
ಕರ್ನಾಟಕದ ಹೆಮ್ಮೆಯ ವಿಕಲಚೇತನ ಈಜು ಪಟು ನಿರಂಜನ್ ಮುಕುಂದನ್ ಅವರು ಮಾರ್ಚ್ 21, 2021ರಂದು ಮುಕ್ತಾಯಗೊಂಡ ರಾಷ್ಟ್ರೀಯ ವಿಕಲಚೇತನ ಈಜು ಸ್ಪರ್ಧೆಯಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಪದಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ತಂಡ 92 ಪದಕ ಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು. ಮುಕುಂದನ್ ಅವರು ಈಗಾಗಲೇ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಕಲಚೇತನ ಈಜು ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ಧಾರೆ.