
ಕೊರೋನಾ 2ನೇ ಅಲೆ ವ್ಯಾಪಿಸಿರುವುದರಿಂದ ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಉತ್ಪಾದನೆ ಹೆಚ್ಚಿಸುವ ಸಲುವಾಗಿ ನೆರವು ನೀಡುವಂತೆ ಭಾರತದ ಕೊರೋನಾ ಲಸಿಕೆ ನಿರ್ಮಾಣ ಸಂಸ್ಥೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.
ುತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಭಾರತದ ಕೊರೋನಾ ಲಸಿಕೆ ನಿರ್ಮಾಣ ಸಂಸ್ಥೆಗಳಾದ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ರೂ. 100 ಕೋಟಿ ನೆರವು ನೀಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಕೋರಿದೆ. ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ಮೌಖಿಕವಾಗಿ ಬೇಡಿಕೆ ಸಲ್ಲಿಸಿದೆ.
ಪ್ರಸ್ತುತ ಭಾರತ್ ಬಯೋಟೆಕ್ ಸಂಸ್ಥೆ ಮಾಸಿಕ 40 ಲಕ್ಷ ಡೋಸ್ ಲಸಿಕೆ ಉತ್ಪಾದಿಸುತ್ತಿದ್ದು, ಸೀರಂ ಸಂಸ್ಥೆ 2022ರ ಮಾರ್ಚ್ ತಿಂಗಳಾಂತ್ಯಕ್ಕೆ ಮಾಸಿಕ 10 ಕೋಟಿ ಡೋಸ್ ಉತ್ಪಾದಿಸುವ ಗುರಿ ಹಾಕಿಕೊಂಡಿದೆ.
ಸುರಕ್ಷಾ ನಿಧಿ: ಭಾರತ ಸರ್ಕಾರ ಕೂಡಾ ಕೊರೋನಾ ಲಸಿಕೆ ನಿರ್ಮಾಣಕ್ಕೆ ವಿಶೇಷ ಆದ್ಯತೆ ನೀಡಿದ್ದು, ಕನಿಷ್ಠ 5-6 ಕೋವಿಡ್ ಲಸಿಕೆ ಅಭಿವೃದ್ಧಿಪಡಿಸಿ, ಅದನ್ನು ಅನುಮೋದನೆ ಹಂತಕ್ಕೆ ತಲುಪಿಸಿ, ಮಾರುಕಟ್ಟೆಬಿಡುಗಡೆ ಮಾಡಲು ಪ್ರಯತ್ನಶೀಲಾವಾಗಿದೆ. ಇದಕ್ಕೆ ನೆರವಾಗುವ ಸಲುವಾಗಿ ಕೇಂದ್ರ ಸರ್ಕಾರ 2020ರ ನವೆಂಬರ್‌ನಲ್ಲಿ ಕೋವಿಡ್ ಸುರಕ್ಷಾ ನಿಧಿ ಸ್ಥಾಪಿಸಿರುವುದನ್ನು ಇಲ್ಲಿ ಗಮನಿಸಬಹುದು.
ಈಗಾಗಲೇ 70ಕ್ಕೂ ಅಧಿಕ ದೇಶಗಳಿಗೆ ಲಸಿಕೆ ವಿತರಿಸಿದ ಹೆಮ್ಮೆ ಭಾರತಕ್ಕಿದೆ.