
ಬೆಂಗಳೂರು, ಏ.8, 2021: ರಾಸಾಯನಿಕಗಳ ಬಳಕೆಯಿಂದ ಭೂಮಿ ಬಂಜರಾಗುವುದನ್ನು ತಪ್ಪಿಸಿ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಅಕ್ಷಯ ಕೃಷಿ ಪರಿವಾರ, ಸಾವಯವ ಕೃಷಿ ಪರಿವಾರ, ಸ್ವದೇಶಿ ಜಾಗರಣ ಮಂಚ್, ಗ್ರಾಮ ವಿಕಾಸ, ವನವಾಸಿ ಕಲ್ಯಾಣ ಸೇರಿದಂತೆ ಹಲವು ಸಂಘಟನೆಗಳು ದೇಶದಾದ್ಯಂತ ‘ಭೂಮಿ ಸಂಪೋಷಣೆ ಮತ್ತು ಸಂರಕ್ಷಣೆ’ ಎಂಬ ಜನಜಾಗೃತಿ ಅಭಿಯಾನವನ್ನು ನಡೆಸಲಿವೆ.
ಈ ಅಭಿಯಾನವು ವಿವಿಧ ಹಂತಗಳಲ್ಲಿ ನಡೆಯಲಿದ್ದು, ಮೊದಲ ಹಂತದ ಅಭಿಯಾನವು ಇದೇ ಯುಗಾದಿಯಂದು, ಏಪ್ರಿಲ್ 13ರಿಂದ ಜುಲೈ 24ರ ವರೆಗೆ ನಡೆಯಲಿದೆ.
ಭೂಮಿ ಸುಪೋಷಣೆಗಾಗಿ ಕೃಷಿಕರ, ಸಾಮಾನ್ಯ ಜನರ ಸಂಪರ್ಕ ಮಾಡುವುದು, ಈಗಾಗಲೇ ಸುಪೋಷಣೆಯಲ್ಲಿ ತೊಡಗಿರುವ ಕೃಷಿಕರಿಂದ ಇನ್ನಷ್ಟು ಕಲಿಯುವುದು, ಆಸಕ್ತರನ್ನು ಪ್ರೇರೇಪಿಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿದೆ.
ತನ್ನಿಮಿತ್ತ, ಇದೇ ಏಪ್ರಿಲ್ 9, 2021 (ನಾಳೆ) ರಂದು, ಬೆಳಿಗ್ಗೆ 9 ಗಂಟೆಗೆ ಪತ್ರಿಕಾ ಗೋಷ್ಠಿ ಆಯೋಜಿಸಲಾಗಿದೆ.
ಅಭಿಯಾನದ ರಾಷ್ಟ್ರೀಯ ಸಮಿತಿಯ ಸದಸ್ಯರಾದ ಆ. ಶ್ರೀ. ಆನಂದ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಭಿಯಾನದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.
online ಪತ್ರಿಕಾಗೋಷ್ಠಿ webex ಮೂಲಕ ನಡೆಯಲಿದೆ.
ವಿವರಗಳಿಗಾಗಿ ಸಂಪರ್ಕಿಸಿ : 98453 42972