Quantcast
Channel: News – Vishwa Samvada Kendra
Viewing all articles
Browse latest Browse all 1745

ಜಗತ್ತಿನ ಶತಮಾನದ ಮಹಾದಾನಿ ‘ಜೆಮ್‌ಶೆಡ್‌ಜಿ ಟಾಟಾ’

$
0
0

ಭಾರತದ ಖ್ಯಾತ ಉದ್ಯಮಿಗಳಲ್ಲೊಬ್ಬರಾಗಿದ್ದ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡ ಅತಿದೊಡ್ಡ ದಾನಿ ಎಂದು ಹರೂನ್ ಮತ್ತು ಎಡೆಲ್‌ಗಿವ್ ಪ್ರತಿಷ್ಠಾನಗಳು ತಿಳಿಸಿವೆ.

ಈ ಎರಡು ಸಂಸ್ಥೆಗಳು ಜೊತೆಗೂಡಿ ಜಗತ್ತಿನ ಐವತ್ತು ಜನ ಅತಿ ದೊಡ್ಡ ದಾನಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದವು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹರೂನ್‌ ಸಂಸ್ಥೆಯ ಮುಖ್ಯ ಸಂಶೋಧಕ ಹಾಗೂ ಅಧ್ಯಕ್ಷ ರುಪರ್ಟ್ ಹೂಗ್‌ವರ್ಫ್ ಅವರು “‘ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಅಮೆರಿಕ ಹಾಗೂ ಯುರೋಪಿನ ದಾನಿಗಳು ಕಳೆದ ಶತಮಾನದಲ್ಲಿ ಹೆಚ್ಚು ಪ್ರಭಾವಿಗಳಾಗಿದ್ದಿರಬಹುದು. ಆದರೆ, ಭಾರತದ ಟಾಟಾ ಸಮೂಹದ ಸ್ಥಾಪಕ ಆಗಿರುವ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡ ಅತಿದೊಡ್ಡ ದಾನಿ” ಎಂದರು.

ಜೆಮ್‌ಶೆಡ್‌ಜಿ ಟಾಟಾ ಅವರು 102 ಬಿಲಿಯನ್ ಡಾಲರ್ (ರೂ. 7.56 ಲಕ್ಷ ಕೋಟಿ) ಮೊತ್ತದ ಹಣವನ್ನು ದಾನವಾಗಿ ನೀಡಿದ್ದಾರೆ. ಭಾರತದಲ್ಲಿ ಟಾಟಾ ಉದ್ಯಮ ಸಮೂಹವನ್ನು ಸ್ಥಾಪಿಸಿದ ಜೆಮ್‌ಶೆಡ್‌ಜಿ ಟಾಟಾ ಅವರು 1892ರಲ್ಲಿಯೇ ದಾನ ನೀಡಲು ಆರಂಭಿಸಿದ್ದರು. ಮತ್ತು ತಮ್ಮ ಗಳಿಕೆಯ ಭಾಗವನ್ನು ದಾನವಾಗಿ ನೀಡುವುದಕ್ಕೆ ವಿಶೇಷ ಆಸ್ಥೆ ವಹಿಸುತ್ತಿದ್ದರು.

ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಜೆಮ್‌ಶೆಡ್‌ಜಿ ಅವರು ಉದ್ಯಮಿಗಳಾದ ಬಿಲ್ ಗೇಟ್ಸ್, ವಾರೆನ್ ಬಫೆಟ್, ಜಾರ್ಜ್ ಸಾರೋಸ್ ಮತ್ತು ಜಾನ್ ಡಿ. ರಾಕ್‌ಫೆಲ್ಲರ್ ಅವರಿಗಿಂತ ಮುಂದಿದ್ದಾರೆ.

ದಾನಿಗಳ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಇನ್ನೊಬ್ಬ ಭಾರತೀಯರೆಂದರೆ ವಿಪ್ರೊ ಕಂಪನಿ ಅಜೀಂ ಪ್ರೇಮ್‌ಜಿ ಅವರು. ಐವತ್ತು ಜನ ದಾನಿಗಳ ಪಟ್ಟಿಯಲ್ಲಿ 38 ಜನ ಅಮೆರಿಕದವರು, ಐವರು ಬ್ರಿಟನ್ನಿನವರು, ಮೂವರು ಚೀನಾ ದೇಶದವರು.


Viewing all articles
Browse latest Browse all 1745

Trending Articles