
ಭಾರತದ ಅತಿದೊಡ್ಡ ಹಾಕಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಓಡಿಶಾದ ರೂರ್ ಕೆಲಾದಲ್ಲಿ ಶಿಲಾನ್ಯಾಸ ನೆರವೇರಿಸಲಾಗಿದೆ. ಬುಡಕಟ್ಟು ಜನಾಂಗದ ಅಪ್ರತಿಮ ನಾಯಕ ಮತ್ತು ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಬಿರ್ಸಾ ಮುಂಡಾ ಅವರ ಸ್ಮರಣೆಯಲ್ಲಿ ನಿರ್ಮಾಣವಾಗುತ್ತಿರುವ ಈ ಅತ್ಯಾಧುನಿಕ ಕ್ರೀಡಾಂಗಣ ೨೦ ಸಾವಿರಕ್ಕೂ ಹೆಚ್ಚು ಜನ ಪ್ರೇಕ್ಷಕರ ಸಾಮರ್ಥ್ಯ ಹೊಂದಲಿದೆ. ಭಾರತದ ರಾಷ್ಟ್ರೀಯ ಕ್ರೀಡೆಯೂ ಆಗಿರುವ ಹಾಕಿ ಕ್ರೀಡೆಯ ೨೦೨೩ರ ವಿಶ್ವಕಪ್ ಆತಿಥ್ಯವನ್ನು ಬಿರ್ಸಾ ಮುಂಡಾ ಕ್ರೀಡಾಂಗಣ ವಹಿಸಲಿದೆ.
ಈ ಕ್ರೀಡಾಂಗಣವು 120 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಪ್ರತಿಷ್ಠಿತ ಇಂಡಸ್ಟ್ರೀಯಲ್ ಗ್ರೋಥ್ ಕಂಪೆನಿ (IDCO) ವಹಿಸಿಕೊಂಡಿದೆ. ಿದಕ್ಕಾಗಿ ಒಡಿಶಾ ಸರ್ಕಾರ 15 ಎಕರೆ ಜಾಗ ಮೀಸಲಿರಿಸಿದೆ.