ಗೋ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ಆಸಕ್ತಿ ನಿಮಗಿದೆಯೇ ?
ಆಸಕ್ತರಿಗೆ ತರಬೇತಿ ನೀಡುವ ಸಲುವಾಗಿ ಸ್ವದೇಶಿ ಜಾಗರಣ ಮಂಚ್ ಇದೇ ಏಪ್ರೀಲ್ 17 ಮತ್ತು 18ರಂದು ಗೋ ಆಧಾರಿತ ಉತ್ಪನ್ನಗಳ ತಯಾರಿಕಾ ಶಿಬಿರವನ್ನು ಆಯೋಜಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯದಲ್ಲಿರುವ ರಾಷ್ಟ್ರೋತ್ಥಾನ ಗೋಶಾಲೆಯಲ್ಲಿ ಈ ಶಿಬಿರ ನಡೆಯಲಿದೆ ಎಂದು ಆಯೋಜಕರು ಸಂವಾದಕ್ಕೆ ತಿಳಿಸಿದ್ದಾರೆ.
ರಾಷ್ಟ್ರೋತ್ಥಾನ ಗೋಶಾಲೆಯ ವ್ಯವಸ್ಥಾಪಕರಾದ ಜೀವನ್ ಕುಮಾರ್ ಮತ್ತು ಖ್ಯಾತ ಆಯುರ್ವೇದಿಕ್ ಪಂಚಗವ್ಯ ಚಿಕಿತ್ಸಾ ತಜ್ಞರಾದ ಡಿ.ಪಿ. ರಮೇಶ್ ಅವರು ತರಬೇತಿ ನೀಡಲಿದ್ದಾರೆ.
ಶುಲ್ಕ : ರೂ. 400 ಮಾತ್ರ
ಹೆಸರನ್ನು ನೋಂದಾಯಿಸುವವರು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9448793280, 9972565174
Clik here to view.
