
ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಒಳನುಸುಳುವಿಕೆ ಪ್ರಕರಣಗಳು ನಡೆದಿವೆ ಎನ್ನುವ ಆತಂಕಕಾರಿ ವಿಷಯವನ್ನು ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ತಿಳಿಸಿದೆ.
ನೇಪಾಳ ಮತ್ತು ಪಾಕಿಸ್ತಾನ ಗಡಿಗಳ್ಲಲಿ 60 ಒಳನುಸುಳುವಿಕೆ ಪ್ರಕರಣಗಳನ್ನು ನಡೆದಿವೆ. ಇಂತಹ ಸವಾಲುಗಳನ್ನು ಎದುರಿಸಲು ಪರಿಣಾಮಕಾರಿ ಕಣ್ಗಾವಲು, ಗುಪ್ತಚರ ವ್ಯವಸ್ಥೆಯನ್ನು ಸುವ್ಯವಸ್ಥಿತಗೊಳಿಸುವುದು, ಪಡೆಗಳ ಸಾಮರ್ಥ್ಯವನ್ನು ಹೆಚ್ಚಿಸುವುದು, ಗಡಿಗಳಲ್ಲಿ ಗಸ್ತು ತಿರುಗುವುದು, ಗಡಿ ಪ್ರದೇಶಗಳಲ್ಲಿ ಸ್ಥಳೀಯ ಜನಸಂಖ್ಯೆಯ ಸಂವೇದನೆ, ವೀಕ್ಷಣಾ ಪೋಸ್ಟ್‌ಗಳ ಸ್ಥಾಪನೆ, ಆಧುನಿಕ ಮತ್ತು ಹೈಟೆಕ್ ಕಣ್ಗಾವಲು ಉಪಕರಣಗಳ ಬಳಕೆ ಇತ್ಯಾದಿಗಳ ಮೂಲಕ ಸರ್ಕಾರ ವಿವಿಧ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಗೃಹ ವ್ಯವಹಾರ ಸಚಿವಾಲಯ ರಾಜ್ಯಸಭೆಗೆ ತಿಳಿಸಿದೆ.
ಕಠಿಣ ಭೂಪ್ರದೇಶದ ಕಾರಣದಿಂದಾಗಿ ಭಾರತ-ಬಾಂಗ್ಲಾ ಗಡಿಯಲ್ಲಿ ಬೇಲಿ ಹಾಕುವ ಕಾರ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.