳೆಗೆ ಒಟ್ಟು 35,44,938 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಇವುಗಳಲ್ಲಿ 32,31,353 ಜನರಿಗೆ ನಿವಾಸಿ ಪ್ರಮಾಣಪತ್ರವನ್ನು ಒದಗಿಸಲಾಗಿದೆ ಮತ್ತು ನಿಗದಿತ ದಾಖಳೆಗಳ್ನನು ಸಲ್ಲಿಸದ 2,15438 ಜನರ ಅರ್ಜಿಗಳನ್ನು ತಿರಸ್ಕರಿಸಲಾಗಿದೆ ಎಂದರು. ರಾಜ್ಯದಲ್ಲೇ ದಶಕಗಳಿಂದ ಬದುಕುತ್ತಿದ್ದರೂ ಅಥವಾ ಸೇವೆ ಸಲ್ಲಿಸುತ್ತಿದ್ದರೂ ವಿಧಿ 35ಎ ನಲ್ಲಿದ್ದ ನಿಬಂಧನೆಯಿಂದಾಗಿ ರಾಜ್ಯದ ನಿವಾಸಿಗಳೆಂದು ಪರಿಗಣಿಸಲ್ಪಡದೇ ಇದ್ದ ದೊಡ್ಡ ಸಂಖ್ಯೆಯ ಜನರಿಗೆ ವರದಾನವಾಗಿದೆ.