
೯೦ರ ದಶಕದಲ್ಲಿ ಕಾಶ್ಮೀರದ ಕಣಿವೆಯಿಂದ ಹೊರದಬ್ಬಲ್ಪಟ್ಟವರ ಪೈಕಿ ಸುಮಾರು ೩,೮೦೦ ಜನರು ಕಳೆದ ಕೆಲವು ವರ್ಷಗಳಲ್ಲಿ ಪ್ರಧಾನಮಂತ್ರಿಗಳ ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ನೀಡಲಾದ ಉದ್ಯೋಗವನ್ನು ಪಡೆದುಕೊಂಡು ಕಣಿವೆಗೆ ಮರಳಿದ್ದಾರೆ. 370ನೇ ವಿಧಿಯ ರದ್ದಿನ ನಂತರ 570 ವಲಸೆ ಕಾರ್ಮಿಕರು ಪುನರ್ವಸತಿ ಪ್ಯಾಕೇಜ್ ಅಡಿಯಲ್ಲಿ ಮರಳಿದ್ದು ಅಂತವರ ಪ್ರಮಾಣ ಗಣನೀಯವಾಗಿ ಏರುತ್ತಿದೆ, 2021ರಲ್ಲಿ ಸುಮಾರು 2 ಸಾವಿರ ಜನರು ಮರಳುವ ನಿರೀಕ್ಷೆಯಿದೆ. ಮುಸ್ಲಿಂ ಮೂಲಭೂತವಾದಿಗಳ ದಬ್ಬಾಳಿಕೆಯ ಕಾರಣದಿಂದ ೧೯೯೦ರ ದಶಕದಲ್ಲಿ 44,167 ಕುಟುಂಬಗಳು ಕಾಶ್ಮೀರ ಕಣಿವೆಯ ತಮ್ಮ ಮನೆಮಠಗಳನ್ನು ತ್ಯಜಿಸಿ ಪಲಾಯನ ಗೈದಿದ್ದವು, ಇವುಗಳ ಪೈಕಿ 39,782 ಹಿಂದೂ ಕುಟುಂಬಗಳು. ಇನ್ನೊಂದು ಪ್ರಮುಕ ಬೆಳವಣಿಗೆಯಲ್ಲಿ ಈ ವರ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ಕಳೆದ 16 ವರ್ಷಗಳ ದಾಖಲೆಯನ್ನು ಮುರಿದಿದೆ ಸರ್ಕಾರದ ಪ್ರವಾಸೋದ್ಯಮ ಸಚಿವರು ತಿಳಿಸಿದ್ದಾರೆ.