Quantcast
Channel: News – Vishwa Samvada Kendra
Viewing all articles
Browse latest Browse all 1745

ಅಂತರ್‌ಧರ್ಮೀಯ ವಿವಾಹ ತಡೆಗೆ ಮಾತೃಮಂಡಳಿ ರಚನೆ : ಪೇಜಾವರ ಶ್ರೀಗಳು

$
0
0

ಶಿವಮೊಗ್ಗ: ಅಂತರ್‌ಧರ್ಮೀಯ ವಿವಾಹಕ್ಕೆ ಬ್ರಾಹ್ಮಣ ಯುವತಿಯರ ಟಾರ್ಗೆಟ್‌ ಎಂಬ ಆತಂಕದ ಸುದ್ದಿಗಳು ವರದಿಯಾಗುತ್ತಿವೆ. ಇಂತಹ ಯುವತಿಯರಿಗೆ ಸಮಾಲೋಚನೆಯ ಅಗತ್ಯವಿದ್ದು ಅದಕ್ಕಾಗಿ ಮಾತೃಮಂಡಳಿ ರಚನೆಯಾಗಬೇಕು ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶಿವಮೊಗ್ಗದ ಜಿಲ್ಲಾ ಬ್ರಾಹ್ಮಣ ಮಹಾಸಂಘದ ವತಿಯಿಂದ ನಡೆದ ಶ್ರೀಯುಜುಃಸಂಹಿತಾಯಾಗ ಹಾಗೂ ಸಾಧಕರಿಗೆ ಸಂಮಾನ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಪೂಜ್ಯ ಶ್ರೀಗಳು ಆಶೀವರ್ಚನ ನೀಡಿದರು.

ನಮ್ಮ ಬ್ರಾಹ್ಮಣ ಕುಟುಂಬದ ಹೆಣ್ಣುಮಕ್ಕಳು ಬೇರೆ ಧರ್ಮಿಯರ ಪಾಲಾಗುತ್ತಿದ್ದಾರೆ. ಇದು ಹಿಂದೂ ಧರ್ಮ ಬೆಳವಣಿಗೆಗೆ ತೊಡಕು. ಹೀಗಾಗಿ ನಮ್ಮ ಮನೆಗಳಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಹೇಗಿದೆ? ಅವರು ನಮ್ಮ ಸುಸಂಸ್ಕೃತ ಹಿಂದೂ ಸಮಾಜವನ್ನು ತೊರೆದು ಬೇರೆ ಸಮಾಜದ ಯುವಕರನ್ನು ವರಿಸಲು ಕಾರಣಗಳೇನು? ಎನ್ನುವ ಅಂಶಗಳನ್ನು ತಿಳಿಯಲು ಮಾತೃಮಂಡಳಿ ಅಗತ್ಯವಿದೆ. ಹೆಣ್ಣುಮಕ್ಕಳ ಸಮಸ್ಯೆ ಕೇಳೋದಕ್ಕೆ ಈ ತರಹದ ಒಂದು ಮಂಡಳಿ ಇದ್ದರೆ, ಕರೆಸಿ ಕೂರಿಸಿ ಸಮಸ್ಯೆ ಕೇಳಬಹುದು. ಸಮಸ್ಯೆಗೆ ತಕ್ಕ ಪರಿಹಾರ ಸೂಚಿಸಬಹುದು ಎಂದರು.

ಅಯೋಧ್ಯೆಯ ಶ್ರೀರಾಮ ಮಂದಿರದ ಕುರಿತು ಮಾತನಾಡಿದ  ಶ್ರೀಗಳು, ಶ್ರೀರಾಮ ಮಂದಿರ  ನಮ್ಮ ಪರಂಪರೆಯ ಪ್ರತೀಕ ಆಗಬೇಕು. ನಮ್ಮ ಆಸಕ್ತಿ ಶ್ರೀರಾಮ ಮಂದಿರ ನಿರ್ಮಾಣಕ್ಕಷ್ಟೇ ಆಗದೇ ಮಂದಿರ ನಿರ್ವಹಣೆಯ ಬಗ್ಗೆಯೂ ಆಸಕ್ತರಾಗಿರಬೇಕು ಎಂದರು.


Viewing all articles
Browse latest Browse all 1745

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>