ಕೊರೋನಾ ಸೋಂಕಿತರಿಗೆ ನೆರವಾಗಲು ದಿಟ್ಟ ಹೆಜ್ಜೆಯಿಟ್ಟಿರುವ ರೈಲ್ವೆ ಸಚಿವಾಲಯವು 64 ಸಾವಿರ ಹಾಸಿಗೆ ವ್ಯವಸ್ಥೆ ಕಲ್ಪಿಸಬಹುದಾದ 4,000 ಪ್ರತ್ಯೇಕ ಬೋಗಿಗಳನ್ನು ಒದಗಿಸಲು ಮುಂದಾಗಿದೆ. ರೈಲ್ವೇ ಇಲಾಖೆ ಈಗಾಗಲೇ ಕೊವೀಡ್ ಸೊಂಕಿತರ ಆರೈಕೆಗಾಗಿ 2900ಕ್ಕೂ ಅಧಿಕ ಹಾಸಿಗೆಗಳ ಸಾಮರ್ಥ್ಯವುಳ್ಳ 191 ಬೋಗಿಗಳನ್ನು ವಿವಿಧ ರಾಜ್ಯ ಸರ್ಕಾರಗಳಿಗೆ ನೀಡಿದೆ.
ಭಾರತ ಸರ್ಕಾರದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ದಿ ಸಂಸ್ಥೆ (ಡಿಆರ್‌ಡಿಓ) ದೇಶಾದ್ಯಂತ 500 ವೈದ್ಯಕೀಯ ಬಳಕೆಯ ಆಕ್ಸಿಜನ್ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲಿದೆ. ಇದು ಆಸ್ಪತ್ರೆಗಳಲ್ಲಿ ಸಕಾಲಕ್ಕೆ ಆಮ್ಲಜನಕ ಪೂರೈಕೆಗೆ ಸಹಕಾರಿಯಾಗಲಿದೆ. ಮೂರು ತಿಂಗಳೊಳಗೆ ಘಟಕಗಳು ಅಸ್ತಿತ್ವಕ್ಕೆ ಬರಲಿದ್ದು, ಪಿಎಂ ಕೇರ್ ಫಂಡ್ ಆರ್ಥಿಕ ನೆರವು ನೀಡಲಿದೆ.
Clik here to view.

ಜನರಿಗೆ ಆಕ್ಸಿಜನ್ ಸಿಗುವಂತಾಗಲು ತನ್ನ ಉತ್ಪಾದನಾ ಘಟಕ ಮುಚ್ಚಿದ ಮಾರುತಿ: ದೇಶದಲ್ಲಿ ಮೆಡಿಕಲ್ ಉಪಯೋಗಕ್ಕೆ Oxygen gas ಲಭ್ಯವಾಗುವಂತೆ ಮಾ ಡುವ ಸಲುವಾಗಿ ಮಾರುತಿ ಸುಝುಕಿ ಗುಜರಾತ್ ಮತ್ತು ಹರ್ಯಾಣದಲ್ಲಿರುವ ತನ್ನ ಉತ್ಪಾದನಾ ಘಟಕವನ್ನು ಮುಚ್ಚಿದೆ.