
ಕೊರೋನಾ ಸವಾಲನ್ನು ಎದುರಿಸಲು ಧನಾತ್ಮಕತೆ ಸೃಷ್ಟಿಸುವ ನಿಟ್ಟಿನಲ್ಲಿ ಕೋವಿಡ್ ರೆಸ್ಪಾನ್ಸ್ ಟೀಮ್ (ಸಿಆರ್‌ಟಿ ಮೇ 11ರಿಂದ ‘ಪಾಸಿಟಿವಿಟಿ ಅನ್ಲಿಮಿಟೆಡ್: ಹಮ್ ಜೀತೆಂಗೆ’ ಕಾರ್ಯಕ್ರಮ ಸರಣಿಯನ್ನು ಆಯೋಜಿಸಿದೆ.
ಸಮಾಜದಲ್ಲಿ ಧನಾತ್ಮಕತೆಯನ್ನು ಪಸರಿಸುವ ಮೂಲಕ ಸಮಾಜದ ಮನೋಬಲ ಹೆಚ್ಚಿಸಲು ದೇಶದ ಧಾರ್ಮಿಕ, ಆಧ್ಯಾತ್ಮಿಕತೆ, ಉದ್ಯಮ, ಸಮಾಜಸೇವೆ ಮತ್ತು ಸಾಮಾಜಿಕ ಸಂಘಟನೆಗಳ ಪ್ರಮುಖರನ್ನೊಳಗೊಂಡ ಕೋವಿಡ್ ರೆಸ್ಪಾನ್ಸ್ ಟೀಮ್ (ಸಿಆರ್‌ಟಿ) ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಈ ಆನ್ ಲೈನ್ ಉಪನ್ಯಾಸ ಸರಣಿಯನ್ನು ಆಯೋಜಿಸಿದೆ.
ಉಪನ್ಯಾಸ ಸರಣಿಯು ಮೇ 11 ರಿಂದ ಪ್ರಾರಂಭವಾಗಲಿದ್ದು 15ರ ವರೆಗೆ ನಡೆಯಲಿದೆ. ಈ ಉಪನ್ಯಾಸ ಸರಣಿಯಲ್ಲಿ ಸದ್ಗುರು ಜಗ್ಗಿ ವಾಸುದೇವ್ , ಪೂಜ್ಯ ಆಚಾರ್ಯರಾದ ಪ್ರಮಾಣ ಸಾಗರ್, ಶ್ರೀ ಶ್ರೀ ರವಿಶಂಕರ್, ಅಜೀಮ್ ಪ್ರೇಮ್ ಜಿ, ಶಂಕರಚಾರ್ಯ ವಿಜಯೇಂದ್ರ ಸೋನಾಲ್ ಮಾನ್ಸಿಂಗ್ (ಪದ್ಮವಿಭೂಷಣ್), ಆಚಾರ್ಯ ವಿದ್ಯಾಸಾಗರ್, ಶ್ರೀ ಮಹಂತ್ ಸಂತ ಜ್ಞಾನ ದೇವ್ ಸಿಂಗ್ (ಪಂಚಾಯತಿ ಅಖಾಡಾ- ನಿರ್ಮಲ್) ಭಾರತೀಯ ಸಮಾಜವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಉಪನ್ಯಾಸ ಸರಣಿಯು ಮೇ 15 ರಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರ ಭಾಷಣದೊಂದಿಗೆ ಮುಕ್ತಾಯಗೊಳ್ಳಲಿದೆ.
ಉಪನ್ಯಾಸಗಳನ್ನು ಪ್ರತಿದಿನ ಸಂಜೆ 4:30 ರಿಂದ ಸಂಜೆ 5 ರವರೆಗೆ (facebook.com/VishwaSamvadKendraBharat ಮತ್ತು youtube.com/VishwaSamvadKendraBharat) ಡಿಜಿಟಲ್ ಮಾಧ್ಯಮ ವೇದಿಕೆಗಳ ಮೂಲಕ ಪ್ರಸಾರ ಮಾಡಲಾಗುತ್ತದೆ.
ಭಾಷಣದ ವೇಳಾಪಟ್ಟಿಯನ್ನು ಈ ರೀತಿ ಇದೆ.
“ಪಾಸಿಟಿವಿಟಿ ಅನ್‌ಲಿಮಿಟೆಡ್” 11-15 ಮೇ (ಪ್ರತಿದಿನ ಸಂಜೆ 4.30-5 ರ ವರೆಗೆ).
