Clik here to view.

ಛತ್ತೀಸ್ ಘಡ: ಇತ್ತೀಚೆಗೆ ರಾಯ್‌ಪುರದಲ್ಲಿ ೧೩ ಮಂದಿ ಮಂಗಳಮುಖಿಯರನ್ನು ಕಾನ್ ಸ್ಟೇಬಲ್‌ಗಳಾಗಿ ನೇಮಕ ಮಾಡಿಕೊಳ್ಳುವ ಮೂಲಕವಾಗಿ ಸಮಾಜದಲ್ಲಿ ವಂಚಿತ ತೃತೀಯಲಿಂಗಿಗಳೂ ಆರಕ್ಷಕರಾಗಿ ಸೇವೆ ಸಲ್ಲಿಸಬಹುದು ಎನ್ನುವ ಸಂದೇಶವನ್ನು ಛತ್ತೀಸ್ ಘಡ್ ಪೊಲೀಸರು ನೀಡಿದ್ದಾರೆ. ಹಾಗೆಯೇ ಪೋಲಿಸ್ ಪಡೆಯಲ್ಲಿ ಅವರು ಸಮರ್ಥವಾಗಿ ಕಾರ್ಯನಿರ್ವಹಿಸಬಲ್ಲರು ಎನ್ನುವುದನ್ನು ಸಾಬೀತು ಪಡಿಸಲು ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಕೆಲವು ದಿನಗಳ ತೃತೀಯಲಿಂಗಿ ಮಹಿಳೆಯನ್ನು ಗ್ರಾಮ ಪಂಚಾಯ್ತಿಯ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಆಯ್ಕೆ ಮಾಡಿದ ಘಟನೆ ಕರ್ನಾಟಕದ ಮೈಸೂರಿನಲ್ಲಿ ವರದಿಯಾಗಿತ್ತು.