11 ಮೇ ಸಂಜೆ 4: 30 ಕ್ಕೆ
1. ಸದ್ಗುರು ಜಗ್ಗಿ ವಾಸುದೇವ್
2. ಪೂಜ್ಯ ಜೈನ ಮುನಿಶ್ರೀ ಆಚಾರ್ಯ ಪ್ರಮಾಣ ಸಾಗರ್
12 ಮೇ ಸಂಜೆ 4: 30 ಕ್ಕೆ
1. ಶ್ರೀ ಶ್ರೀ ರವಿಶಂಕರ್ ಗುರೂಜಿ
2. ಶ್ರೀ ಅಜೀಮ್ ಪ್ರೇಮ್ ಜೀ, ಪ್ರಸಿದ್ಧ ಉದ್ಯಮಿ ಮತ್ತು ಸಮಾಜ ಸೇವಕ
13 ಮೇ ಸಂಜೆ 4: 30 ಕ್ಕೆ
1 ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ
2. ಸೋನಾಲ್ ಮಾನ್ಸಿಂಗ್
14 ಮೇ ಸಂಜೆ 4: 30 ಕ್ಕೆ
1. ಜೈನ ಮುನಿ ಆಚಾರ್ಯ ವಿದ್ಯಾಸಾಗರ್ ಜಿ ಮಹಾರಾಜ್
2. ಪೂಜ್ಯ ಶ್ರೀ ಮಹಂತ್ ಸಂತ ಜ್ಞಾನ ದೇವ್ ಸಿಂಘ್ ಜಿ (ಶ್ರೀ ಪಂಚಾಯತಿ ಅಖಾಡಾ- ನಿರ್ಮಲ್)
15 ಮೇ ಸಂಜೆ 4: 30 ಕ್ಕೆ
ಡಾ. ಮೋಹನ್ ಭಾಗವತ್
ʼಪ್ರತಿದಿನ 30 ನಿಮಿಷಗಳಿಗಿಂತ ಹೆಚ್ಚು ಕಾಲ ‘ಪಾಸಿಟಿವಿಟಿ ಅನ್‌ಲಿಮಿಟೆಡ್’ ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಆನ್‌ಲೈನ್ ವ್ಯಾಖ್ಯಾನ ಸರಣಿಯು ಆಧ್ಯಾತ್ಮಿಕತೆ, ಧಾರ್ಮಿಕತೆ, ಮಾನಸಿಕ ಆರೋಗ್ಯ, ದೈಹಿಕ ಶಕ್ತಿಯನ್ನು ಹೆಚ್ಚಿಸುವವರೆಗಿನ ಜೀವನದ ವಿವಿಧ ಆಯಾಮಗಳ ಬಗ್ಗೆ ಧನಾತ್ಮಕ ಚಿಂತನೆಯನ್ನು ಒದಗಿಸಲಿದೆʼ ಎಂದು ಕೋವಿಡ್ ಪ್ರತಿಕ್ರಿಯೆ ತಂಡದ ಸಂಚಾಲಕರಾದ ಲೆಫ್ಟಿನೆಂಟ್ (ನಿವೃತ್ತ) ಗುರ್ಮಿತ್ ಸಿಂಗ್ ಹೇಳಿದ್ದಾರೆ.
ಭಯ, ಹತಾಶತೆ, ಅಸಹಾಯಕತೆ ಮತ್ತು ನಕಾರಾತ್ಮಕತೆಯನ್ನು ಬದಿಗಿಟ್ಟು, ಕೋವಿಡ್ 19 ರ ನಂತರ ಭಾರಿ ಸಾಮಾಜಿಕ ಬದಲಾವಣೆಗಳೊಂದಿಗೆ ಮುನ್ನಡೆಯಲು ಜನರನ್ನು ಸಜ್ಜುಗೊಳಿಸುವಂತೆ ಪ್ರೇರೇಪಿಸುವುದು ಪಾಸಿಟಿವಿಟಿ ಅನ್‌ಲಿಮಿಟೆಡ್ ಟಾಕ್ ಸರಣಿಯ ಹಿಂದಿನ ಆಲೋಚನೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ಭಾಷಣಗಳನ್ನು ದೇಶ ಮತ್ತು ಪ್ರಪಂಚದಾದ್ಯಂತದ 100 ಕ್ಕೂ ಹೆಚ್ಚು ಸಮಾನ ಮನಸ್ಕ ಸುದ್ದಿ ಪೋರ್ಟಲ್‌ಗಳ ಮೂಲಕ ಮತ್ತು ಅನೇಕ ಪ್ರಮುಖ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರಸಾರ ಮಾಡಲಾಗುತ್ತದೆ.